ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಇನ್ನಿಲ್ಲ

|
Google Oneindia Kannada News

ಮಂಗಳೂರು, ಜುಲೈ 28 : ಕರಾವಳಿಯ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ (94) ಅವರು ಹೃದಯಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ಶನಿವಾರ ರಾತ್ರಿ ನಿಧನರಾದರು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಟಾಡಿಯ ಏರ್ಯಬೀಡು ಮನೆಯಲ್ಲಿದ್ದ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು . ಈ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನ ರಾಗಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಜೈಪಾಲ್ ರೆಡ್ಡಿ ವಿಧಿವಶಕಾಂಗ್ರೆಸ್ ಹಿರಿಯ ನಾಯಕ ಜೈಪಾಲ್ ರೆಡ್ಡಿ ವಿಧಿವಶ

94 ವರ್ಷ ಪ್ರಾಯದ ಏರ್ಯಾ ಲಕ್ಷ್ಮಿ ನಾರಾಯಣ ಆಳ್ವ ತುಳು, ಕನ್ನಡದಲ್ಲಿ ಕಾದಂಬರಿ, ಸಾಹಿತ್ಯ ರಚಿಸಿದ್ದರು. ಸ್ವಾತಂತ್ರ ಪೂರ್ವದಲ್ಲಿ ಲಕ್ಷ್ಮೀ ನಾರಾಯಣ ಆಳ್ವ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು.

Erya Lakshminarayana Alva Passes away

ಅಂಕಣಕಾರರಾಗಿ, ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ, ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ರೂವಾರಿಯಾಗಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಗುರುತಿಸಿ ಕೊಂಡಿದ್ದರು. 1987 ರಿಂದ 1992 ವರೆಗೆ ಅವರು ವಿಶ್ವ ಹಿಂದೂ ಪರಿಷತ್ ರಾಜ್ಯ ಅಧ್ಯಕ್ಷರಾಗಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ . ಡಿ ವೀರೇಂದ್ರ ಹೆಗ್ಗಡೆಯವರ ನಿಕಟವರ್ತಿ ಯಾಗಿ ಲಕ್ಷ್ಮಿ ನಾರಾಯಣ ಆಳ್ವ ಗುರುತಿಸಿಕೊಂಡಿದ್ದರು. ಏರ್ಯ ಅವರು ಪತ್ನಿ ಹಾಗೂ ಮಗಳು ಅಳಿಯ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರ ರನ್ನು ಅಗಲಿದ್ದಾರೆ.

English summary
Noted litterateur of Dakshina Kannada Erya Lakshminarayana Alva (94) passed away on Saturday due to heart attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X