ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೋಡ್ ಕಡ್ಡಾಯಕ್ಕೆ ಮನವಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 16: ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯ ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕುಕ್ಕೆ ಸುಬ್ರಹ್ಮಣ್ಯ ದೇವಳದ ಕಾರ್ಯನಿರ್ವಾಹಣ ಅಧಿಕಾರಿಗೆ ಮನವಿ ಮಾಡಿದ್ದಾರೆ.

Recommended Video

ರಶ್ಮಿಕಾ ಕುಟುಂಬದ ಒಟ್ಟು ಆಸ್ತಿ ವಿವರ ಗೊತ್ತಾ? | RASHMIKA MANDANNA | IT RAID | ONEINDIA KANNADA

ದಕ್ಷಿಣ ಕನ್ನಡ ಪ್ರವಾಸಿಗರ ಸ್ವರ್ಗ, ಒಂದು ಕಡೆ ಭೋರ್ಗರೆಯುವ ಸಮುದ್ರ, ಇನ್ನೊಂದು ಕಡೆ ಪಶ್ಚಿಮ ಘಟ್ಟಗಳ ಸಾಲು. ಇವುಗಳ ನಡುವೆ ರಾರಾಜಿಸುತ್ತಿರುವ ಹಲವು ದೇವಾಲಯಗಳು. ಈ ದೇವಾಲಯಗಳ ಪೈಕಿ ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ದೇವಾಲಯವೆನಿಸಿಕೊಂಡಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಕೂಡ ಒಂದು.

Dress Code For Devotees Coming To Kukke Subramanya

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯದಲ್ಲಿ ಕುಸಿತಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯದಲ್ಲಿ ಕುಸಿತ

ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು, ಆಗಮಿಸುತ್ತಾರೆ. ಹೀಗಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯ ಮಾಡಬೇಕೆಂದು ಹಿಂದೂ ಪರ ಸಂಘಟನೆಗಳು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ.

Dress Code For Devotees Coming To Kukke Subramanya

ಕುಕ್ಕೇ ಸುಪ್ರಭಾತ ವಿವಾದ: ಕುಕ್ಕೇ ಶ್ರೀಗಳಿಗೆ ಕಿರಿಕಿರಿಯಾಯಿತೇ?ಕುಕ್ಕೇ ಸುಪ್ರಭಾತ ವಿವಾದ: ಕುಕ್ಕೇ ಶ್ರೀಗಳಿಗೆ ಕಿರಿಕಿರಿಯಾಯಿತೇ?

ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಬರುವ ಭಕ್ತರು ಕುಕ್ಕೆ ದೇವಾಲಯಕ್ಕೆ ಬರುವ ಸಮಯದಲ್ಲಿ ಸರಿಯಾದ ವಸ್ತ್ರ ಸಂಹಿತೆ ಮಾಡದ ಹಿನ್ನಲೆಯಲ್ಲಿ ಹಿಂದೂ ಪರ ಸಂಘಟನೆಗಳು ಈ ವಸ್ತ್ರ ಸಂಹಿತೆ ಮಾಡಬೇಕೆಂದು ಆಗ್ರಹಿಸಿದೆ.

English summary
The Vishwa Hindu Parishad and the Bajrang Dal have appealed to Officer For devotees visiting the Subramanya temple to make a dress code compulsory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X