ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರೀಯ ಯೂತ್ ಅಥ್ಲೆಟಿಕ್ಸ್ ಗೆ ಆಳ್ವಾಸ್ ನ 8 ಕ್ರೀಡಾಪಟುಗಳು ಆಯ್ಕೆ

|
Google Oneindia Kannada News

ಮಂಗಳೂರು, ಫೆಬ್ರವರಿ 06: ರಾಜ್ಯ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಆಳ್ವಾಸ್ ನ 8 ಮಂದಿ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮಂಗಳೂರಿನ ಆದಿತ್ಯ ಶೆಣೈರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮಂಗಳೂರಿನ ಆದಿತ್ಯ ಶೆಣೈ

ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಮೈಸೂರು ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ಮೈಸೂರಿನ ಚಾಮುಂಡಿ ವಿಹಾರ ಮೈದಾನದಲ್ಲಿ ನಡೆದ 18ರ ರಾಜ್ಯ ಯೂತ್ ಅಥ್ಲೆಟಿಕ್ಸ್ ನಲ್ಲಿ ಆಳ್ವಾಸ್ ಸಂಸ್ಥೆಯ ಕ್ರೀಡಾಪಟುಗಳು 16 ಪದಕಗಳನ್ನು ಪಡೆದಿದ್ದಾರೆ.
ಈ ಪೈಕಿ 8 ಮಂದಿ ಕ್ರೀಡಾಪಟುಗಳು ಫೆಬ್ರವರಿ 19ರಿಂದ 23ರವರೆಗೆ ರಾಯಪುರದಲ್ಲಿ ನಡೆಯುವ ರಾಷ್ಟ್ರೀಯ ಯೂತ್ ಅಥ್ಲೆಟಿಕ್ಸ್ ಗೆ ಆಯ್ಕೆಯಾಗಿದ್ದಾರೆ.

 ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್ ಗೆ 17 ಪದಕ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್ ಗೆ 17 ಪದಕ

ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಸಂಸ್ಥೆಯ ಚೈತ್ರ 1500ಮೀ, 200ಮೀ ಓಟದಲ್ಲಿ ಪ್ರಥಮ, ಧನುಷಾ ಶೆಟ್ಟಿ 5 ಕಿ.ಮೀ. ನಡಿಗೆಯಲ್ಲಿ ಪ್ರಥಮ, ಪಲ್ಲವಿ ಎತ್ತರ ಜಿಗಿತದಲ್ಲಿ ಪ್ರಥಮ, ಸಿಂಚನ ಎತ್ತರ ಜಿಗಿತದಲ್ಲಿ ದ್ವಿತೀಯ, ಬಿಲುಲಾ ಗುಂಡು ಎಸೆತದಲ್ಲಿ ತೃತೀಯ, ವಿಜಯಲಕ್ಷ್ಮೀ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

Eight athletes of Alavs institution selected for National youth championship

ಬಾಲಕರ ವಿಭಾಗದಲ್ಲಿ ಮಹಾಂತೇಶ್ 400ಮೀ. ಪ್ರಥಮ, 200ಮೀ.ನಲ್ಲಿ ದ್ವಿತೀಯ, ಹ್ಯಾಮರ್ ಎಸೆತದಲ್ಲಿ ಮುತ್ತಪ್ಪ ಪ್ರಥಮ, ದೀಶತ್ 110 ಹರ್ಡಲ್ಸ್ ನಲ್ಲಿ ಪ್ರಥಮ, ಕಿರಣ್ ಪೋಲ್ ವಾಲ್ಟ್ ನಲ್ಲಿ ಪ್ರಥಮ, ನಾಗೇಂದ್ರ ಅಣ್ಣಪ್ಪ ಗುಂಡು ಎಸೆತ, ಚಕ್ರ ಎಸೆತದಲ್ಲಿ ಪ್ರಥಮ, ನಾಗರಾಜ್ 10 ಕಿ.ಮೀ ನಡಿಗೆಯಲ್ಲಿ ಪ್ರಥಮ ಸತೀಶ್ 3000 ಮೀ. ದ್ವಿತೀಯ, ರೋಹಿತ್ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

English summary
Eight athletes of Alav's institution selected for National youth championship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X