ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಪಜೀರ್ ಗುಡ್ಡದಲ್ಲಿ ರಾತ್ರಿಯಾದರೆ ನಿಗೂಢ ಬೆಳಕು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 24: ರಾತ್ರಿ 7 ಗಂಟೆ ಆದರೆ ಸಾಕು, ಇಲ್ಲಿನ ನಿವಾಸಿಗಳಿಗೆ ಆತಂಕ ಶುರುವಾಗುತ್ತದೆ. ರಾತ್ರಿ ಹೊತ್ತು ಇಲ್ಲಿನ ಗುಡ್ಡದಲ್ಲಿ ಅದೆಂಥದ್ದೋ ವಿಚಿತ್ರ ಬೆಳಕು. ಅದೂ ಪ್ರಖರವಾಗಿರುತ್ತದೆ. ಕಳೆದ ಒಂದು ವಾರದಿಂದ ಹೀಗೆ ಪ್ರಖರ ಬೆಳಕು ಕಾಣುತ್ತಿರುವುದು ಪಜಿರ್ ಗುಡ್ಡದಲ್ಲಿ. ಸ್ಥಳೀಯರಲ್ಲಿ ಕುತೂಹಲ, ಆತಂಕ ಎರಡೂ ಉಂಟುಮಾಡಿದೆ.

ಗುಡ್ಡದ ಆಸುಪಾಸಿನಲ್ಲೇನೋ ಮನೆಗಳಿವೆ. ಆದರೆ ಗುಡ್ಡದಲ್ಲಿ ಯಾವ ಮನೆಯೂ ಇಲ್ಲ. ಆದರೆ ಒಂದೆರಡು ನಿರ್ದಿಷ್ಟ ಜಾಗದಲ್ಲಿ ಬೆಳಕು ಕಾಣುವುದು ನಿಂತಿಲ್ಲ. ಸ್ಥಳೀಯರು ಈ ಬಗ್ಗೆ ಏನೇನೋ ಮಾತನಾಡಿಕೊಳ್ಳುತ್ತಿದ್ದಾರೆ ವಿನಾ ಗುಡ್ಡದ ಮೇಲೆ ಹೋಗಿ ಏನಿದು ಬೆಳಕು ಎಂದು ತಿಳಿಯಲು ಪ್ರಯತ್ನಿಸಿಲ್ಲ.

Fear erupts at konaje due to flash light at pajir

ಇನ್ನು ಕೆಲ ಯುವಕರು ಈ ನಿಗೂಢ ಭೇದಿಸಲು ಪ್ರಯತ್ನಿಸಿದರೆ ಅದಕ್ಕೆ ಹಿರಿಯರು ಅವಕಾಶ ನೀಡಿಲ್ಲ. ಕೆಲವು ದಿನಗಳ ಹಿಂದೆ ಗುಡ್ಡದಲ್ಲಿದ್ದ ಸಣ್ಣ ಮರಗಳನ್ನು ಕಡಿಯಲಾಗಿದೆ. ಆ ಸಂದರ್ಭದಲ್ಲಿ ಹಾವೊಂದು ಕಾಣಸಿಕ್ಕಿದೆ ಎಂಬ ಮಾಹಿತಿಯೂ ಇದೆ. ಗುಡ್ಡದಲ್ಲಿ ಹಾವಿದ್ದು, ಅದರ ಮಾಣಿಕ್ಯ ರಾತ್ರಿ ಹೊಳೆಯುತ್ತಿದೆ ಎಂದು ನಂಬಿದವರೂ ಇದ್ದಾರೆ. ಕೆಲವು ಮಂದಿ ಏನೋ ಒಂದು ಕಾಟ ಆ ಭಾಗದಲ್ಲಿ ಇದೆ ಎನ್ನುತ್ತಾರೆ.

ಆದರೆ, ಗುಡ್ಡದಲ್ಲಿ ಮುಳ್ಳು, ಕಡಿದ ಸಸಿಗಳ ಅಡಿಭಾಗ ಉಳಿದುಕೊಂಡಿರುವುದರಿಂದ ರಾತ್ರಿ ಹೋಗಲು ಆತಂಕ ಪಡುತ್ತಿದ್ದಾರೆ. ಹಗಲಲ್ಲಿ ಹೋಗಿ ಪರಿಶೀಲನೆ ನಡೆಸಿದವರು ಏನೂ ಇಲ್ಲ ಎನ್ನುವ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಗುಡ್ಡದ ಬೆಳಕು ಹತ್ತಾರು ಪ್ರಶ್ನೆಗಳು, ಕುತೂಹಲದ ಆತಂಕಕ್ಕೂ ಕಾರಣವಾಗಿದೆ.

English summary
Fear erupts at konaje due to some unwanted flash light at pajir. People are afraid to move out of the house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X