ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಳುನಾಡಿನ ಬಾವುಟದ ಬಣ್ಣವನ್ನು ಚಪ್ಪಲಿಗೆ ಎಡಿಟ್ ಮಾಡಿದ್ದ ವಿದ್ಯಾರ್ಥಿ ಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 19: ತುಳುನಾಡಿನ ಬಾವುಟದ ಬಣ್ಣವನ್ನು ಚಪ್ಪಲಿಗೆ ಎಡಿಟ್ ಮಾಡಿದ್ದ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಶ್ರೀರಾಂಪುರ ನಿವಾಸಿ ಸೂರ್ಯ ಎನ್.ಕೆ. ಬಂಧಿತ ಆರೋಪಿಯಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ಟ್ರೋಲ್ ಪೇಜ್ ಒಂದರಲ್ಲಿ ಬಂಧಿತ ಆರೋಪಿ ತುಳುನಾಡಿನ ಬಾವುಟವಾದ ಸೂರ್ಯ- ಚಂದ್ರ ಮತ್ತು ಕೇಪುಲ ಕೆಂಪುಬಣ್ಣವನ್ನು ಚಪ್ಪಲಿಗೆ ಎಡಿಟ್ ಮಾಡಿ, ಅಶ್ಲೀಲ ಬರಹದ ಕಮೆಂಟ್‌ನ್ನು ಪೋಸ್ಟ್ ಮಾಡಿದ್ದ.

ತುಳುವನ್ನು ರಾಜ್ಯಭಾಷೆಯಾಗಿ ಘೋಷಿಸುವಂತೆ ಟ್ವಿಟರ್ ಅಭಿಯಾನತುಳುವನ್ನು ರಾಜ್ಯಭಾಷೆಯಾಗಿ ಘೋಷಿಸುವಂತೆ ಟ್ವಿಟರ್ ಅಭಿಯಾನ

ಈ ಕಮೆಂಟ್‌ಗೆ ತುಳುವರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ತುಳುನಾಡಿನ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರುವ ಬಗ್ಗೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದರು.

Mangaluru: Engineering Student Arrested For Insulting Tulu Nadu Flag

ಈ ಬಗ್ಗೆ ಮಂಗಳೂರಿನ ಕಾರ್ಪೋರೇಟರ್ ಶಶಿಧರ್ ಹೆಗ್ಡೆ, ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್‌ರನ್ನು ಭೇಟಿಯಾಗಿ ಆರೋಪಿಯ ವಿರುದ್ಧ ಕ್ರಮಕ್ಕೆ ದೂರು ನೀಡಿದ್ದರು.

Mangaluru: Engineering Student Arrested For Insulting Tulu Nadu Flag

Recommended Video

ಫ್ಲೈಯಿಂಗ್ ಸಿಖ್ Milka Singh ಕೊರೊನಾಗೆ ಬಲಿ | Oneindia Kannada

ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ ಮಂಗಳೂರು ಬರ್ಕೆ ಠಾಣಾ ಪೊಲೀಸರ ತಂಡ ಆರೋಪಿಯನ್ನು ಶ್ರೀರಾಂಪುರದ ಆತನ ಮನೆಯಿಂದ ವಶಪಡಿಸಿಕೊಂಡು ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಆನಂತರ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ವಿರುದ್ಧ 40/ 2021, ಕಲಂ 153(A) 505(2) ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

English summary
Mangaluru police have arrested a Engineering student of Bengaluru, who has insulted the color of the Tulunadu flag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X