ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಪಿ ಆದಿತ್ಯ ಈ ಮುನ್ನ ಎಲ್ಲೆಲ್ಲಿ ಕೆಲಸ ಮಾಡಿದ್ದ?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 22: ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಆರೋಪಿ ಆದಿತ್ಯ ರಾವ್ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಉಡುಪಿಯ ಮಣಿಪಾಲ ಮೂಲದ ಆದಿತ್ಯ ರಾವ್ ನನ್ನು ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಬಳಿಯ ಸಿಸಿ ಟಿವಿಯ ಕೆಲವು ದೃಶ್ಯಾವಳಿಯಗಳನ್ನು ಪರಿಶೀಲಿಸಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು. ಮಂಗಳವಾರ ಆತನ ಚಹರೆ ಪತ್ತೆ ಹಚ್ಚಿದ್ದು, ಆತನ ಶೋಧಕಾರ್ಯ ನಡೆಯುತ್ತಿತ್ತು. ಇಂದು ಬೆಳಿಗ್ಗೆ ಸ್ವತಃ ಆರೋಪಿಯೇ ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಎದುರು ಹಾಜರಾಗಿ ಶರಣಾಗಿದ್ದಾನೆ.

ಆರೋಪಿ ಆದಿತ್ಯರಾವ್ ಸ್ಫೋಟಕ ತಯಾರಿಸಿದ್ದು ಹೇಗೆ?ಆರೋಪಿ ಆದಿತ್ಯರಾವ್ ಸ್ಫೋಟಕ ತಯಾರಿಸಿದ್ದು ಹೇಗೆ?

ಮಣಿಪಾಲದ ಮಣ್ಣಪಲ್ಲದ ಹುಡ್ಕೋ ಕಾಲೋನಿಯ ವಸತಿ ಸಮುಚ್ಚಯದಲ್ಲಿ ಈತನ ಕುಟುಂಬ ವಾಸವಿತ್ತು. ಆದಿತ್ಯ ರಾವ್ ಮೆಕಾನಿಕಲ್ ಎಂಜಿನಿಯರ್ ಪದವೀಧರ. ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ಕೆಲಸದ ಕನಸು ಹೊತ್ತಿದ್ದ. ಆದರೆ ಸೂಕ್ತ ದಾಖಲೆ ಇಲ್ಲದ ಕಾರಣ ಆತನ ಅರ್ಜಿ ತಿರಸ್ಕೃತಗೊಂಡಿತ್ತು. ಇದೇ ಕೋಪದಲ್ಲಿ 2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಜಿಸ್ಟಿಕ್ ನಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸ್ಪೋಟ ನಡೆಸುವುದಾಗಿ ಹುಸಿ ಬೆದರಿಕೆ ಕರೆ ಮಾಡಿ , ಬಂಧನಕ್ಕೆ ಒಳಗಾಗಿದ್ದನು. ಈತ ಒಟ್ಟು ಮೂರು ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಮಾಡಿದ್ದ ಆರೋಪದಲ್ಲಿ 2018ರ ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು. ಬಳಿಕ ಜೈಲುವಾಸ ಅನುಭವಿಸಿದ್ದ.

Explosive In Mangaluru Airport Where Accused Adithya Roa Worked Before

 ಬಾಣಸಿಗನ ಕೆಲಸ ಮಾಡಿದ್ದ ಆದಿತ್ಯ

ಬಾಣಸಿಗನ ಕೆಲಸ ಮಾಡಿದ್ದ ಆದಿತ್ಯ

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೆಲಸ ಸಿಗುವುದಿಲ್ಲ ಎಂದು ತಿಳಿದಿದ್ದರಿಂದ ಬೇಸರಗೊಂಡು ಆ ಕೆಲಸದ ಆಸೆ ಬಿಟ್ಟು ಮಂಗಳೂರಿನಲ್ಲಿ ತಂದೆ ಜೊತೆ ಕೆಲಕಾಲ ವಾಸವಾಗಿದ್ದ. ಕೆಲಸ ಸಿಗದಿದ್ದರಿಂದ ಬಾಣಸಿಗನ ಕೆಲಸ ಮಾಡಲೂ ಆರಂಭಿಸಿದ್ದ. ಮಠ, ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬಡಿಸಲು ಹೋಗುತ್ತಿದ್ದ ಆದಿತ್ಯ ರಾವ್ ವಾಚ್ ಮೆನ್, ಮಾರ್ಕೆಟಿಂಗ್, ಬಾಣಸಿಗ ಹೀಗೆ ಏನಾದರೊಂದು ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

 ಒಂಟಿಯಾಗೇ ಕೆಲಸ ಮಾಡುತ್ತಿದ್ದ ಆದಿತ್ಯ

ಒಂಟಿಯಾಗೇ ಕೆಲಸ ಮಾಡುತ್ತಿದ್ದ ಆದಿತ್ಯ

ಮಂಗಳೂರಿನ ಕುಡ್ಲ ಕ್ವಾಲಿಟಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಆದಿತ್ಯ ರಾವ್ ಕಳೆದ ಒಂದು ತಿಂಗಳಿನಿಂದ ಅಲ್ಲಿನ ಬಾರ್ ಅಂಡ್ ರೆಸ್ಟೊರೆಂಟ್ ವಿಭಾಗದಲ್ಲಿ ಬಿಲ್ಲಿಂಗ್ ಕೆಲಸ ಮಾಡುತ್ತಿದ್ದ. ಆದರೆ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಒಂಟಿಯಾಗೇ ಕೆಲಸ ಮಾಡುತ್ತಿದ್ದರು ಎಂದು ಹೋಟೆಲ್ ಮಾಲೀಕ ಬಾಬು ಹೆಗ್ಡೆ ತಿಳಿಸಿದ್ದಾರೆ. ಆತ ಕೆಲಸಕ್ಕೆ ಬರುವಾಗ ಬ್ಯಾಗ್‌ ಒಂದನ್ನು ತಂದು ತನ್ನ ಬಳಿಯೇ ಇರಿಸಿಕೊಳ್ಳುತ್ತಿದ್ದು, ಹೊಟೇಲ್ ‌ನಲ್ಲಿ ಇದ್ದರೂ ಕೆಳಗಿನ ಹೊಟೇಲ್ ಗೆ ಹೋಗಿ ವೆಜ್ ಊಟ ಮಾಡುತ್ತಿದ್ದರು. ಮೂರು ಗಂಟೆಗೆ ಬ್ರೇಕ್ ಬಂದಾಗ ಹೊರಗೆ ಹೋಗಿ ಸಂಜೆ ವಾಪಸ್ ಆಗುತ್ತಿದ್ದರು" ಎಂದು ಹೇಳಿದ್ದಾರೆ.ಒಂದು ತಿಂಗಳ ಸಂಬಳ ಸಿಕ್ಕ ಬಳಿಕ ಹೋಟೆಲ್ ಕೆಲಸವನ್ನು ಬಿಟ್ಟಿದ್ದರು.


ಈ ಸಮಯದಲ್ಲೇ ಆನ್ ಲೈನ್ ಮೂಲಕ ಪೌಡರ್ ಒಂದನ್ನು ತರಿಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಅವರ ಚಲನವಲನದ ಬಗ್ಗೆ ನಮಗೆ ಗೊತ್ತಾಗಲಿಲ್ಲ. ಅವರು ಹೆಚ್ಚು ಮಾತಾಡುತ್ತಿರಲಿಲ್ಲ ಎಂದಿದ್ದಾರೆ ಮಾಲೀಕ. ಮಂಗಳೂರಿನ ಬಲ್ಮಠದ ಮತ್ತೊಂದು ಹೋಟೆಲ್ ನಲ್ಲೂ ಈತ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

 ಈಚೆಗೆ ಸಾವನ್ನಪ್ಪಿದ್ದ ಆದಿತ್ಯ ತಾಯಿ

ಈಚೆಗೆ ಸಾವನ್ನಪ್ಪಿದ್ದ ಆದಿತ್ಯ ತಾಯಿ

ಆದಿತ್ಯ ತಂದೆ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದರು. ಆದಿತ್ಯ ಸಹೋದರ ಮೂಡುಬಿದರೆಯಲ್ಲಿ ಬ್ಯಾಂಕ್ ನೌಕರನಾಗಿದ್ದಾರೆ. ತಿಂಗಳ ಹಿಂದೆಯಷ್ಟೆ ಮಂಗಳೂರು ಚಿಲಿಂಬಿಗೆ ಬಂದು ನೆಲೆಸಿದ್ದರು. ಆದಿತ್ಯ ತಾಯಿ ಕೆಲ ಸಮಯದ ಹಿಂದೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು.

 ಮದುವೆ ಆಗದ್ದಕ್ಕೆ ಆದಿತ್ಯ ಕೊಟ್ಟಿದ್ದ ಕಾರಣ

ಮದುವೆ ಆಗದ್ದಕ್ಕೆ ಆದಿತ್ಯ ಕೊಟ್ಟಿದ್ದ ಕಾರಣ

ಯಾರಾದರೂ, ನೀವು ಮದುವೆ ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದರೆ, "ನನ್ನನ್ನು ನೋಡಿಕೊಳ್ಳುವುದೇ ಕಷ್ಟ. ಇನ್ನು ಮದುವೆಯಾದರೆ ಹೆಂಡತಿ ಮಕ್ಕಳನ್ನು ಸಾಕುವುದು ಹೇಗೆ" ಎಂದು ವಾಪಸ್ ಪ್ರಶ್ನಿಸುತ್ತಿದ್ದನಂತೆ ಆದಿತ್ಯ. ಈ ಕಾರಣಕ್ಕೇ ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದ. ಜೊತೆಗೆ ಯಾವಾಗಲೂ ಬೇಸರದಿಂದಿರುವಿರಿ ಏಕೆ ಎಂದು ಕೇಳಿದರೆ, ತಂದೆ ಆರೋಗ್ಯ ಸರಿಯಿಲ್ಲ, ಹೀಗಾಗಿ ಬೇಜಾರು ಎಂದಷ್ಟೇ ಹೇಳಿದ್ದನಂತೆ.

English summary
Where Accused Adithya Roa Worked Before in mangaluru, here is a detail,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X