ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಗ್ಸ್ ಪ್ರಕರಣ; ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ನೋಟಿಸ್

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 24 : ಡ್ರಗ್ಸ್ ಪ್ರಕರಣದ ತನಿಖೆ ಮಂಗಳೂರಿಗೂ ಕಾಲಿಟ್ಟಿದೆ. ಮಂಗಳೂರು ಸಿಸಿಬಿ ಪೊಲೀಸರು ಖ್ಯಾತ ನಿರೂಪಕಿ ಅನುಶ್ರೀಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದ್ದಾರೆ.

ಒಂದು ಕಡೆ ಬೆಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮತ್ತೊಂದು ಕಡೆ ಡ್ಯಾನ್ಸರ್ ಕಿಶೋರ್ ಶೆಟ್ಟಿಯ ಬಂಧನದಿಂದಾಗಿ ನಿರೂಪಕಿ ಅನುಶ್ರೀ ವಿಚಾರಣೆ ಎದುರಿಸಬೇಕಿದೆ.

ಡ್ರಗ್ಸ್ ಕೇಸ್ ತನಿಖೆ; ಸಿಸಿಬಿ ಸಿಬ್ಬಂದಿಯಿಂದ ಆರೋಪಿಗೆ ಮಾಹಿತಿ ಲೀಕ್! ಡ್ರಗ್ಸ್ ಕೇಸ್ ತನಿಖೆ; ಸಿಸಿಬಿ ಸಿಬ್ಬಂದಿಯಿಂದ ಆರೋಪಿಗೆ ಮಾಹಿತಿ ಲೀಕ್!

ಮಂಗಳೂರು ಡಿಸಿಪಿ ವಿನಯ್ ಗಾಂವ್ಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಮಂಗಳೂರು ಸಿಸಿಬಿ ಪೊಲೀಸರ ತಂಡ ನಿರೂಪಕಿ ಅನುಶ್ರೀಗೆ ನೋಟಿಸ್ ನೀಡಲು ಬೆಂಗಳೂರಿಗೆ ತೆರಳಿದೆ" ಎಂದು ಎಎನ್‌ಐಗೆ ತಿಳಿಸಿದ್ದಾರೆ.

ಡ್ರಗ್ಸ್ ಕೇಸ್: ವಿಚಾರಣೆ ಎದುರಿಸಿದ ನಟ ಯೋಗಿ, ಕ್ರಿಕೆಟರ್ ಅಯ್ಯಪ್ಪ ಡ್ರಗ್ಸ್ ಕೇಸ್: ವಿಚಾರಣೆ ಎದುರಿಸಿದ ನಟ ಯೋಗಿ, ಕ್ರಿಕೆಟರ್ ಅಯ್ಯಪ್ಪ

"ಡ್ರಗ್ಸ್‌ ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ಅನುಶ್ರೀಗೆ ನೋಟಿಸ್ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ಕಿಶೋರ್ ಶೆಟ್ಟಿ ಬಂಧನದ ಬಳಿಕ ಅನುಶ್ರೀ ವಿಚಾರಣೆ ನಡೆಸಲಾಗುತ್ತದೆ" ಎಂದು ಹೇಳಿದ್ದಾರೆ.

ಡ್ರಗ್ಸ್ ಮಾರಾಟ: ಖ್ಯಾತ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನಡ್ರಗ್ಸ್ ಮಾರಾಟ: ಖ್ಯಾತ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ

ನಿರೂಪಕಿ ಅನುಶ್ರೀ ಬೆಂಗಳೂರಿನಲ್ಲಿದ್ದಾರೆ. "ನಾನು ಮನೆಯಲ್ಲಿಯೇ ಇದ್ದೇನೆ. ಇಲ್ಲಿಯ ತನಕ ಸಿಸಿಬಿ ಪೊಲೀಸರ ಯಾವುದೇ ನೋಟಿಸ್ ತಲುಪಿಲ್ಲ" ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪ್ರತೀಕ್ ಶೆಟ್ಟಿ ಬಂಧನ

ಬೆಂಗಳೂರಿನಲ್ಲಿ ಪ್ರತೀಕ್ ಶೆಟ್ಟಿ ಬಂಧನ

ಬೆಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣದ ತನಿಖೆಯನ್ನು ನಡೆಸುವಾಗ ಪ್ರತೀಕ್ ಶೆಟ್ಟಿ, ಕಿಶೋರ್ ಶೆಟ್ಟಿ ಮತ್ತು ತರುಣ್ ಬಂಧಿಸಿದ್ದಾರೆ. ಇವರೆಲ್ಲರೂ ಗೆಳೆಯರಾಗಿದ್ದು, ಪ್ರತೀಕ್ ಶೆಟ್ಟಿಗೆ ಸ್ಯಾಂಡಲ್‌ವುಡ್ ನಟ-ನಟಿಯರ ಸಂಪರ್ಕವಿದೆ. ಸಂಜನಾ ಮತ್ತು ರಾಗಿಣಿ ಪ್ರತೀಕ್‌ ಶೆಟ್ಟಿಯಿಂದ ಡ್ರಗ್ಸ್ ಪಡೆದಿದ್ದಾರೆ ಎಂಬ ಮಾಹಿತಿ ಇದೆ.

ಮಂಗಳೂರಿನಲ್ಲಿ ಪಾರ್ಟಿ

ಮಂಗಳೂರಿನಲ್ಲಿ ಪಾರ್ಟಿ

ಕಿಶೋರ್ ಶೆಟ್ಟಿ ಮಂಗಳೂರಿನಲ್ಲಿಯೂ ಪಾರ್ಟಿ ಆಯೋಜನೆ ಮಾಡಿದ್ದ ಎಂಬುದು ಆರೋಪ. ನಿರೂಪಕಿ ಅನುಶ್ರೀ ಜೊತೆಗೂ ಪಾರ್ಟಿ ಮಾಡಿದ್ದೇನೆ ಎಂದು ಕಿಶೋರ್ ಶೆಟ್ಟಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಕಿಶೋರ್ ಶೆಟ್ಟಿ ಹೇಳಿಕೆ ಆಧರಿಸಿ ಮಂಗಳೂರು ಸಿಸಿಬಿ ಪೊಲೀಸರು ಅನುಶ್ರೀಗೆ ನೋಟಿಸ್ ನೀಡಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ

ಮಾಧ್ಯಮಗಳಿಗೆ ಹೇಳಿಕೆ

ನಿರೂಪಕಿ ಅನುಶ್ರೀ ಮಾಧ್ಯಮಗಳ ಜೊತೆ ಮಾತನಾಡಿದ್ದು, "ಪ್ರತೀಕ್ ಶೆಟ್ಟಿ, ಕಿಶೋರ್ ಶೆಟ್ಟಿ ಇಬ್ಬರೂ ನನಗೆ ಪರಿಚಿತರು. ನಾವು ಇವರ ಯಾವುದೇ ಪಾರ್ಟಿಗಳಿಗೆ ಹೋಗಿಲ್ಲ. ನನಗೆ ಸಿಸಿಬಿ ಪೊಲೀಸರ ಯಾವುದೇ ನೋಟಿಸ್ ಬಂದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ನನಗೆ ಆತಂಕವಿಲ್ಲ" ಎಂದು ಹೇಳಿದ್ದಾರೆ.

ವಿಚಾರಣೆಗೆ ಹಾಜರಾಗುವೆ

ವಿಚಾರಣೆಗೆ ಹಾಜರಾಗುವೆ

"ಪ್ರತೀಕ್ ಮತ್ತು ಕಿಶೋರ್ ಶೆಟ್ಟಿಗೆ ನಾನು ಕರೆ ಮಾಡಿ ವರ್ಷಗಳೇ ಕಳೆದಿವೆ. ನಾವು ಭೇಟಿ ಮಾಡದೇ 2 ರಿಂದ 3 ವರ್ಷಗಳು ಆಗಿವೆ. ಅವರ ವ್ಯವಹಾರಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿಸಿಬಿ ಪೊಲೀಸರ ನೋಟಿಸ್ ಸಿಕ್ಕಿದರೆ ವಿಚಾರಣೆಗೆ ಹಾಜರಾಗುವೆ" ಎಂದು ಅನುಶ್ರೀ ಹೇಳಿದ್ದಾರೆ.

English summary
A team of Mangaluru CCB police left for Bengaluru to hand over a notice to anchor Anushree. Mangaluru DCP Vinay Gaonker said that in a notice police asking her to appear before it in connection with a drug case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X