ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಕರಾವಳಿ ಜನರಿಗೆ ಬಿಯರ್ ಕೊಡಲ್ಲ ಅಂತಿದೆ ಅಬಕಾರಿ ಇಲಾಖೆ!

|
Google Oneindia Kannada News

ಬೆಂಗಳೂರು, ಸೆ.24: ಕರಾವಳಿ ಜನರಿಗೆ ಬಿಯರ್ ಕೊಡುವುದಿಲ್ಲ ದೇಸಿ ಮದ್ಯವನ್ನೇ ಮಾರಾಟ ಮಾಡಿ ಎಂದು ಅಬಕಾರಿ ಇಲಾಖೆ ಹೇಳಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳೇ ಬಿಯರ್‌ ನ ಅಭಾವ ಸೃಷ್ಟಿಸಿ, ದುಬಾರಿ ಬೆಲೆಯ ಮದ್ಯ ಸೇವನೆಗೆ ಪ್ರಚೋದಿಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿದೆ.

ಹೆಚ್ಚಿನ ಅಬಕಾರಿ ಆದಾಯಗಳಿಸುವ ಉದ್ದೇಶದಿಂದ ದೇಶಿ ಮದ್ಯ ಮಾರಾಟಕ್ಕೆ ಸರ್ಕಾರವೇ ಟಾರ್ಗೆಟ ನಿಗದಿ ಮಾಡುವ ಮೂಲಕ ಕರಾವಳಿಯಲ್ಲಿ ಬಿಯರ್ ಗೆ ಬರ ಸೃಷ್ಟಿಯಾಗಿದೆ.

ಎಂಆರ್‌ಪಿಗಿಂತ ಹೆಚ್ಚು ಹಣ ವಸೂಲಿ, ಬಾರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಎಂಆರ್‌ಪಿಗಿಂತ ಹೆಚ್ಚು ಹಣ ವಸೂಲಿ, ಬಾರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು

ಉಡುಪಿ ಜಿಲ್ಲೆಯಲ್ಲಿ 2 ತಿಂಗಳಿಂದ ಮದ್ಯ ಮಾರಾಟ ಸನ್ನದುದಾರರಿಗೆ ಹೆಚ್ಚು ಮದ್ಯ ಖರೀದಿಸಿ ಒತ್ತಾಯಿಸಲಾಗುತ್ತಿದೆ. ಬಿಯರ್ ಖರೀದಿಯನ್ನು ನಿರಾಕರಿಸಲಾಗುತ್ತಿದೆ. 100 ಬಾಕ್ಸ್ ಮದ್ಯವನ್ನು ಖರೀದಿ ಮಾಡಿದರೆ 40 ರಿಂದ 50 ಬಾಕ್ಸ್ ಬಿಯರ್ ನೀಡುತ್ತಿದ್ದಾರೆ, ಮದ್ಯದ ದರ ಹೆಚ್ಚಳದಿಂದ ಜನರು ಬಿಯರ್‌ನ್ನೇ ಇಷ್ಟಪಡುತ್ತಿದ್ದಾರೆ.

Excise dept. says no beer, only liquor in coastal Karnataka

ಕಾರ್ಕಳದ ಈ ಬಾರ್ ಗೆ ಪುಕ್ಕಟೆ ಪಿಕ್ ಅಪ್- ಡ್ರಾಪ್, ಆಟೋ ಇದೆ ಗುರೂ..ಕಾರ್ಕಳದ ಈ ಬಾರ್ ಗೆ ಪುಕ್ಕಟೆ ಪಿಕ್ ಅಪ್- ಡ್ರಾಪ್, ಆಟೋ ಇದೆ ಗುರೂ..

ಮದ್ಯದ ದುಬಾರಿ ಬೆಲೆ ಕಾರಣ ಹಾಗೂ ತಾಪಮಾನದ ಹಿನ್ನೆಲೆಯಲ್ಲಿ ಹೆಚ್ಚಾಗಿ ಬಿಯರ್ ಬಳಸುತ್ತಿದ್ದಾರೆ. ಆದರೆ ಅಬಖಾರಿ ಇಲಾಖೆಯೇ ಬಿಯರ್ ಬದಲು ಮದ್ಯ ಮಾರಾಟಕ್ಕೆ ಬಾರ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ಭಾರಿ ಒತ್ತಡ ಹೇರುತ್ತಿದೆ.

English summary
Department of excise has imposing restrictions on sale of beer and promoting Indian made liquor instead. Liquor sales representatives opposed the government move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X