• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರಸರನೆ ಅಡಿಕೆ ಮರವೇರಲು ಬೈಕ್ ಆವಿಷ್ಕರಿಸಿದ ಬಂಟ್ವಾಳದ ಕೃಷಿಕ

|

ಮಂಗಳೂರು, ಜೂನ್ 15: ರಸ್ತೆಯಲ್ಲಿ ಶರವೇಗದಲ್ಲಿ ಸಾಗುವ ಬೈಕ್ ಅಡಿಕೆ ಮರವೇರಿದರೆ ಹೇಗಿರುತ್ತೆ? ಬೈಕ್ ಮರ ಏರುವುದಾ? ಎಂದು ಆಶ್ಚರ್ಯ ಪಡಬೇಡಿ. ಇದು ನಿಜ. ಅಡಿಕೆ ಮರವೇರುವ ಬೈಕೊಂದು ದಕ್ಷಿಣ ಕನ್ನಡದಲ್ಲಿ ಸಿದ್ಧವಾಗಿದೆ. ಈ ಬೈಕ್ ‌ನಂತಹ ಸಾಧನದಲ್ಲಿ ಕುಳಿತು ಸೇಫ್ಟಿ ಬೆಲ್ಟ್‌ ಕಟ್ಟಿಕೊಂಡು ಸ್ವಿಚ್‌ ಒತ್ತಿದರೆ ಸಾಕು, 30 ಸೆಕೆಂಡ್‌ಗಳಲ್ಲಿ ಅಡಕೆ ಮರದ ತುದಿಯಲ್ಲಿರಬಹುದು. ಕೆಳಗಿಳಿಯಬೇಕಾದರೆ ಎಂಜಿನ್‌ ಆಫ್‌ ಮಾಡಿದರೂ ನಡೆಯುತ್ತದೆ. ಬೀಳುವ ಯಾವುದೇ ಅಪಾಯವಿಲ್ಲ.

ಬಾನೆತ್ತರದ ಅಡಿಕೆ ಮರ ಹತ್ತಲು ಸುಲಭೋಪಾಯ ಕಂಡುಹಿಡಿದ ಮುಪ್ಪೇರ್ಯ ಯುವಕ!

ತೆಂಗು ಹಾಗೂ ಅಡಿಕೆ ಮರ ಹತ್ತಿ ಕಾಯಿ ಕೀಳುವುದು ಸುಲಭದ ಕೆಲಸವಲ್ಲ, ಅದೊಂದು ತ್ರಾಸದಾಯಕ ಕಲೆಯೇ ಸರಿ. ಈ ಹಿಂದೆ ಕಾಯಿ ಕೀಳಲು ಕಾಲಿಗೆ ಹಗ್ಗ ಕಟ್ಟಿಕೊಂಡು ಮರ ಹತ್ತುವುದನ್ನು ನೋಡಿರುತ್ತೇವೆ. ಆದರೆ, ಯಾವುದೇ ಶ್ರಮ ಇಲ್ಲದೆ ಆಗಸದೆತ್ತರವಿರುವ ಅಡಿಕೆ ಮರವನ್ನು ಸುಯ್ಯೆಂದು ಹತ್ತಲು ಸಾಧ್ಯ ಎಂಬುದನ್ನು ಬಂಟ್ವಾಳದ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ.

 ಮರ ಏರಲು ಹೈಟೆಕ್ ಪರಿಹಾರ

ಮರ ಏರಲು ಹೈಟೆಕ್ ಪರಿಹಾರ

ಅಡಿಕೆ ಮರ ಏರಲು ಕಾರ್ಮಿಕರ ಕೊರತೆ ಅನುಭವಿಸುತ್ತಿರುವ ಇಂದಿನ ದಿನಗಳಲ್ಲಿ ಕೃಷಿಕರೊಬ್ಬರು ಈ ಸಮಸ್ಯೆಗೆ ಹೈಟೆಕ್ ಪರಿಹಾರ ಹುಡುಕಿದ್ದಾರೆ. ಅಡಿಕೆ ಮರ ಏರುವ ಬೈಕ್ ನಂತಹ ಯಂತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಬಂಟ್ವಾಳ ತಾಲ್ಲೂಕಿನ ಪಣೋಲಿಬೈಲ್ ಸಮೀಪದ ಕೋಮಾಲಿ ಎಂಬಲ್ಲಿರುವ ಪ್ರಗತಿಪರ ಕೃಷಿಕ ಗಣಪತಿ ಭಟ್‌ ಈ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ತಾವು ತಯಾರಿಸಿರುವ ಮರವೇರುವ ಯಂತ್ರವನ್ನು ಪ್ರಾಯೋಗಿಕವಾಗಿ ತಮ್ಮ ಮನೆಯ ಸದಸ್ಯರು, ಅದರಲ್ಲೂ ಮಹಿಳೆಯರು ಇದನ್ನು ಬಳಸಿದ ಸಂದರ್ಭ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ಈಗ ವೈರಲ್ ಆಗಿದೆ.

 70 ಕೆಜಿ ತೂಕವನ್ನು ತಡೆಯಬಲ್ಲದು

70 ಕೆಜಿ ತೂಕವನ್ನು ತಡೆಯಬಲ್ಲದು

ಗಣಪತಿ ಭಟ್‌ ಅವರು ತಯಾರಿಸಿರುವ 28 ಕೆ.ಜಿ. ತೂಕವುಳ್ಳ ಪೆಟ್ರೋಲ್ ಚಾಲಿತ 2 ಸ್ಟ್ರೋಕ್ ಎಂಜಿನ್‌ ಇರುವ ಬೈಕ್ ಮಾದರಿಯ ಯಂತ್ರ ಈಗ ಭಾರೀ ಫೇಮಸ್ ಆಗಿದೆ. ಇದರಲ್ಲಿ ಹೈಡ್ರಾಲಿಕ್ ಡಿಸ್ಕ್‌ ಡ್ರಮ್‌ ಹೊಂದಿದ ಬ್ರೇಕ್ ಕೂಡ ಇದೆ. ಗೇರ್‌ ಬಾಕ್ಸ್‌ ಮತ್ತು ಡಬಲ್ ಚೈನ್ ಒಳಗೊಂಡಿರುವ ಯಂತ್ರದಲ್ಲಿ ಪುಟ್ಟ ಸೀಟ್‌, ಸೇಫ್ಟಿ ಬೆಲ್ಟ್‌ ವ್ಯವಸ್ಥೆ ಇದೆ. ಸುಮಾರು 70 ಕೆ.ಜಿ. ತೂಕವುಳ್ಳ ವ್ಯಕ್ತಿ ಇದರಲ್ಲಿ ಸಲೀಸಾಗಿ ಕುಳಿತುಕೊಳ್ಳಬಹುದು. ಎರಡೂ ಕೈಯನ್ನು ಹಿಡಿಯಲು ಹ್ಯಾಂಡಲ್‌, ಬೈಕ್ ‌ನ ಹ್ಯಾಂಡ್ ಬ್ರೇಕ್ ಮಾದರಿಯಲ್ಲಿರುವ ನಿಯಂತ್ರಣ ವ್ಯವಸ್ಥೆ ಇಲ್ಲಿದೆ.

2 ಸ್ಟ್ರೋಕ್ ಎಂಜಿನ್‌ ಆಗಿರುವ ಕಾರಣ, ಪೆಟ್ರೋಲ್ ಮತ್ತು ಆಯಿಲ್ ಅನ್ನು ಸೂಚಿತ ಪ್ರಮಾಣದಲ್ಲಿ ಹಾಕಿ ಸುಸ್ಥಿತಿಯಲ್ಲಿ ಯಂತ್ರವನ್ನಿಡಬೇಕು. ಬಳಿಕ ತಾವೇರುವ ಅಡಿಕೆ ಮರದ ಬುಡದಲ್ಲಿ ಅದನ್ನು ಸ್ಥಾಪಿಸಬೇಕು. ಇದರ ವಿನ್ಯಾಸ ಹೇಗಿದೆ ಎಂದರೆ, ಯಂತ್ರವನ್ನು ಬಿಡಿಸಿ, ಅಡಿಕೆ ಮರಕ್ಕೆ ತಾಗಿಸಿದರೆ, ಅದನ್ನು ಕಚ್ಚಿಕೊಂಡು ಕುಳಿತುಕೊಳ್ಳುತ್ತದೆ. ಅದಾದ ಬಳಿಕ ನಮ್ಮ ಜಾಗರೂಕತೆಗೆ ಸೇಫ್ಟಿ ಬೆಲ್ಟ್‌ ಕಟ್ಟಿಕೊಂಡು ಯಂತ್ರದಲ್ಲಿರುವ ಆಸನದಲ್ಲಿ ಕುಳಿತು, ಸ್ವಿಚ್‌ ಅದುಮಿದರೆ, ಮೇಲಕ್ಕೇರುತ್ತಾ ಹೋಗುತ್ತದೆ.

ಮಲೆನಾಡಲ್ಲಿ ಭಾರೀ ಮಳೆ: ಅಡಿಕೆ ಕೊಳೆ ನಿರ್ವಹಣೆಗೆ ಮುನ್ನೆಚ್ಚರಿಕಾ ಕ್ರಮ

 30 ಸೆಕೆಂಡುಗಳಲ್ಲಿ ಏರಬಹುದು

30 ಸೆಕೆಂಡುಗಳಲ್ಲಿ ಏರಬಹುದು

ನಿಮಗೆ ಅರ್ಧದಲ್ಲಿಯೇ ನಿಲ್ಲಿಸಬೇಕೆಂದಿದ್ದರೆ, ನಿಲ್ಲಿಸಬಹುದು, ಒಮ್ಮೆ ಕೆಳಕ್ಕೆ ಬಂದು ಮತ್ತೆ ಮೇಲಕ್ಕೆ ಹೋಗಬಹುದು. ಸಾಮಾನ್ಯವಾಗಿ 30 ಸೆಕೆಂಡ್‌ಗಳಲ್ಲಿ ಒಂದು ಅಡಕೆ ಮರ ಹತ್ತಬಹುದು. ತಮ್ಮ ಕೆಲಸ ಮುಗಿಸಿದ ಬಳಿಕ ಯಂತ್ರದ ಬ್ರೇಕ್ ಸಹಾಯದಿಂದ ಹಾಗೆಯೇ ಕೆಳಕ್ಕಿಳಿಯಬಹುದು. ಈ ಸಂದರ್ಭ ಎಂಜಿನ್‌ ಆಫ್‌ ಆಗಿದ್ದರೂ ಪರವಾಗಿಲ್ಲ ಎಂದು ವಿವರಿಸುತ್ತಾರೆ ಗಣಪತಿ ಭಟ್‌.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಣಪತಿ ಭಟ್‌ ಮಗಳು, ಪದವಿ ವ್ಯಾಸಂಗ ಮಾಡುತ್ತಿರುವ ಸುಪ್ರಿಯಾ ಮರವೇರುವ ಯಂತ್ರದಲ್ಲಿ ಕುಳಿತು ಸ್ವಿಚ್‌ ಅದುಮಿ ಮೇಲಕ್ಕೇರುವ ದೃಶ್ಯ ವೈರಲ್ ಆಗುತ್ತಿದೆ. ಕೃಷಿ ನಡೆಸುವವರು ಸ್ವತಃ ದುಡಿಯುವುದಿದ್ದರೆ, ಯಾರ ಸಹಾಯವೂ ಇಲ್ಲದೆ, ತಾವೇ ಮರವೇರಬಹುದು. ಮಹಿಳೆಯರು, ಮಕ್ಕಳಿಗೂ ಇದು ಸೇಫ್‌ ಎನ್ನುವುದು ಪ್ರಾಯೋಗಿಕವಾಗಿ ಸಾಬೀತಾಗಿದೆ ಎಂದು ಗಣಪತಿ ಭಟ್‌ ಹೇಳುತ್ತಾರೆ.

 ಅಡಿಕೆ ಕೃಷಿ ಮುಂದುವರಿಕೆಗೆ ಸಹಾಯ

ಅಡಿಕೆ ಕೃಷಿ ಮುಂದುವರಿಕೆಗೆ ಸಹಾಯ

ಗಣಪತಿ ಭಟ್ ಅವರಿಗೆ ಈ ಯಂತ್ರ ತಯಾರಿಸಲು 75 ಸಾವಿರ ರೂಪಾಯಿ ತಗುಲಿದೆ. ಭಟ್ ಅವರ ಮೂಲ ಉದ್ದೇಶ ಕೃಷಿಕರು ಕಾರ್ಮಿಕರಿಲ್ಲ ಎಂದು ಕಸುಬು ಬಿಡದೆ, ಮುನ್ನಡೆಯಲು ಸಹಕಾರಿಯಾಗಬೇಕು ಎನ್ನುವುದು. ದಶಕದ ಹಿಂದೆ ಅಡಕೆ ಮರ ಏರುವುದು ಸಾಮಾನ್ಯ ವಿಷಯವಾದರೂ ಇಂದು ಆ ಕೆಲಸ ಮಾಡಲು ನುರಿತ ವ್ಯಕ್ತಿಗಳು ಲಭ್ಯವಾಗುತ್ತಿಲ್ಲ. ಮರ ಹತ್ತಲು ಹಲವು ಯಂತ್ರಗಳ ಆವಿಷ್ಕಾರಗಳು ಕಾಲಕಾಲಕ್ಕೆ ನಡೆಯುತ್ತಲೇ ಇವೆ. ಇದಕ್ಕೊಂದು ಸೇರ್ಪಡೆ ಮರ ಹತ್ತುವ ಬೈಕ್. ಇದರ ಮೂಲ ಉದ್ದೇಶವೇ ಯಾರ ಸಹಾಯವೂ ಇಲ್ಲದೆ ಮರ ಹತ್ತುವುದು. ಸದ್ಯಕ್ಕೆ ಅಡಕೆ ಮರ ಹತ್ತಲು ಉಪಯೋಗವಾಗುತ್ತಿರುವ ಈ ಯಂತ್ರವನ್ನು ಪರಿಷ್ಕರಿಸಿ, ತೆಂಗಿನ ಮರ ಹತ್ತುವಂತೆ ಮಾಡುವ ಯೋಜನೆಯೂ ಗಣಪತಿ ಭಟ್ಟರಿಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A farmer of Bantwal invented a new easy way to climb areca nut tree by bike kind of the machine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more