ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಕ್ಕೆ ಸುಬ್ರಮಣ್ಯದಲ್ಲಿ ಮಡೆಸ್ನಾನದ ಬದಲಿಗೆ ಎಡೆಸ್ನಾನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 16 : ಕುಕ್ಕೆ ಸುಬ್ರಮಣ್ಯದಲ್ಲಿ ಚಂಪಾ ಷಷ್ಠಿ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ. ಮಂಗಳವಾರ ಮಡೆಸ್ನಾನದ ಬದಲು ಎಡೆಸ್ನಾನ ಸೇವೆ ಮಾಡಲು ಭಕ್ತಾದಿಗಳಿಗೆ ಅವಕಾಶ ನೀಡಲಾಗಿತ್ತು. 130ಕ್ಕೂ ಅಧಿಕ ಭಕ್ತರು ಮಡೆಸ್ನಾನದಲ್ಲಿ ಪಾಲ್ಗೊಂಡಿದ್ದರು.

ಕುಕ್ಕೆ ಸುಬ್ರಮಣ್ಯದಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ 'ಎಡೆಸ್ನಾನ' ನಡೆಸಲು ಧಾರ್ಮಿಕ ದತ್ತಿ ಇಲಾಖೆ ಅವಕಾಶ ಕಲ್ಪಿಸಿದೆ. ಮಡೆ-ಮಡೆಸ್ನಾನವನ್ನು ಆಚರಿಸುದಕ್ಕೆ ಕೆಲವು ಸ್ವಾಮೀಜಿಗಳು, ಪ್ರಗತಿಪರ ಚಿಂತಕರಿಂದ ಆಕ್ಷೇಪ ಕೇಳಿಬಂದಿತ್ತು. [ಮಡೆಸ್ನಾನಕ್ಕೆ ಪರ್ಯಾಯ ವ್ಯವಸ್ಥೆ ಏನು? ಹೀಗೂ ಮಾಡಬಹುದು]

kukke subramanya

ಮಡೆ-ಮಡೆಸ್ನಾನ ಪದ್ಧತಿಯನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಮತ್ತು ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಮಡೆ-ಮಡೆಸ್ನಾನಕ್ಕೆ ಪರ್ಯಾಯವಾಗಿ ಎಡೆಸ್ನಾನ ಅಂದರೆ, ದೇವರ ನೈವೇದ್ಯ ಇರಿಸಲಾದ ಎಲೆಗಳ ಮೇಲೆ ಉರುಳು ಸೇವೆ ಕೈಗೊಳ್ಳಲು ಅವಕಾಶ ಕಲ್ಪಿಸುವುದಾಗಿ ಸರ್ಕಾರದ ವತಿಯಿಂದ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಲಾಗಿತ್ತು. [ಎಂಜಲೆಲೆಯ ಮೇಲೆ ಉರುಳಲು ಸಿದ್ಧ ಎನ್ನುತ್ತಿದ್ದಾರೆ ಮಲೆಕುಡಿಯರು]

ಸರ್ಕಾರ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ನ್ಯಾಯಾಲಯ ಮಾನ್ಯ ಮಾಡಿದ್ದು, ದೇವಸ್ಥಾನದಲ್ಲಿ ಯಾವುದೇ ಪಂಕ್ತಿ ಬೇಧವನ್ನು ಧರ್ಮ, ಮತ, ಜಾತಿ ಹಾಗೂ ಲಿಂಗ ತಾರತಮ್ಯದ ಆಧಾರದಲ್ಲಿ ಉತ್ತೇಜಿಸತಕ್ಕದ್ದಲ್ಲ ಅಥವಾ ಅನುಮತಿಸತಕ್ಕದ್ದಲ್ಲ ಎಂಬ ಷರತ್ತಿನೊಂದಿಗೆ ಮಡೆ-ಮಡೆಸ್ನಾದ ಬದಲಿಗೆ ಎಡೆಸ್ನಾನ ಸೇವೆಗೆ ಒಪ್ಪಿಗೆ ನೀಡಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ. [ದೇವಾಲಯದ ಆನ್ ಲೈನ್ ಸೇವೆ ಬುಕ್ ಮಾಡುವುದು ಹೇಗೆ?]

ಮಂಗಳವಾರದಿಂದ ಎಡೆಸ್ನಾನ ಆರಂಭವಾಗಿದ್ದು, ದೇವಾಲಯದಲ್ಲಿ ನಡೆದ ಮಹಾಪೂಜೆಯ ನಂತರ ಪ್ರಸಾದವನ್ನು ಗೋವುಗಳಿಗೆ ತಿನ್ನಲು ಕೊಟ್ಟು, ನಂತರ ಆ ಬಾಳೆ ಎಲೆಗಳ ಮೇಲೆ ಭಕ್ತರು ಹೊರಾಂಗಣದಲ್ಲಿ ಉರುಳು ಸೇವೆ ನಡೆಸಲು ಅವಕಾಶ ನೀಡಲಾಗಿದೆ.

English summary
Ede snana the ritual of rolling over the prasadam began at Kukke Subrahmanya temple on Tuesday. 130 devotees from different parts of the state took part in the ritual. Ede snana will be performed on Wednesday and Thursday also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X