• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಸರಗೋಡಿನ ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿ ನಿಧನ

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಸೆಪ್ಟೆಂಬರ್ 6: ಕೇರಳದ ಕಾಸರಗೋಡು ಜಿಲ್ಲೆಯ ಎಡನೀರು ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತೀ ಸ್ವಾಮೀಜಿಗಳು ಶನಿವಾರ ನಿಧನ ಹೊಂದಿದ್ದಾರೆ.

76 ವರ್ಷ ವಯಸ್ಸಿನ ಕೇಶವಾನಂದ ಭಾರತೀ ಸ್ವಾಮೀಜಿ ಧಾರ್ಮಿಕವಾಗಿ, ಸಾಮಾಜಿಕವಾಗಿ ಸಕ್ರಿಯರಾಗಿದ್ದರು. ಗಡಿನಾಡಿನ ಸಂಸ್ಥಾನದಲ್ಲಿ ಯಕ್ಷಗಾನ, ಸಂಗೀತದ ಕೇಂದ್ರ ಮಾಡಿದ್ದರು.

ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದಾಗ ಕೋಮಾದಿಂದ ಎದ್ದ ವೃದ್ಧೆ!

ಯಕ್ಷಗಾನ ಕಲೆಯ ಮೇಲೆ ಅತೀ ಹೆಚ್ಚು ಪ್ರೀತಿ ಹೊಂದಿದ್ದ ಕೇಶವಾನಂದ ಭಾರತೀ ಸ್ವಾಮೀಜಿ, ಮೇಳವನ್ನು ಮುನ್ನಡೆಸುವುದಲ್ಲದೇ ಸ್ವತಃ ತಾವೇ ಭಾಗವತಿಕೆಯನ್ನು ನಡೆಸುತ್ತಿದ್ದರು.

ಕಾಸರಗೋಡಿನ ಸಂಸ್ಥಾನದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗನ್ನು ನಡೆಸುತ್ತಿದ್ದರಲ್ಲದೇ, ಸ್ವಾಮೀಜಿ ಹರಿಕಥೆಗಳನ್ನು ಹೇಳುತ್ತಿದ್ದರು. ಕರಾವಳಿಯ ಪ್ರಸಿದ್ಧ ಯಕ್ಷಗಾನದ ಮೇಲೆ ಶ್ರೀಗಳಿಗೆ ವಿಶೇಷ ಒಲವಿತ್ತು.

ಪ್ರತಿ ವರ್ಷ ಯಕ್ಷಗಾನ ಸಪ್ತಾಹ, ತಾಳಮದ್ದಳೆ ಕೂಟಗಳನ್ನು ನಡೆಸುತ್ತಿದ್ದರು. ಇತ್ತೀಚಿಗೆ ಸ್ವಾಮೀಜಿಗಳು 60ನೇ ವರ್ಷದ ಚಾತುರ್ಮಾಸ್ಯ ವ್ರತ ಆಚರಿಸಿದ್ದರು.

English summary
Edaneeru Keshavananda Bharathi Swamiji of the Kasargodu district in the state of Kerala have died on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X