ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರ್ನಾಕುಲುಂ-ಮಂಗಳೂರು-ಓಖಾ ವಿಶೇಷ ರೈಲು; ವೇಳಾಪಟ್ಟಿ

|
Google Oneindia Kannada News

ಮಂಗಳೂರು, ಫೆಬ್ರವರಿ 10: ಕೇರಳ-ಕರ್ನಾಟಕ-ಗುಜರಾತ್ ನಡುವೆ ವಿಶೇಷ ರೈಲು ವಾರಕ್ಕೊಮ್ಮೆ ಸಂಚಾರ ನಡೆಸಲಿದೆ. ಫೆಬ್ರವರಿ 14ರಿಂದ ಏಪ್ರಿಲ್ 25 ತನಕ ಈ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೇರಳದ ಎರ್ನಾಕುಲಂನಿಂದ ಹೊರಡುವ ರೈಲು ಮಂಗಳೂರು ಮೂಲಕ ಗುಜರಾತ್ ರಾಜ್ಯದ ಓಖಾಗೆ ಸಂಚಾರ ನಡೆಸಲಿದೆ. ಈ ರೈಲಿನ ಎಲ್ಲಾ ಸೀಟುಗಳು ಮೀಸಲಿರಿಸಿದ ಆಸನಗಳಾಗಿವೆ.

ರೈಲು ನಂಬರ್ 06438 ಎರ್ನಾಕುಲಂ ಜಂಕ್ಷನ್‌ನಿಂದ ಫೆಬ್ರವರಿ 14ರಿಂದ ಏಪ್ರಿಲ್ 25ರ ತನಕ ಸಂಚಾರ ನಡೆಸಲಿದೆ. ಪ್ರತಿ ಶನಿವಾರ ಸಂಜೆ 7.35ಕ್ಕೆ ಹೊರಡುವ ರೈಲು ಸೋಮವಾರ ಸಂಜೆ 4.40ಕ್ಕೆ ಓಖಾ ತಲುಪಪಿದೆ.

 Ernakulam Mangaluru Okha Special Express Train Schedule

ರೈಲು ಸಂಖ್ಯೆ 06437 ಫೆಬ್ರವರಿ 17ರಿಂದ ಏಪ್ರಿಲ್ 28ರ ತನಕ ಪ್ರತಿ ಬುಧವಾರ ಬೆಳಗ್ಗೆ 6.45ಕ್ಕೆ ಹೊರಡಲಿದ್ದು, ಗುರುವಾರ ರಾತ್ರಿ 11.55ಕ್ಕೆ ಎರ್ನಾಕುಲಂಗೆ ತಲುಪಲಿದೆ.

ಈ ರೈಲಿನಲ್ಲಿ 19 ಬೋಗಿಗಳಿವೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ರೈಲು ಅಲುವಾ, ತ್ರಿಶೂರ್, ಶೋರ್ನೂರು ಜಂಕ್ಷನ್, ಪಟ್ಟಾಂಬಿ, ಕುಟ್ಟಿಪುರಂ, ಪರಪ್ಪನಂಗಡಿ, ಕೋಝಿಕ್ಕೋಡ್, ಕುಯಿಲಾಂಡಿ, ವಡಕ್ಕರ, ಕಣ್ಣೂರು ಪಯ್ಯನೂರು ನಿಲ್ದಾಣದ ಮೂಲಕ ಸಾಗಲಿದೆ.

ರೈಲು ಕಾಸರಗೋಡು, ಮಂಗಳೂರು ಜಂಕ್ಷನ್, ಸುರತ್ಕಲ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್, ಭಟ್ಕಳ, ಹೊನ್ನಾವರ, ಕಾರವಾರ, ಮಡಗಾಂವ್ ಜಂಕ್ಷನ್, ಕಂಕವಲಿ, ರತ್ನಗಿರಿ, ಮನಗಾಂವ್, ಪನ್ವೇಲ್, ಭಿವಂಡಿ ರೋಡ್, ವಸಾಯಿ ರೋಡ್, ವಾಪಿ, ಸೂರತ್, ವಡೋದರಾ ಜಂಕ್ಷನ್, ಆನಂದ್ ಜಂಕ್ಷನ್, ಅಹಮದಾಬಾದ್ ಜಂಕ್ಷನ್, ರಾಜ್ ಕೋಟ್ ಜಂಕ್ಷನ್‌ಗಳಲ್ಲಿ ನಿಲುಗಡೆಗೊಳ್ಳಲಿದೆ.

English summary
Konkan railway will run Ernakulam-Mangaluru-Okha special express train weekly once. Train will run from February 14, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X