ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಟ್ರಾಂಗ್ ರೂಂನಲ್ಲಿ ಭದ್ರವಾದ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ

|
Google Oneindia Kannada News

ಮಂಗಳೂರು, ಏಪ್ರಿಲ್ 20 :ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಮುಗಿದಿದೆ.ಕಳೆದ ಒಂದು ತಿಂಗಳಿನಿಂದ ಕರಾವಳಿಯಲ್ಲಿ ತಾರಕಕ್ಕೇರಿದ್ದ ಚುನಾವಣಾ ಜ್ವರ ಈಗ ತಣ್ಣಗಾಗಿದೆ. ಈಗ ಎಲ್ಲರ ಚಿತ್ತ ಮತ ಎಣಿಕೆ ಕೇಂದ್ರ ದತ್ತ ಕೇಂದ್ರೀಕರಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕ್ಷೇತ್ರದಲ್ಲಿ ಶೇ 77.90 ಮತದಾನ ದಾಖಲಾಗಿದೆ. ಇನ್ನು ಏನಿದ್ದರೂ ಸೋಲು ಗೆಲುವಿನ ಲೆಕ್ಕಾಚಾರ ಕ್ಷೇತ್ರದಲ್ಲಿ ಆರಂಭವಾಗಿದೆ. ಮೇ 23 ರಂದು ಎಲ್ಲಾ ಕುತೂಹಲಗಳಿಗೂ ಉತ್ತರ ದೊರಕಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 1861 ಮತಗಟ್ಟೆಗಳ ಮತಯಂತ್ರಗಳು ಮಂಗಳೂರು ತಲುಪಿದ್ದು ನಗರ ಹೊರವಲಯದ ಸುರತ್ಕಲ್‍ನ ಎನ್ ಐ ಟಿ ಕೆ ಇಂಜಿನಿಯರಿಂಗ್ ಕಾಲೇಜಿನ ಕಟ್ಟಡದಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.

ಪತ್ನಿ, ಸಹೋದರನ ಜೊತೆ ಬಂದು ಮತ ಹಾಕಿದ ವೀರೇಂದ್ರ ಹೆಗ್ಗಡೆ ಪತ್ನಿ, ಸಹೋದರನ ಜೊತೆ ಬಂದು ಮತ ಹಾಕಿದ ವೀರೇಂದ್ರ ಹೆಗ್ಗಡೆ

EVM shifted to strong rooms in NITK college

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಚುನಾವಣಾ ವೀಕ್ಷಕರಾದ ರಾಜೀವ್ ರತನ್ ಅವರ ಸಮ್ಮುಖದಲ್ಲಿ ಎಲ್ಲಾ ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿರಿಸಿ ಮುದ್ರೆ ಹಾಕಲಾಗಿದೆ.

ವೋಟಿಂಗ್ ಮಾಡಿ ಕರ್ತವ್ಯ ಮೆರೆದ ಅನಾರೋಗ್ಯ ಪೀಡಿತರು, ನವ ವಧು ವೋಟಿಂಗ್ ಮಾಡಿ ಕರ್ತವ್ಯ ಮೆರೆದ ಅನಾರೋಗ್ಯ ಪೀಡಿತರು, ನವ ವಧು

EVM shifted to strong rooms in NITK college

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಅತ್ಯಂತ ಭದ್ರತೆಯಲ್ಲಿ ತಂದಿರಿಸಲಾಗಿದ್ದು, ಎನ್ ಐ ಟಿ ಕೆ ಇಂಜಿನಿಯರಿಂಗ್ ಕಾಲೇಜಿನ ಕಟ್ಟಡಕ್ಕೆ ವಿಶೇಷ ಭದ್ರತಾ ಪಡೆ, ಪೊಲೀಸ್ ತಂಡ ಹಾಗೂ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ.ಮತಯಂತ್ರಗಳ ಪರಿಶೀಲನೆಯನ್ನು ಎನ್‍ಐಟಿಕೆಯಲ್ಲಿಂದು ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು ಅಪರ ಜಿಲ್ಲಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳು ತಹಸೀಲ್ದಾರರು, ರಾಜಕೀಯ ಪಕ್ಷದ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
polling finished in Dakshina Kannada Lok Sabha constituency .All EVM's from 1861 polling stations shifted to strong rooms in Surathkal NITK engineering college. EVM's kept in high security,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X