ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಕ್ಷಣೆಗಾಗಿ ಹಿಂದೂಗಳು ತಲವಾರ್ ಹೊಂದಬೇಕು: ಪ್ರಮೋದ್ ಮುತಾಲಿಕ್

|
Google Oneindia Kannada News

ಮಂಗಳೂರು, ಅಕ್ಟೋಬರ್ 9: ಹಿಂದೂ ಕುಟುಂಬಗಳು ರಕ್ಷಣೆಗೆ ತಲವಾರನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾರತ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ ಎಂದ ಪ್ರಮೋದ್ ಮುತಾಲಿಕ್ಭಾರತ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ ಎಂದ ಪ್ರಮೋದ್ ಮುತಾಲಿಕ್

ಶ್ರೀರಾಮ ಸೇನೆ ಹಾಗೂ ದುರ್ಗಾ ಸೇನೆ ಮಂಗಳೂರು ಕದ್ರಿಯಲ್ಲಿ ಆಯೋಜಿಸಿದ್ದ ಮಾತೃ ಪೂಜೆ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, "ಇಸ್ಲಾಮಿಕ್ ಶಕ್ತಿಗಳು ದೇಶವನ್ನು ಕಬಳಿಸಲು ಹವಣಿಸುತ್ತಿವೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Every Hindu home should have a Talwar for safety - Pramod Muthalik

ದೇಶದ ಉದ್ದಗಲಕ್ಕೂ ಮಸೀದಿ , ಪ್ರಾರ್ಥನಾ ಮಂದಿರಗಳನ್ನು ನಿರ್ಮಾಣ ಮಾಡಲು ಮುಸ್ಲಿಮರಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅದೇ ಮುಸ್ಲಿಮರು ಅಡ್ಡ ಬರುತ್ತಿದ್ದಾರೆ ಎಂದು ಕಿಡಿಕಾರಿದರು. ಶ್ರೀರಾಮ ಮಂದಿರಕ್ಕೆ ಅಡ್ಡ ಬರುತ್ತಿರುವ , ಗೋಹತ್ಯೆ ನಿಲ್ಲಿಸದ, ಭಾರತ್ ಮಾತಾ ಕಿ ಜೈ ಹೇಳದ ಮುಸ್ಲಿಮರಿಗೆ ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ ಹಾಕಬೇಕು ಎಂದು ಅವರು ಹೇಳಿದರು.

Every Hindu home should have a Talwar for safety - Pramod Muthalik

ಮುಸ್ಲಿಮರ ಅಂಗಡಿಗಳಲ್ಲಿ ವ್ಯಾಪಾರ ಮಾಡಬಾರದು ಎಂದು ಹೇಳಿದ ಅವರು ದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶದಲ್ಲಿ ಒಂದು ವೇಳೆ ಆಂತರಿಕ ಯುದ್ಧ, ಬೀದಿ ಕಾಳಗಗಳು ನಡೆದರೆ ದೇಶದ ರಕ್ಷಣೆಗೆ, ಕುಟುಂಬದ ರಕ್ಷಣೆಗೆ ಪ್ರತಿಯೊಂದು ಹಿಂದೂ ಕುಟುಂಬವೂ ಆಯುಧವಾಗಿ ತಲವಾರನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

Every Hindu home should have a Talwar for safety - Pramod Muthalik

ಕಾರ್ಯಕ್ರಮದ ಅಂಗವಾಗಿ ಮಾತೆಯರ ಪಾದಪೂಜೆ ಮಾಡಿ ಗೌರವ ಸಲ್ಲಿಸಲಾಯಿತು.

English summary
Every Hindu home should have a Talwar for safety said Pramod Muthalik the chief of the Sri Rama Sena in Mangaluru here on October 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X