• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನ ಈ ಹಗಲು ದರೋಡೆಗೆ ಕಡಿವಾಣ ಎಂದು?

By ಐಸಾಕ್ ರಿಚರ್ಡ್, ಮಂಗಳೂರು
|

ಮಂಗಳೂರು : ಮಂಗಳೂರಿಂದ ಬೆಂಗಳೂರಿಗೆ ರೈಲು ಪ್ರಯಾಣ ದರ 130 ರು. ರೈಲ್ವೆ ನಿಲ್ದಾಣದಿಂದ ನಗರಕ್ಕೆ ಬರಲು 250 ರು.! ಇದು ಬುದ್ಧಿವಂತ ಜನರು ಎಂದು ಹೇಳಿಸಿಕೊಳ್ಳುವ ಮಂಗಳೂರಿನ ಪರಿಸ್ಥಿತಿ ಇದು! ಅಷ್ಟೇ ಅಲ್ಲ, ಜನಪ್ರತಿನಿಧಿಗಳು ಅವೈಜ್ಞಾನಿಕ ನಿಲುವುಗಳಿಂದ ಆಗಿರುವ ಅವ್ಯವಸ್ಥೆ. ಇದರ ಪರಿಣಾಮವಾಗಿ, ಮಂಗಳೂರಿಗರು ಹಗಲು ದರೋಡೆಗೆ ಒಳಗಾಗುತ್ತಿದ್ದಾರೆ.

ನಗರದಿಂದ ಸುಮಾರು 8 ಕಿ.ಮೀ. ದೂರ ಇರುವ ರೈಲು ನಿಲ್ದಾಣದಿಂದ ತಮ್ಮ ಮನೆಗಳಿಗೆ ಅಥವಾ ತಮ್ಮ ಏರಿಯಾಗಳಿಂದ ರೈಲ್ವೇ ನಿಲ್ದಾಣಕ್ಕೆ ಹೋಗಲು ಸುಮಾರು ಸರಿ ಸುಮಾರು 60 ರು. ಆಗುತ್ತದೆ. ಆದರೆ, ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಹಗಲು ದರೋಡೆಗೆ ನಿಂತಿರುವ ಆಟೋ ರಿಕ್ಷಾ ಮಂದಿ ಬಾಯಿಗೆ ಬಂದಂತೆ ಬಾಡಿಗೆ ಕೇಳುತ್ತಿದ್ದಾರೆ.

ಇದನ್ನು ನಿವಾರಿಸಲೆಂದೇ ನೀಡಲಾಗಿರುವ ಪ್ರೀ ಪೇಯ್ಡ್ ವ್ಯವಸ್ಥೆ ಜಾರಿಗೆ ತಂದಿದ್ದರೂ ಅದೂ ಅಗಲು ದರೋಡೆಯಾಗಿದೆ. ನಗರದಿಂದ ಸುಮಾರು 8 ಕಿಮೀ ಇರುವ ಈ ನಿಲ್ದಾಣಕ್ಕೆ ಸರಿಸುಮಾರು 120 ರು. ಪಡೆಯಬೇಕು. ಆದರೆ, ಪ್ರೀ ಪೇಯ್ಡ್ ನಲ್ಲಿ 230 ರು. ದರ ನಿಗದಿಗೊಳಿಸಲಾಗಿದೆ.

ಆದರೆ, ಆಗಲಿಲ್ಲ ಸಕ್ಸಸ್

ಆದರೆ, ಆಗಲಿಲ್ಲ ಸಕ್ಸಸ್

ಈ ಹಗಲು ದರೋಡೆಯನ್ನು ತಪ್ಪಿಸಲು ಪ್ರಜ್ಞಾವಂತರು ಸೇರಿ ಆಟೋ ರಿಕ್ಷಾ ಪ್ರೀಪೇಯ್ಡ್ ಬುಕ್ಕಿಂಗ್ ವ್ಯವಸ್ಥೆಗೆ ಒತ್ತಾಯಿಸಿ, ಕೊನೆಗೂ ಅದು ಆರಂಭವೂ ಆಯಿತು. ಆದರೆ, ಕಂಕನಾಡಿ (ಜಂಕ್ಷನ್ ) ರೈಲು ನಿಲ್ದಾಣದಲ್ಲಿ ಆರಂಭವಾಗಿದ್ದ ಈ ವ್ಯವಸ್ಥೆ 2 ವಾರದಲ್ಲಿಯೇ ಮುಚ್ಚಿಹೋಗಿದೆ. ಮಂಗಳೂರಿನ ಕೇಂದ್ರ ರೈಲು ನಿಲ್ದಾಣದಲ್ಲಿ ಈ ವ್ಯವಸ್ಥೆ ಏನೋ ಇದೆ ಆದರೆ, ಲೂಟಿ ಮಾಡುವವರು ಮಾಡುತ್ತಲೇ ಇದ್ದಾಾರೆ ! ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಈ ವ್ಯವಸ್ಥೆಯೂ ಹಾಳಾಗಿ ಹೋಗಿದೆ.

ಬಳಕೆಯಾಗಲೇ ಇಲ್ಲ ಸೌಲಭ್ಯ

ಬಳಕೆಯಾಗಲೇ ಇಲ್ಲ ಸೌಲಭ್ಯ

ಕೇಂದ್ರ ರೈಲು ನಿಲ್ದಾಣದಲ್ಲಿ ಪ್ರೀಪೈಡ್ ಆಟೋ ಕೌಂಟರ್‌ಗೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ದೇಣಿಗೆಯಾಗಿ ಸಿಂಪ್ಯೂಟರ್ ನೀಡಿತ್ತು. ಅಂದಿನ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರಿಗೆ ಕೆಸಿಸಿಐ ಹಸ್ತಾಂತರಿಸಿತ್ತು. ವಿಪರ್ಯಾಸ ಎಂದರೆ ಇಂದಿಗೂ ಉದಾರವಾಗಿ ನೀಡಿದ ಈ ಸಿಂಪ್ಯೂಟರ್ ಬಳಸಿಕೊಳ್ಳಲೇ ಇಲ್ಲ.

ಬೂತ್ ನಲ್ಲಿ ಕೂತವನಿಗೆ ಆಟೋದವರಿಗೆ ಲಿಂಕ್

ಬೂತ್ ನಲ್ಲಿ ಕೂತವನಿಗೆ ಆಟೋದವರಿಗೆ ಲಿಂಕ್

ಸಿಂಪ್ಯೂಟರ್ ಬದಲಿಗೆ ಕೈಯಲ್ಲಿಯೇ ಬರೆದ ಚೀಟಿಯನ್ನು ಹೆಚ್ಚುವರಿ ದರ ವಿಧಿಸಿ ನೀಡಲಾಗುತ್ತಿದೆ. ಇಲ್ಲಿ ಈ ಬೂತ್‌ನ ಒಳಗಿಂದ ಚೀಟಿ ಕೊಡುವವ ಮತ್ತು ರಿಕ್ಷಾ ಚಾಲಕರು ಪರಸ್ಪರ ಅರ್ಥ ಮಾಡಿಕೊಂಡು ಆರ್ಥಿಕ ಸ್ಥಿತಿಗತಿ ಉತ್ತಮ ಪಡಿಸಿಕೊಳ್ಳುತ್ತಿದ್ದಾರೆ. ಮಂಗಳೂರು ಕೇಂದ್ರ ರೈಲು ನಿಲ್ದಾಾಣದಲ್ಲಿ ಪ್ರಯಾಣಿಕರು ಕೌಂಟರ್‌ಗೆ ಬಂದ ತಕ್ಷಣ ಅಲ್ಲಿದ್ದವರು "ಎಲ್ಲಿಗೆ" ಎಂದು ಕೇಳುತ್ತಾರೆ. ಬಳಿಕ 2 ರು. ಸರ್ವಿಸ್ ಚಾರ್ಜ್ ಮತ್ತು ನಿಜವಾದ ದರಕ್ಕಿಂತ 5 ರು. ಹೆಚ್ಚು ಬರೆದು ಚೀಟಿ ನೀಡುತ್ತಾರೆ. ಒಂದು ವೇಳೆ ಪ್ರಯಾಣಿಕ ಕದ್ರಿ ಎನ್ನುವ ಬದಲು ಗದ್ರಿ ಎಂದರೆ, ಪಿವಿಎಸ್ ಬದಲು ಪಿಬಿಎಸ್ ಎಂದರೆ ಡಬ್ಬಲ್ ಚಾರ್ಜ್ ಖಚಿತ. ಪ್ರಯಾಣಿಕ ಉಚ್ಚಾಾರದಿಂದಲೇ ಅತ ಊರಿನವನೋ ಕೇರಳದವನೋ, ಪರವೂರಿನವನೋ ಎಂಬುದು ಖಚಿತವಾಗುತ್ತದೆ. ತಕ್ಷಣ ದರ ಹೆಚ್ಚಳವಾಗುತ್ತದೆ.

ಯಾವುದೇ ದಾಖಲೆಯಿಲ್ಲ

ಯಾವುದೇ ದಾಖಲೆಯಿಲ್ಲ

ಚೀಟಿ ನೀಡಿದ ಬಳಿಕ ಪ್ರಯಾಣಿಕ ಸ್ವಲ್ಪ ಮುಂದೆ ಬಂದಾಗ ಅಲ್ಲೊಬ್ಬರು ನೋಟ್ ಪುಸ್ತಕ ಹಿಡಿದು ನಿಂತಿರುತ್ತಾರೆ. ಅವರು ಪ್ರಯಾಣಿಕನಿಂದ ಚೀಟಿ ಪಡೆದು ನಂಬರ್ ಪುಸ್ತಕದಲ್ಲಿ ಬರೆಯುತ್ತಾರೆ. ಬಳಿಕ ರಿಕ್ಷಾದ ನಂಬರ್ ಬರೆದು ಚೀಟಿಯನ್ನು ರಿಕ್ಷಾಚಾಲಕರಿಗೆ ನೀಡುತ್ತಾರೆ. ಪ್ರಯಾಣಿಕ ಇಳಿಯುವಾಗ ಹಣ ನೀಡಿ ಹೋಗುತ್ತಾನೆ. ಆದರೆ ಪ್ರಯಾಣಿಕನಿಗೆ ಚೀಟಿಯಲ್ಲಿ ಹೆಚ್ಚುವರಿ ಹಣ ಬರೆಯಲಾಗಿದೆ ಎನ್ನುವುದಕ್ಕೆ ಯಾವ ದಾಖಲೆಯೂ ಇರುವುದಿಲ್ಲ. ಚೀಟಿಯನ್ನು ಇವರು ಕೊಡುವುದು ರಿಕ್ಷಾ ಚಾಲಕರ ಕೈಗೆ. ಇನ್ನು ದಾಖಲೆ ಸಿಗುವುದಾದರೂ ಹೇಗೆ ? ಇದನ್ನು ವಿಶ್ಲೇಷಿಸಿ ಹೇಳಿದ್ದು ರೈಲ್ವೆೆ ಯಾತ್ರಿಿ ಸಂಘದ ಹನುಮಂತ ಕಾಮತ್ ಅವರು. ಬುದ್ಧಿವಂತರ ಜಿಲ್ಲೆಯಲ್ಲಿ ಅತಿ ಬುದ್ಧಿವಂತರ ಕಾರ್ಯ ವೈಖರಿ ಇದು.

ಸುಳ್ಳು ಹೇಳುವವರಿಗೇ ಬೆಲೆ

ಸುಳ್ಳು ಹೇಳುವವರಿಗೇ ಬೆಲೆ

ಕಂಕನಾಡಿ ಜಂಕ್ಷನ್ ನ ಕಥೆ ವಿಚಿತ್ರ. ಜಿಲ್ಲಾಾಧಿಕಾರಿ ಎ.ಬಿ. ಇಬ್ರಾಾಹಿಂ ಆಡಳಿತದಲ್ಲಿರುವಾಗ ಪ್ರೀಪೈಡ್ ಬೂತ್ ವ್ಯವಸ್ಥೆ ಜಾರಿಗೆ ಬಂತು. 15 ದಿನಗಳಲ್ಲಿಯೇ ಬೂತನ್ನು ಇಲ್ಲಿನ ರಿಕ್ಷಾ ಚಾಲಕರು ಬಲವಂತವಾಗಿ ಮುಚ್ಚಿಸಿದರು. ಏಕೆಂದರೆ ಅವರಿಗೆ ಸುಲಭವಾಗಿ ಸಿಗುವ ಆದಾಯವನ್ನು ತಪ್ಪಿಸುವ ವ್ಯವಸ್ಥೆ ಅವರಿಗೆ ಬೇಕಿಲ್ಲ. ಸುಳ್ಳು ಹೇಳುವವರನ್ನೇ ನಂಬುತ್ತಾರೆ.

ಲೂಟಿ ತಪ್ಪಿಸಲು ಆಗುತ್ತಿಲ್ಲ

ಲೂಟಿ ತಪ್ಪಿಸಲು ಆಗುತ್ತಿಲ್ಲ

ಕೇರಳ ಇರಲಿ, ಕರ್ನಾಟಕ ಇರಲಿ ಬಹುತೇಕ ಪ್ರೀಪೇಡ್ ಆಟೊ ರಿಕ್ಷಾ ಕೇಂದ್ರಗಳನ್ನು ಪೊಲೀಸರೇ ನಡೆಸುತ್ತಾಾರೆ. ನೆರೆಯ ರಾಜ್ಯದ ಕಾಸರಗೋಡು ಇರಬಹುದು, ನಮ್ಮ ರಾಜಧಾನಿ ಬೆಂಗಳೂರು ಇರಬಹುದು ಇಲ್ಲಿ ಪೊಲೀಸರೇ ನಡೆಸುತ್ತಾಾರೆ. ಆದರೆ ಸ್ಮಾಾಟ್ ಸಿಟಿಯಾಗುತ್ತಿರುವ, ಸ್ಮಾರ್ಟ್ ಜನರೇ ಇರುವ ಮಂಗಳೂರಲ್ಲಿ ಮಾತ್ರ ಓವರ್ ಸ್ಮಾರ್ಟ್ ವ್ಯವಸ್ಥೆ. ಹೆಚ್ಚುವರಿ ದರದ ಜತೆ ಚಾಲಕರ ಅಸಭ್ಯ ವರ್ತನೆ. ಹಾಗಾದರೆ ಈ ಹಗಲು ದರೋಡೆ ತಪ್ಪಿಸಲು ಏನು ಮಾಡಬೇಕು ? ಸಮಾಜದಲ್ಲಿ ಜನರಿಗೆ ಆಗುತ್ತಿರುವ ಲೂಟಿಯನ್ನು ತಪ್ಪಿಸಲು ಜಿಲ್ಲಾಾಡಳಿತ ಮನಸ್ಸು ಮಾಡಬೇಕು. ಈಗ ಪೊಲೀಸ್ ಕಮಿಷನರ್ ಚಂದ್ರಶೇಕರ್ ಮನಸ್ಸು ಮಾಡಿದರೆ ಇದು ಸುಲಭ ಸಾಧ್ಯ.

ಟ್ಯಾಕ್ಸಿಗೆ ಇಲ್ಲಿ ಅವಕಾಶವೇ ಇಲ್ಲ

ಟ್ಯಾಕ್ಸಿಗೆ ಇಲ್ಲಿ ಅವಕಾಶವೇ ಇಲ್ಲ

ಕಂಕನಾಡಿಗೆ ಬಲ್ಮಠದಿಂದ 60 ರು. ರಿಕ್ಷಾ ಬಾಡಿಗೆ. ಆದರೆ ರಿಕ್ಷಾದವರು 250ರಿಂದ 350 ರು. ತಗೋಳ್ತಾರೆ. ಈ ಪ್ರದೇಶಕ್ಕೆ ಕಡಿಮೆ ಬಾಡಿಗೆ ಬರುವ ವೋಲಾ, ಉಬರ್ ಟ್ಯಾಕ್ಸಿಗಳಿಗೆ ಇಲ್ಲಿ ಪ್ರವೇಶವೇ ಇಲ್ಲ. ಸ್ಥಳೀಯ ಚಾಲಕರ ಲಾಬಿ ಅಷ್ಟು ಪ್ರಬಲವಾಗಿದೆ. ಇಲ್ಲಿ ಗಲಾಟೆ ಆಗಿ ಆಗಿ ಈಗ ಓಲಾ, ಉಬರ್ ಟ್ಯಾಾಕ್ಸಿಯವರು ಬರುವುದೇ ಇಲ್ಲ.

ಗುತ್ತಿಗೆದಾರರಿಗೂ ಸಂಕಷ್ಟ?

ಗುತ್ತಿಗೆದಾರರಿಗೂ ಸಂಕಷ್ಟ?

ಕಾರ್ಪೊರೇಶನ್ ಬ್ಯಾಾಂಕ್‌ನವರು ಜಂಕ್ಷನ್‌ನಲ್ಲಿ ಪ್ರೀಪೈಡ್ ಕೌಂಟರ್ ಗೆ ಒಂದು ಶೆಡ್ ಮಾಡಿದರು. ಇದಕ್ಕೆ ವಿದ್ಯುತ್ ಸರಬರಾಜು ರೈಲ್ವೆ ಮಾಡಬೇಕು. ಆದರೆ ಅವರೂ ಕೂಡಾ ಸಾವಿರಾರು ರು. ಠೇವಣಿ ನೀಡಿ ಎಂದು ಮುಲಾಜಿಲ್ಲದೆ ಹೇಳಿದರು. ಆದರೆ ಸಿಗುವ ಚಿಲ್ಲರೆ ಹಣದಲ್ಲಿ ಅಷ್ಟೆಲ್ಲ ಹಣ ಪಾವತಿಸಲು ಸಾಧ್ಯವಿಲ್ಲ ಎಂದ ಗುತ್ತಿಗೆದಾರರು ವಿದ್ಯುತ್ ಇಲ್ಲದ ಕಾರಣ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಗೆ ಕೆಲಸ ಮಾಡುತ್ತಿದ್ದರು.

ಆದರೆ, ಮುಗಿದಿಲ್ಲ ಪ್ರಯಾಣಿಕರ ಪಡಿಪಾಟಲು

ಆದರೆ, ಮುಗಿದಿಲ್ಲ ಪ್ರಯಾಣಿಕರ ಪಡಿಪಾಟಲು

ರಿಕ್ಷಾ ಚಾಲಕರ ಗಲಾಟೆ ಸಹಿಸಲಾಗದೆ ಗುತ್ತಿಗೆದಾರರು ಪೊಲೀಸರಿಗೆ ಕರೆ ಮಾಡಿ ಹೇಳಿದರೆ ಸ್ಥಳಕ್ಕೆ ಬಂದ ಪೊಲೀಸರು ರಿಕ್ಷಾ ಚಾಲಕರ ಜತೆಯಲ್ಲಿ ಹರಟೆ ಹೊಡೆದು ಗುತ್ತಿಗೆದಾರರಿಗೆ ಒಂದಷ್ಟು ಬಿಟ್ಟಿ ಬುದ್ಧಿವಾದ ಹೇಳಿ ಹೋದರು. ಪೊಲೀಸರ ಈ ಮೆದು ಕ್ರಮಗಳನ್ನು ನೋಡಿದರೆ, ಪೊಲೀಸ್ ವ್ಯವಸ್ಥೆಯೂ ಅವರಿಗೆ ಬೆಂಬಲ ನೀಡುತ್ತಿದೆ ಎಂಬ ಅನುಮಾನಗಳು ಬರುತ್ತವೆ. ಹತ್ತು ಜನ ರಿಕ್ಷಾದವರು ರಗಳೆಯಿಂದಾಗಿ 15 ದಿನದಲ್ಲಿ ಕೌಂಟರ್ ಕತೆ ಮುಗಿದೇ ಹೋಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The prepaid system for auto rickshaws from Mangaluru Railway station to Mangaluru city has become a new burden for the passengers, as the minimum amount has been fixed to 230 Rs.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more