ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿ ಜನ್ಮದಿನ ಹಿನ್ನಲೆ; ಪ್ರಮುಖ ದೇವಸ್ಥಾನದಲ್ಲಿ ಅಭಿಮಾನಿಗಳ ಸೇವೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 17: ಪ್ರಧಾನಮಂತ್ರಿ ನರೇಂದ್ರ ಮೋದಿ 71ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ, ನರೇಂದ್ರ ಮೋದಿ ಅಭಿಮಾನಿಗಳು ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ‌ ಸೇವೆ ಮಾಡುವ ಮೂಲಕ ಅಭಿಮಾನವನ್ನು ತೋರ್ಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಅಧಿದೇವತೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಅತೀ ಪ್ರೀಯವಾದ ಹೂವಿನ ಸೇವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮಾಡಲಾಗಿದೆ. ಕಟೀಲು ಶ್ರೀ ಕ್ಷೇತ್ರದಲ್ಲಿ ಹೂವಿನ ಪೂಜೆಗೆ ಬಹಳ ಮಹತ್ವವಿದ್ದು, ಜನ ಸಾಮಾನ್ಯನೂ ಸೇವೆ ಸಲ್ಲಿಸಬಹುದಾಗಿದೆ. ದುರ್ಗಾಪರಮೇಶ್ವರಿ ದೇವಿಗೆ ಅತ್ಯಾಪ್ತವಾಗಿರುವ ಈ ಸೇವೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮಾಡಲಾಗಿದೆ.

ಇನ್ನು ಶ್ರೀಕ್ಷೇತ್ರ ಧರ್ಮಸ್ಥಳದಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಪರವಾಗಿ ಅನ್ನದಾನ ಸೇವೆ ಮಾಡಲಾಗಿದೆ. ಜೊತೆಗೆ ಶ್ರೀಮಂಜುನಾಥನಿಗೆ ಸರ್ವ ಸೇವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರಲ್ಲಿ ಮಾಡಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ ಸೇವೆ ಮಹತ್ವ ಪಡೆದಿದ್ದು, ಮೋದಿ ಅಭಿಮಾನಿಯೋರ್ವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರವಾಗಿ ಮಂಜುನಾಥನ ಸನ್ನಿಧಿಯಲ್ಲಿ ಅನ್ನದಾನವನ್ನು ಮಾಡಿದ್ದಾರೆ.

Fans Paid Special Pooja In The Temples For Prime Minister Modis Birthday

ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ಕಾರ್ತಿಕ ಪೂಜೆಯನ್ನು ಮಾಡಲಾಗಿದೆ. ಕುಕ್ಕೆಯ ಸ್ವಾಮಿಗೆ ಕಾರ್ತಿಕ ಪೂಜೆಯ ಅರ್ಚನೆ ಮಾಡಿ, ಪ್ರಧಾನಿಗೆ ಆಯುರಾರೋಗ್ಯ ಭಾಗ್ಯ ನೀಡುವಂತೆ ಪ್ರಾರ್ಥಿಸಲಾಗಿದೆ.

ಇನ್ನು ಮಂಗಳೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀಕದ್ರಿ ಮಂಜುನಾಥೇಶ್ವರ ಸನ್ನಿಧಿಯಲ್ಲೂ ವಿಶೇಷ ಸೇವೆ ಮಾಡಲಾಗಿದ್ದು, ನರೇಂದ್ರ ಮೋದಿಯವರ ಹೆಸರಿನಲ್ಲಿ ಮಂಜುನಾಥ ಸ್ವಾಮಿಗೆ ರುದ್ರಾಭಿಷೇಕ ಸೇವೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಕದ್ರಿ ಮಂಜುನಾಥ ಸ್ವಾಮಿಗೆ ರುದ್ರಾಭಿಷೇಕ ಸೇವೆ ಮಾಡಿದ್ದಾರೆ.

Fans Paid Special Pooja In The Temples For Prime Minister Modis Birthday

ಈ ವೇಳೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಭವಿಷ್ಯದ ಭಾರತದ ಅಭ್ಯುದಯಕ್ಕಾಗಿ ಪ್ರಧಾನಿಮಂತ್ರಿ ನರೇಂದ್ರ ಮೋದಿ ಮುಂದಿನ ಬಾರಿಯೂ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ. ದೇಶದ ಒಳಿತಿಗಾಗಿ ನರೇಂದ್ರ ಮೋದಿಯವರಿಗೆ ದೇವರು ಆಯುಷ್ಯ, ಆರೋಗ್ಯ ಭಾಗ್ಯ ನೀಡಿ ಆಶೀರ್ವಾದ ನೀಡಬೇಕೆಂದು ಪ್ರಾರ್ಥಿಸಿದ್ದೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ದುರ್ಗಾಮಾತೆಯ ಪರಮಭಕ್ತ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ದೈವಭಕ್ತರು. ದುರ್ಗಾ ಮಾತೆಯ ಪರಮ ಭಕ್ತರಾಗಿರುವ ನರೇಂದ್ರ ಮೋದಿ ಪ್ರತಿವರ್ಷ ನವರಾತ್ರಿಯ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ 9 ದಿನಗಳ ಕಾಲ ಉಪವಾಸ ವ್ರತವನ್ನು ಆಚರಿಸುತ್ತಾರೆ. ಅವರು ಭಾರತದಲ್ಲಿರಲಿ ಅಥವಾ ವಿದೇಶ ಪ್ರವಾಸದಲ್ಲಿರಲಿ, ವ್ರತವನ್ನು ಮಾತ್ರ ಯಾವ ಕಾರಣಕ್ಕೂ ತಪ್ಪಿಸಲಾರರು. ಈ ಒಂಬತ್ತು ದಿನಗಳಲ್ಲಿ ದುರ್ಗಾಮಾತೆಗೆ ಪೂಜೆ ಸಲ್ಲಿಸುವಾಗ ಅವರು ನೀರು ಇಲ್ಲವೇ, ನಿಂಬೆಹಣ್ಣಿನ ಪಾನಕ ಬಿಟ್ಟರೆ ಮತ್ತೇನೂ ಸೇವಿಸುವುದಿಲ್ಲ. ಅಷ್ಟು ದಿನಗಳ ಕಾಲ ಅವರದ್ದು ಕೇವಲ ನೀರಾಹಾರ.

ಪ್ರಧಾನಿ ನರೇಂದ್ರ ಮೋದಿ ನವರಾತ್ರಿ ಉಪವಾಸ ವ್ರತವನ್ನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಇಲ್ಲವೇ ಭಾರತದ ಪ್ರಧಾನಮಂತ್ರಿ ಆದ ಬಳಿಕ ಆರಂಭಿಸಿರುವುದಲ್ಲ. ಸುಮಾರು ನಾಲ್ಕೂವರೆ ದಶಕಗಳಿಂದ ಅವರು ಈ ವ್ರತವನ್ನು ಆಚರಿಸಿಕೊಂಡು ಬಂದಿದ್ದಾರೆ ಮತ್ತು ಮುಂದೆಯೂ ಆಚರಿಸಲಿದ್ದಾರೆ.

Fans Paid Special Pooja In The Temples For Prime Minister Modis Birthday

ವ್ರತದ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ ಕಾರ್ಯವೈಖರಿ, ಕಾರ್ಯವಿಧಾನ ಅಥವಾ ದಿನಚರಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಮಾಮೂಲಿನಂತೆ ಎಲ್ಲ ಕೆಲಸಗಳನ್ನು ಮಾಡಿಕೊಂಡೇ ಅವರು ಉಪವಾಸ ವ್ರತ ಆಚರಿಸುತ್ತಾರೆ.

ಪ್ರಧಾನ ಮಂತ್ರಿಗಳ ಉಪವಾಸ ವ್ರತ ಮಹಾಲಯ ಅಮವಾಸ್ಯೆಯಂದು ಆರಂಭಗೊಂಡು ವಿಜಯದಶಮಿ ದಿನದಂದು ಪೂರ್ಣಗೊಳ್ಳುತ್ತದೆ. ವಿಜಯದಶಮಿ ಹಬ್ಬದ ಸಾಯಂಕಾಲ ದುರ್ಗಾ ಮಾತೆಗೆ ಪೂಜೆ ಸಲ್ಲಿಸಿದ ಬಳಿಕ ಆಹಾರ ಸೇವಿಸುತ್ತಾರೆ.

English summary
On the occasion of the 71st birthday of Prime Minister Narendra Modi, his fans made a special pooja in the popular religious Temples of the coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X