• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಆದಿತ್ಯ ಒಬ್ಬನೇ ಈ ಕೃತ್ಯ ಎಸಗಿದ್ದ; ಆತನ ಮೇಲೆ ಉಗ್ರರ ಮೇಲಿನ ಕಠಿಣ ಕ್ರಮ"

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಜನವರಿ 23: "ಆದಿತ್ಯ ರಾವ್ ಒಬ್ಬನೇ ಈ ಕೃತ್ಯವನ್ನು ಎಸಗಿದ್ದಾನೆ. ಆತನ ಜೊತೆ ಯಾರೂ ಕೃತ್ಯದಲ್ಲಿ ಭಾಗಿಯಾಗಿಲ್ಲ. ಆತ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದ್ದರಿಂದ ಒಬ್ಬನೇ ಕೃತ್ಯಕ್ಕೆ ಸಂಚು ಹೂಡಿದ್ದ. ದೊಡ್ಡ ಮಟ್ಟದ ಸ್ಫೋಟಕ್ಕೂ ಹೊಂಚು ಹಾಕಿದ್ದ" ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ ಮಂಗಳೂರು ಕಮಿಷನರ್ ಡಾ. ಹರ್ಷ. ಜೊತೆಗೆ ಆತನ ಮೇಲೆ ಎರಡು ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ. ಉಗ್ರರ ಮೇಲಿನ ಕಠಿಣ ಕ್ರಮವನ್ನು ಆದಿತ್ಯ ಮೇಲೆ

ಜನವರಿ 20ರಂದು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಆರೋಪಿ ಆದಿತ್ಯ ನಿನ್ನೆ ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದು,

ಮಂಗಳೂರು ಬಾಂಬ್ ಪ್ರಕರಣ: ಆರೋಪಿ ಆದಿತ್ಯರಾವ್ ಬೆಂಗಳೂರಲ್ಲಿ ಶರಣಾಗಿದ್ದು ಈ ಕಾರಣಕ್ಕಾಗಿ!

ಮಂಗಳೂರಿನ ಉತ್ತರ ಎಸಿಪಿ ಕಚೇರಿಯಲ್ಲಿ ಆದಿತ್ಯರಾವ್ ‌ನನ್ನು ನಿನ್ನೆ ತಡರಾತ್ರಿಯವರೆಗೂ ವಿಚಾರಣೆ ನಡೆಸಲಾಗಿದೆ. ಇದೇ ಸಂಬಂಧವಾಗಿ ಇಂದು ಕಮೀಷನರ್ ಡಾ. ಹರ್ಷ ಪತ್ರಿಕಾಗೋಷ್ಠಿ ನಡೆಸಿದ್ದು, ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

 ಬಾಂಬ್ ತಯಾರಿಕೆ ಬಗ್ಗೆ ಅಧ್ಯಯನ ಮಾಡಿದ್ದ ಆದಿತ್ಯ

ಬಾಂಬ್ ತಯಾರಿಕೆ ಬಗ್ಗೆ ಅಧ್ಯಯನ ಮಾಡಿದ್ದ ಆದಿತ್ಯ

ನಿನ್ನೆ ಬೆಂಗಳೂರಿನಲ್ಲಿ ಆರೋಪಿ ಹರ್ಷ ಪೊಲೀಸರಿಗೆ ಶರಣಾಗಿದ್ದು, ಆತನನ್ನು ಮಂಗಳೂರಿಗೆ ವಿಚಾರಣೆಗೆ ಪೊಲೀಸರು ಕರೆದುಕೊಂಡು ಬಂದಿದ್ದರು. ಈ ನಡುವೆ ದೇಶದ ಆಂತರಿಕ ಭದ್ರತೆಗೆ ತೊಂದರೆಯಾಗಿದ್ದ ಆತನ ಜೊತೆ ಯಾರೂ ಕೃತ್ಯದಲ್ಲಿ ಭಾಗಿಯಾಗಿಲ್ಲ, ಒಬ್ಬನೇ ಕೃತ್ಯ ಎಸಗಿದ್ದಾನೆ ಎಂಬುದು ತಿಳಿದುಬಂದಿದೆ. ಯುಟ್ಯೂಬ್ ಮೂಲಕ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಸ್ಫೋಟಕ ತಯಾರಿಕೆಯಲ್ಲಿ ತೊಡಗಿದ್ದ. ಸ್ಫೋಟಕ, ಬಾಂಬ್ ತಯಾರಿ ಬಗ್ಗೆ ವಿವರ ತಿಳಿದುಕೊಂಡು ತಿಂಗಳಾನುಗಟ್ಟಲೆ ಬಾಂಬ್ ಬಗ್ಗೆ ಅಧ್ಯಯನ ಮಾಡಿದ್ದ. ಟ್ಯುಟೋರಿಯಲ್ ನೀಡುವಷ್ಟರ ಮಟ್ಟಿಗೆ ಬಾಂಬ್ ತಯಾರಿಕೆ ಬಗ್ಗೆ ತಿಳಿದುಕೊಂಡಿದ್ದ. ದೊಡ್ಡ ಮಟ್ಟದಲ್ಲಿ ಸುಧಾರಿತ ಸ್ಫೋಟಕ ತಯಾರಿಗೆ ಸಂಚು ಮಾಡಿ ಎಲ್ಲಾ ರಾಸಾಯನಿಕ ಗಳನ್ನು ತರಿಸಿದ್ದಾನೆ. ಎಂಜಿನಿಯರಿಂಗ್ ಕೌಶಲ್ಯ ಬಳಕೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

"ಉಗ್ರ"ರ ಮೇಲಿನ ಕಠಿಣ ಕಾನೂನಿನಲ್ಲಿ ಪ್ರಕರಣ ದಾಖಲು

ಆದಿತ್ಯ ಮೇಲೆ ಎರಡು ಗಂಭೀರ ಪ್ರಕರಣ ಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಗ್ರರ ಮೇಲೆ ಹಾಕುವ ಕಾನೂನನ್ನು ಆದಿತ್ಯ ಮೇಲೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. "ದೇಶದ ಬಹಳ ಕಠಿಣ ಕಾನೂನು ಹಾಕಿದ್ದೇವೆ. ಹೆಚ್ಚಿನ ವಿಚಾರಣೆಗೆ ಕಸ್ಟಡಿ ಕೇಳುತ್ತೇವೆ. ಬೆದರಿಕೆ ಕರೆ ಮೇಲೆ ಒಂದು ಪ್ರಕರಣವನ್ನು ದಾಖಲಿಸಲಾಗಿದೆ" ಎಂದು ಕಮಿಷನರ್ ಹರ್ಷ ಮಾಹಿತಿ ನೀಡಿದ್ದಾರೆ. ಡಿವೈಸ್ ಬ್ಯಾಗ್ ಕೂಡ ಆದಿತ್ಯ ಬಳಿ ಇದ್ದು, ಟೈಮರ್ ಡಿವೈಸ್ ಕೂಡ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ. ಎಫ್ ಎಸ್ ಎಲ್ ಅಧಿಕಾರಿಗಳು ಎಲ್ಲಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಬಾಂಬ್‌': ಪೊಲೀಸ್ ಕಮಿಷನರ್ ಹರ್ಷಗೆ 6 ಪ್ರಶ್ನೆಗಳು..

 ವಿಮಾನ ನಿಲ್ದಾಣ ಆಡಳಿತಕ್ಕೆ ಕಿರುಕುಳ ಕೊಡಲು ನಿರ್ಧರಿಸಿದ್ದ

ವಿಮಾನ ನಿಲ್ದಾಣ ಆಡಳಿತಕ್ಕೆ ಕಿರುಕುಳ ಕೊಡಲು ನಿರ್ಧರಿಸಿದ್ದ

ಮೈಸೂರು ಕಾಲೇಜಿನಲ್ಲಿ ಬಿ.ಇ ಮೆಕ್ಯಾನಿಕಲ್ ಪದವಿ ಮುಗಿಸಿದ್ದು, ಎಂಬಿಎ ಮಾರ್ಕೆಟಿಂಗ್ ಆಂಡ್ ಆಪರೇಷನ್ ನಲ್ಲಿ ಪದವಿ ಪಡೆದಿದ್ದ ಆದಿತ್ಯ ಬ್ಯಾಂಕುಗಳಲ್ಲಿ ಕೆಲಸ ಮಾಡಿದ್ದಾನೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಇರುವುದಾಗಿ ತಿಳಿದುಕೊಂಡಿದ್ದ ಆದಿತ್ಯ, ಸಂದರ್ಶನಕ್ಕೂ ಹಾಜರಾಗಿದ್ದ. ಸಂದರ್ಶನವನ್ನೂ ಚೆನ್ನಾಗಿ ಎದುರಿಸಿದ್ದ. ಆದರೆ ಓವರ್ ಕ್ವಾಲಿಫೈಯ್ಡ್ ಅಂತ ಸಬೂಬು ಹೇಳಿದ ವಿಮಾನ ನಿಲ್ದಾಣ ಅಧಿಕಾರಿಗಳು ಲೀಗಲ್ ಅಫಿಡವಿಟ್ ಕೇಳಿದ್ದರು. ಇದರಿಂದ ಮನಸ್ಸಿಗೆ ಬೇಸರ ಮಾಡಿಕೊಂಡ ಆತ, ಏರ್ ಪೋರ್ಟ್ ಅಧಿಕಾರಿಗಳ ಬೆನ್ನ ಹತ್ತಿ ಕಾಟ ಕೊಡಲು ನಿರ್ಧರಿಸಿದ. ಇದೇ ಕಾರಣಕ್ಕೆ ಮೂರು ಬಾರಿ ಹುಸಿ ಬಾಂಬ್ ಕರೆ ಮಾಡಿದ್ದ. 2018ರಲ್ಲಿ ಈ ಕಾರಣಕ್ಕೇ ಪೊಲೀಸರು ಬಂಧಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ 1 ವರ್ಷ ಜೈಲು ವಾಸ ಅನುಭವಿಸಿದ.

 ಕೋಣೆಯೊಳಗೆ ಕೆಲಸ ಮಾಡಲು ಬಯಸದ ಆದಿತ್ಯ

ಕೋಣೆಯೊಳಗೆ ಕೆಲಸ ಮಾಡಲು ಬಯಸದ ಆದಿತ್ಯ

ಐಸಿಐಸಿಐ, ಎಚ್ ಡಿ ಎಫ್ ಸಿ, ಬಿರ್ಲಾ ಗ್ರೂಪ್, ಇನ್ಯೂರೆನ್ಸ್ ಕಂಪನಿಗಳಲ್ಲಿ ಮುನ್ನ ಕೆಲಸ ಮಾಡಿದ್ದಾನೆ. ಆದರೆ ನಾಲ್ಕು ಗೋಡೆಗಳ ನಡುವೆ ಕೆಲಸ ಮಾಡಲು ಒಲ್ಲದ ಆದಿತ್ಯ ಕೆಲಸವನ್ನು ಪದೇ ಪದೇ ಬದಲಾಯಿಸಿದ್ದಾನೆ. ಪೀಣ್ಯ ಆಟೋ ಮೊಬೈಲ್ ಕಂಪನಿ, ಬಿಡದಿಯ ಟೊಯೋಟೊ ಕಂಪನಿಯಲ್ಲೂ ಕೆಲಸ ಮಾಡಿದ್ದ. ಸುಳ್ಳು ದಾಖಲೆ ನೀಡುತ್ತಿದ್ದ ಆದಿತ್ಯ ಸಂದರ್ಶನ ನೀಡುವಲ್ಲಿ ಮುಂದಿದ್ದ. ತುಂಬಾ ಬುದ್ಧಿವಂತನಂತೆ ಮಾತನಾಡುತ್ತಿದ್ದು, ದಾಖಲೆ ನೀಡುವಲ್ಲಿ ಎಲ್ಲಾ ಕಡೆ ವಿಫಲವಾಗಿದ್ದ ಎಂದು ತಿಳಿದುಬಂದಿದೆ. ನಂತರ ವೈಟ್ ಕಾಲರ್ ಜಾಬ್ ಬೇಡ ಎಂಬ ನಿರ್ಧಾರ ಕೈಗೊಂಡಿದ್ದ. ಆಳ್ವಾಸ್, ಎಸ್ ಡಿಎಂ, ಎಂಐಟಿ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿದ್ದ. ನಂತರ ಊಟ, ವಸತಿ, ಸಂಬಳ ಒತ್ತಡ ಇಲ್ಲ ಅಂತ ಹೋಟೆಲ್ ಕೆಲಸಕ್ಕೆ ಸೇರಿಕೊಂಡಿದ್ದ. 2015-16 ಮಣಿಪಾಲದ ಆಶ್ಲೇಷ ಬಾರ್ ಕೆಲಸ ಮಾಡಿದ್ದ.

ಕೃಷ್ಣ ಗಾರ್ಡನ್, ಗೋಕುಲ ಗಾರ್ಡನ್ ಹೋಟೆಲ್, ಎಂಟಿ ಆರ್, ಡಾಮಿನೋಸ್ ಪಿಜ್ಜಾ ದಲ್ಲಿ ಕೆಲಸಮಾಡಿದ್ದ ಎಂದು ತಿಳಿದುಬಂದಿದೆ.

 ವಾರದ ರಜೆಯಲ್ಲಿ ಸ್ಫೋಟಕ ತಯಾರಿಕಾ ಕೆಲಸ

ವಾರದ ರಜೆಯಲ್ಲಿ ಸ್ಫೋಟಕ ತಯಾರಿಕಾ ಕೆಲಸ

ಕುಡ್ಲ ರೆಸ್ಟೋರೆಂಟಲ್ಲಿ ಕೆಲಸ ಆರಂಭಿಸಿದ ನಂತರ ಸ್ಫೋಟಕ ತಯಾರಿ ಕೆಲಸವನ್ನು ಮತ್ತೆ ಶುರುವಿಟ್ಟುಕೊಂಡಿದ್ದ ಆದಿತ್ಯ, ಆನ್ ಲೈನ್ ಮೂಲಕ ಎಲ್ಲಾ ರಾಸಾಯನಿಕಗಳನ್ನು ತರಿಸುತ್ತಿದ್ದ. ವಾರದ ರಜೆ ಇದ್ದಾಗ ಸ್ಫೋಟಕ ತಯಾರಿಕಾ ಕೆಲಸ ಮಾಡುತ್ತಿದ್ದ. ಸ್ಫೋಟಕ ತಯಾರಿ ಮಾಡಿ ಕಾರ್ಕಳಕ್ಕೆ ಹೊರಟಿದ್ದ. ಉಡುಪಿ ಜಿಲ್ಲೆ ಕಾರ್ಕಳ ಕಿಂಗ್ಸ್ ಕೋರ್ಟ್ ಹೋಟೆಲ್ ನಲ್ಲಿ ಸ್ಫೋಟಕವನ್ನು ಪೂರ್ಣಗೊಳಿಸಿದ್ದಾನೆ. ಕಾರ್ಕಳದಿಂದ- ಮಂಗಳೂರಿಗೆ ಬಂದು ಸ್ಫೋಟಕವನ್ನು ಇರಿಸಿದ್ದ ಎಂದು ತಿಳಿದುಬಂದಿದೆ.

English summary
"Aditya Rao committed this act all alone. Nobody is involved with him" clarifies commissioner Harsha In Mangaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X