ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್ 7ರಂದು 'ಹಳ್ಳಿ ಮನೆ ರೊಟ್ಟಿಸ್' ಶಿಲ್ಪಾಗೆ ಮಹೀಂದ್ರಾದಿಂದ ಪುರಸ್ಕಾರ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 26: 'ಹಳ್ಳಿ ಮನೆ ರೊಟ್ಟಿಸ್' ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡು ಇತರರಿಗೂ ಮಾದರಿಯಾಗಿರುವ ಮಂಗಳೂರಿನ ಶಿಲ್ಪಾ ಅವರನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯು ಮಹಿಳಾ ಸಾಧಕಿ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ಈ ಕುರಿತು ಕಂಪೆನಿಯಿಂದ ಶಿಲ್ಪಾ ಅವರಿಗೆ ದೂರವಾಣಿ ಕರೆ ಬಂದಿದೆ. ಮಾರ್ಚ್ 7ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಂದು, ಪುರಸ್ಕಾರ ಸ್ವೀಕರಿಸುವಂತೆ ತಿಳಿಸಲಾಗಿದೆ. ಅಲ್ಲದೆ ಶಿಲ್ಪಾ ಅವರಿಗೆ ಪ್ರಯಾಣಕ್ಕಾಗಿ ವಿಮಾನದ ಟಿಕೆಟ್ ಅನ್ನು ಅಂಚೆ ಮೂಲಕ ಮನೆ ವಿಳಾಸಕ್ಕೆ ಕಳುಹಿಸಲಾಗಿದೆ .

ಮಂಗಳೂರಿನ ಶಿಲ್ಪಾರ ಯಶೋಗಾಥೆ ಮೆಚ್ಚಿದ ಆನಂದ್ ಮಹೀಂದ್ರಮಂಗಳೂರಿನ ಶಿಲ್ಪಾರ ಯಶೋಗಾಥೆ ಮೆಚ್ಚಿದ ಆನಂದ್ ಮಹೀಂದ್ರ

ದೆಹಲಿಯಲ್ಲಿ ತಂಗಲು ವಸತಿ ವ್ಯವಸ್ಥೆಯನ್ನು ಶಿಲ್ಪಾ ಅವರಿಗೆ ಕಲ್ಪಿಸಲಾಗಿದೆ. ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 16 ಮಹಿಳೆಯರನ್ನು ಎಂ ಅಂಡ್ ಎಂ ಕಂಪೆನಿ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು, ಅದರಲ್ಲಿ ಹಳ್ಳಿ ಮನೆ ರೊಟ್ಟಿ ಶಿಲ್ಪಾ ಕೂಡ ಒಬ್ಬರು. ಶಿಲ್ಪಾ ಅವರ ಹಳ್ಳಿ ಮನೆ ರೊಟ್ಟಿಸ್ ಬೀದಿ ಬದಿ ವ್ಯಾಪಾರದ ಬಗ್ಗೆ ಸಾಕ್ಷ್ಯಚಿತ್ರ ಮಾಡಿ, ಅದನ್ನು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಸಾರ ಮಾಡುವ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಬದುಕಿನೊಂದಿಗೆ ಬಡಿದಾಡಿದ ಶಿಲ್ಪಾಗೆ ಮಹಿಂದ್ರಾ ಉಡುಗೊರೆಬದುಕಿನೊಂದಿಗೆ ಬಡಿದಾಡಿದ ಶಿಲ್ಪಾಗೆ ಮಹಿಂದ್ರಾ ಉಡುಗೊರೆ

Felicitation to Mangaluru Shilpa by Mahindra and Mahindra on March 7th

ಹಾಸನ ಮೂಲದ ಶಿಲ್ಪಾ ಮಂಗಳೂರಿಗೆ ಬಂದು, ಹಲವಾರು ಕಷ್ಟಗಳ ನಡುವೆ ಬೀದಿ ಬದಿ ರೊಟ್ಟಿ ವ್ಯಾಪಾರ ಆರಂಭಿಸಿದ್ದರು. ಶಿಲ್ಪಾ ಅವರ ಹಳ್ಳಿಮನೆ ರೊಟ್ಟಿಸ್ ಮೊಬೈಲ್ ಕ್ಯಾಂಟೀನ್ ಸಾಧನೆಯ ಬಗ್ಗೆ ಮಾಧ್ಯಮಗಳ ಬಂದ ವರದಿಯನ್ನು ನೋಡಿ ಸ್ಪಂದಿಸಿದ ಮಹೀಂದ್ರಾ ಕಂಪೆನಿಯ ಸಿಇಒ ಆನಂದ್ ಮಹೀಂದ್ರಾ ಇತ್ತೀಚೆಗೆ ಶಿಲ್ಪಾ ಅವರಿಗೆ ತಮ್ಮ ಕಂಪೆನಿಯ ಪಿಕಪ್ ವಾಹನವೊಂದನ್ನು ಉಡುಗೊರೆಯಾಗಿ ನೀಡಿದ್ದರು.

English summary
Mahindra and Mahindra company recognised Mangaluru 'Halli Mane Rotti's' Shilpa achievement and she will be felicitated by company on March 7th in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X