ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಳುನಾಡಿನ ದಿರಿಸಿನಲ್ಲಿ ಕ್ಯಾಟ್ ವಾಕ್ ಮಾಡಿದ ಮುಡಿಪು ಗ್ರಾಮದ ರೈತರು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 15: ಶೀರ್ಷಿಕೆ ನೋಡಿ ರೈತರೇಕೆ ಕೃಷಿ ಕೆಲಸ ಮಾಡುವುದು ಬಿಟ್ಟು, ಕ್ಯಾಟ್ ವಾಕ್ ಮಾಡಿದರು ಎಂದು ಆಶ್ಚರ್ಯವಾಗಬಹುದು. ಆದರೆ ಅವರು ಹಾಗೆ ಮಾಡೆಲ್ ಗಳ ರೀತಿ ಪೋಸ್ ಕೊಡಲು ಕಾರಣವಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಮಿಫ್ಟ್ ಕಾಲೇಜಿನ ಸಹಯೋಗದೊಂದಿಗೆ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಕೃಷಿಕರ ಫ್ಯಾಶನ್ ಶೋ ಜರುಗಿತು. ಈ ಹಿನ್ನೆಲೆಯಲ್ಲಿ ಮುಡಿಪು ಗ್ರಾಮದ 20 ಜನ ರೈತರು ವೃತ್ತಿಪರ ಮಾಡೆಲ್ ಗಳಂತೆ ತುಳು ಸಂಪ್ರದಾಯದ ಉಡುಗೆ-ತೊಡುಗೆಗಳೊಂದಿಗೆ ಕ್ಯಾಟ್ ವಾಕ್ ಮಾಡಿ ಜನ ಮನ್ನಣೆ ಗಳಿಸಿದರು.

ಮಿಸೆಸ್ ಯೂನಿವರ್ಸಲ್‌ ಗೆ ಉಡುಪಿಯ ಡಾ.ಪದ್ಮಾ ಗಡಿಯಾರ್ ಆಯ್ಕೆಮಿಸೆಸ್ ಯೂನಿವರ್ಸಲ್‌ ಗೆ ಉಡುಪಿಯ ಡಾ.ಪದ್ಮಾ ಗಡಿಯಾರ್ ಆಯ್ಕೆ

ಅಷ್ಟೇ ಅಲ್ಲ, ಮಿಫ್ಟ್ ವಿದ್ಯಾರ್ಥಿಗಳೇ ತಯಾರಿಸಿದ 50 ಕ್ಕೂ ಮಿಕ್ಕಿದ ಗಾರ್ಮೆಂಟ್ ಗಳನ್ನು ಧರಿಸಿ ಫ್ಯಾಶನ್ ಶೋ ಜರುಗಿತು.

Farmers fashion show was held in Mangaluru

 ಫ್ಯಾಷನ್ ಕೊರಿಯೋಗ್ರಾಫರ್ ತುಳುನಾಡಿನ ದೈವಪಾತ್ರಿ ಆದ ಕಥೆ ಫ್ಯಾಷನ್ ಕೊರಿಯೋಗ್ರಾಫರ್ ತುಳುನಾಡಿನ ದೈವಪಾತ್ರಿ ಆದ ಕಥೆ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ತುಳು ಕೃಷಿ ಸಂಪ್ರದಾಯವನ್ನು ರಾಂಪ್ ಮೇಲೆ ತರುವ ಮೂಲಕ ಆಧುನಿಕ ಜನತೆಗೆ ಭಾರತದ ಕೃಷಿ ಜೀವನದ ಪರಿಚಯ ಮಾಡಿಕೊಡಲು ಸಾಧ್ಯವಾಗುತ್ತದೆ ಮತ್ತು ಕೃಷಿ ಜೀವನ ಉದಾತ್ತತೆಗೆ ಜನ ಗೌರವ ಸಿಗುವಂತಾಗುತ್ತದೆ ಎಂದರು.

Farmers fashion show was held in Mangaluru

 ಬಾಯ್ತುಂಬ ಕವಳ, ತಲೆ ಮೇಲೆ ಕೊಪ್ಪೆ!ನಕ್ಕು ನಲಿಸುವ ಹವ್ಯಕ ಫ್ಯಾಷನ್ ಶೋ! ಬಾಯ್ತುಂಬ ಕವಳ, ತಲೆ ಮೇಲೆ ಕೊಪ್ಪೆ!ನಕ್ಕು ನಲಿಸುವ ಹವ್ಯಕ ಫ್ಯಾಷನ್ ಶೋ!

ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧಕರಾದ ಅಡ್ಯಾರು ಪ್ರದೀಪ್ ಕುಮಾರ್ ಶೆಟ್ಟಿ, ಬಿ.ಎಸ್. ಗಾಂಭೀರ, ಸತ್ಯನಾರಾಯಣ ಶೆಟ್ಟಿ ಬೆಳ್ಳಾರೆ, ದೇವಪ್ಪ ಶೇಖ, ಪೀಳ್ಯಡ್ಕ, ಶಿವ ಎಲ್. ಪೂಜಾರಿ ದೆಂಗಾರು ಇವರುಗಳನ್ನು ಸನ್ಮಾನಿಸಲಾಯಿತು.

English summary
In Mangaluru, Farmers' fashion show was held in association with MIFT College under the aegis of the Karnataka Tulu Sahitya Academy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X