ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈಕಂಬದ ಹತ್ತಿರ ಗುಡ್ಡಕುಸಿತ: ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳ ಸಾವು

|
Google Oneindia Kannada News

ಮಂಗಳೂರು, ಜುಲೈ 5: ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ-ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಗುಡ್ಡ ಕುಸಿತದಿಂದ ಎರಡು ಮನೆಗಳು ನಾಶವಾಗಿದ್ದು, ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಬಂಗ್ಲಗುಡ್ಡೆಯಲ್ಲಿ ಮಧ್ಯಾಹ್ನದ ವೇಳೆಗೆ ಉಂಟಾದ ಗುಡ್ಡ ಕುಸಿತದಿಂದ ಮನೆಯೊಂದು ಧರಾಶಾಯಿಯಾಗಿದೆ. ಒಂದು‌ ಮನೆ ಕುಸಿತದ ಬಳಿಕ ಆ ಮನೆಯ ಮೇಲಿನ ಭಾಗದಲ್ಲಿ ಇದ್ದ ಮತ್ತೊಂದು‌ ಮನೆಯೂ ಕುಸಿದಿದೆ. ಮೊದಲು ನಾಶವಾದ ಮನೆಯಲ್ಲಿದ್ದ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ಇದೀಗ ಆ ಮಕ್ಕಳ ಮೃತದೇಹ ಪತ್ತೆಯಾಗಿವೆ.

Due To The Heavy Rain: Landslide Near Kaikamba, Two Houses Destroyed

ಲಾಕ್‌ಡೌನ್ ಮಾರ್ಗಸೂಚಿ: ಬುದ್ಧಿವಂತರ ಜಿಲ್ಲೆಯಲ್ಲಿ ಹೀಗೇಕೆ? ಲಾಕ್‌ಡೌನ್ ಮಾರ್ಗಸೂಚಿ: ಬುದ್ಧಿವಂತರ ಜಿಲ್ಲೆಯಲ್ಲಿ ಹೀಗೇಕೆ?

ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಬೆಂಬಿಡದ ಮಳೆಯಾಗಿದ್ದ ಪರಿಣಾಮ ಗುಡ್ಡ ಕುಸಿತ ಉಂಟಾಗಿದೆ. ಮೊದಲು ಕುಸಿತಗೊಂಡ ಮನೆ ಮಂದಿ ಕುಸಿತಗೊಳ್ಳುತ್ತಿದ್ದಂತೆ ಹೊರ ಓಡಿದ್ದರು.

ಆದರೆ ಮನೆಯಲ್ಲಿ‌ ಮಲಗಿದ್ದ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಒಂದು ಮನೆಯ ಮೇಲಿನ ಭಾಗದಲ್ಲಿ ಇದ್ದ ಮನೆ ಮಂದಿಯೂ ಹೊರ ಓಡಿ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಮಣ್ಣಿನಡಿ ಸಿಲುಕಿದ್ದ ಹತ್ತು ವರ್ಷದ ಬಾಲಕಿ, ಹದಿನಾರು ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದೆ.

ಇಂದು ಮಧ್ಯಾಹ್ನ 2.30 ರ ವೇಳೆಗೆ ಮಂಗಳೂರಿನ ಗುರುಪುರದಲ್ಲಿ ಸಂಭವಿಸಿದ ಘಟನೆಯಲ್ಲಿ ನಾಲ್ಕು ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಮಣ್ಣಿನ ಅಡಿಯಲ್ಲಿ ಇಬ್ಬರು ಸಿಲುಕಿದ್ದು, ಎನ್‌ಡಿಆರ್ಎಫ್ ಸಿಬ್ಬಂದಿ ನಡೆಸಿದ ರಕ್ಷಣಾ ಕಾರ್ಯಚರಣೆಯಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.

English summary
Two houses were destroyed for Landslide and two children were stucked in Mud, This happened In Kaikamba's Banglagudde in Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X