ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರೆಂಟ್ ಬಿಲ್ ನೋಡಿ ಶಾಕ್ ಆದ ಕಲ್ಲುಗುಂಡಿ ಗ್ರಾಮಸ್ಥರು!

|
Google Oneindia Kannada News

ಮಂಗಳೂರು, ಡಿಸೆಂಬರ್ 20: ತಿಂಗಳ ವಿದ್ಯುತ್ ಬಿಲ್ ಇಂತಿಷ್ಟೇ ಬರುತ್ತದೆ ಎಂಬ ಲೆಕ್ಕಾಚಾರ ಪ್ರತಿಯೊಬ್ಬರಿಗೂ ಇರುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಬಿಲ್ ಕಡಿಮೆ. ಆದರೆ ತಿಂಗಳಿಗೆ 80 , 100 ರೂಪಾಯಿ ವಿದ್ಯುತ್ ಬಿಲ್ ಬರುತ್ತಿದ್ದ ಆ ಮನೆ ಮಂದಿಗೆ ಈ ಬಾರಿಯ ಬಿಲ್ ನೋಡಿ ಮನೆಯ ಮೇಲ್ಛಾವಣಿಯೇ ತಲೆ ಮೇಲೆ ಬಿದ್ದಂತ ಅನುಭವಾಗಿದೆ.

ನೆಲಮಂಗಲ ಬಳಿ ಶೀಘ್ರ ಕಸದಿಂದ ವಿದ್ಯುತ್ ತಯಾರಿಕಾ ಘಟಕ: ಪರಮೇಶ್ವರನೆಲಮಂಗಲ ಬಳಿ ಶೀಘ್ರ ಕಸದಿಂದ ವಿದ್ಯುತ್ ತಯಾರಿಕಾ ಘಟಕ: ಪರಮೇಶ್ವರ

ಹೌದು, ವಿದ್ಯುತ್ ಸರಬರಾಜು ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಮನೆಗಳಿಗೆ ನೀಡುವ ಬಿಲ್ ಗಳು ಮನೆ ಮಂದಿಗೆಲ್ಲಾ ಕರೆಂಟ್ ಶಾಕ್ ನೀಡುತ್ತಿವೆ. ಸುಳ್ಯದ ಗ್ರಾಮೀಣ ಭಾಗ ಕಲ್ಲುಗುಂಡಿಯ ಕೆಲವು ಮನೆಗಳಿಗೆ ವಿತರಣೆಯಾದ ಬಿಲ್ ಗಳು ಮನೆ ಮಂದಿಗೆ ಶಾಕ್ ನೀಡಿದೆ. ತಿಂಗಳಿಗೆ 80 ರೂಪಾಯಿಯಂತೆ ಎರಡು ತಿಂಗಳಿಗೆ 230ರೂಪಾಯಿ ಆಗುತ್ತಿದ್ದ ಕರಂಟ್ ಬಿಲ್ ಈ ಬಾರಿ ಬರೋಬ್ಬರಿ 9000 ಬಂದಿದೆ.

Electricity bills shocks villagers of Sullia

ಇನ್ನೊಂದು ಕಡೆ ಅಂಗಡಿಯಾತನಿಗೆ ತಿಂಗಳಿಗೆ 1500 ಬರುತ್ತಿದ್ದ ಕರೆಂಟ್ ಬಿಲ್ ಈ ಬಾರಿ 7 ಲಕ್ಷದ 66 ಸಾವಿರ ರೂಪಾಯಿ ಬಿಲ್‌ ಬಂದಿದೆ. ಪ್ರತಿ ಬಾರಿಯೂ ಮೆಸ್ಕಾ ನಿಂದ ಈ ರೀತಿಯ ಲೆಕ್ಕವಿಲ್ಲದ ಬಿಲ್ ಬರುತ್ತಿದ್ದು, ಕೆಲವು ಗ್ರಾಹಕರು ಇದನ್ನು ನಿಜವೆಂದೇ ನಂಬಿ ಪಾವತಿ ಮಾಡುತ್ತಿದ್ದಾರೆ.

ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು?ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು?

ಅಲ್ಲದೇ ಪ್ರಶ್ನಿಸಲು ಹೋದಲ್ಲಿ ಮೆಸ್ಕಾಂ ಅಧಿಕಾರಿಗಳು ತಮ್ಮ ತಪ್ಪನ್ನು ಸಮರ್ಥಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಇದೆ.

English summary
Electricity bill from KPTCL shocks villagers of Kallagundi near Sullia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X