ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮೂಹಿಕ ಅತ್ಯಾಚಾರದ ವಿಡಿಯೋ ವೈರಲ್ ಮಾಡಿದ 8 ಜನರ ಬಂಧನ

|
Google Oneindia Kannada News

ಮಂಗಳೂರು, ಜುಲೈ 5: ಪುತ್ತೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್ ಮಾಡಿದ್ದ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಕುರಿತು ಪೊಲೀಸರು ಸು ಮೋಟೊ ಪ್ರಕರಣ ದಾಖಲಿಸಿಕೊಂಡಿದ್ದರು. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ: 66 ಇ, 67 ಎ, ಐಟಿ ಕಾಯ್ದೆ 2000 ಮತ್ತು ಕಲಂ 4, 6 ಅನ್ವಯ ಸು ಮೋಟೊ ಪ್ರಕರಣ ದಾಖಲಾಗಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದರು.

 ಪುತ್ತೂರಿನಲ್ಲಿ ಅತ್ಯಾಚಾರ ಪ್ರಕರಣ; ಬೆದರಿಕೆ ಹಾಕಿದ್ದ ಆರೋಪಿಗಳು ಪುತ್ತೂರಿನಲ್ಲಿ ಅತ್ಯಾಚಾರ ಪ್ರಕರಣ; ಬೆದರಿಕೆ ಹಾಕಿದ್ದ ಆರೋಪಿಗಳು

ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿ ಬಂಟ್ವಾಳ ನಿವಾಸಿ ಬಂಧಿತ ಆರೋಪಿ ಪ್ರಖ್ಯಾತ್, ತಾನು ತನ್ನ ಸ್ನೇಹಿತರೊಂದಿಗೆ ಸೇರಿ ನಡೆಸಿರುವ ಸಾಮೂಹಿಕ ಅತ್ಯಾಚಾರದ ವಿಡಿಯೋವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದ್ದಿದ್ದ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.

eight arrested for circulating gang raper video

ಆ ವಿಡಿಯೋವನ್ನು ಒಂದು ಆಪ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದು ವಿಡಿಯೋವನ್ನು ಅದೇ ಕಾಲೇಜಿನ ವಿದ್ಯಾರ್ಥಿ ಮೋಹಿತ್ ತನ್ನ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದ. ಕೆಲ ದಿನಗಳ ಹಿಂದೆ ಕಾಲೇಜಿನ ವಿದ್ಯಾರ್ಥಿಗಳ ಚುನಾವಣೆ ಸಮಯ ವಿದ್ಯಾರ್ಥಿಗಳ ನಡುವೆ ವೈಷಮ್ಯ ಬೆಳೆದಿದ್ದು, ಅತ್ಯಾಚಾರ ಮಾಡಿದವರ ಗುಂಪಿನಲ್ಲಿದ್ದ ಕೆಲವರ ತೇಜೋವಧೆ ಮಾಡುವ ಉದ್ದೇಶದಿಂದ ಶ್ರೇಯಾನ್ಸ್ ಎಸ್ ಎಂಬಾತ ತನಗೆ ಬೇರೆಯವರ ಮೂಲಕ ದೊರೆತ ಅತ್ಯಾಚಾರದ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ.

ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ವಿಡಿಯೋ ವೈರಲ್; ಸು ಮೋಟೊ ಪ್ರಕರಣವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ವಿಡಿಯೋ ವೈರಲ್; ಸು ಮೋಟೊ ಪ್ರಕರಣ

ಅತ್ಯಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮುರಳೀಧರ (29), ಚಂದ್ರಶೇಖರ ಮಯ್ಯ ( 47 ) ,ಶ್ರೇಯಾನ್ಸ್ ಎಸ್ (20), ಪೂವಪ್ಪ ಕೆ (26), ಪವನ್ ಕುಮಾರ್ ಡಿ (19), ಮೋಹಿತ್ ಪಿ ಜಿ (18 ), ಧ್ಯಾನ್‌ ಎ ಎನ್‌ (18), ಅದ್ವಿತ್ ಕುಮಾರ್‌ ನಾಯ್ಕ್ ಎನ್‌ (19 ) ಎಂದು ಗುರುತಿಸಲಾಗಿದೆ.

English summary
8 accused have been arrested for circulating the video of gang rape in social media. In connection to this, police has registered suo moto case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X