ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ತೂರು ಮೂಲದ ವೈದ್ಯೆ ಅನ್ನಪೂರ್ಣ ಕಿಣಿಗೆ ಅಮೆರಿಕದ ಪರಮೋಚ್ಚ ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ವೈದ್ಯೆ, ಸದ್ಯ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಡಾ.ಅನ್ನಪೂರ್ಣ ಎಸ್‌. ಕಿಣಿ ಅತ್ಯುನ್ನತ ಸಾಧನೆ ಮಾಡಿ ಅಮೆರಿಕಾ ದೇಶದ ಪರಮೋಚ್ಚ ಪ್ರಶಸ್ತಿಗೆ ಭಾಜನರಾಗಿದ್ದಾರೆ.

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ಏಪ್ರಿಲ್ 4: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ವೈದ್ಯೆಯೊಬ್ಬರು ಅತ್ಯುನ್ನತ ಸಾಧನೆ ಮಾಡಿ ಅಮೆರಿಕಾ ದೇಶದ ಪರಮೋಚ್ಚ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಹಾಗೆಯೇ ಎರಡು ದಶಕಗಳಿಂದ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಹೃದ್ರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಅನ್ನಪೂರ್ಣ ಎಸ್‌. ಕಿಣಿ ಶ್ರೇಷ್ಠ ಸಾಧನೆ ಮಾಡಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.[ತೆಂಗು, ಅಡಿಕೆ ಇಳಿಸಲು ಯಂತ್ರ ಕಂಡುಹಿಡಿದ ಬಂಟ್ವಾಳದ ಹುಡುಗರು]

ವಿವಿಧ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಆರು ಸಾಧಕರನ್ನು ತನ್ನ ದೇಶದ ಪರಮೋಚ್ಚ ಪ್ರಶಸ್ತಿಗೆ ಅಮೆರಿಕ ಸರಕಾರ ಆಯ್ಕೆ ಮಾಡಿದ್ದು, ಇವರಲ್ಲಿ ಡಾ. ಅನ್ನಪೂರ್ಣ ಎಸ್. ಕಿಣಿ ಕೂಡಾ ಸೇರಿದ್ದು, ಸಾಧಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

'ಎಲ್ಲಿಸ್‌ ಐಲ್ಯಾಂಡ್‌ ಮೆಡಲ್‌ ಆಫ್‌ ಆನರ್‌ 'ಎಂಬ ಹೆಸರಿನ ಈ ಪ್ರತಿಷ್ಠಿತ ಪ್ರಶಸ್ತಿಗೆ ಪ್ರತೀ ವರ್ಷ ನಾನಾ ಕ್ಷೇತ್ರದ ಶ್ರೇಷ್ಠ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ. ಅಮೆರಿಕನ್‌ ಕಾಂಗ್ರೆಸ್‌ನಲ್ಲಿ ಅಂತಿಮಗೊಳಿಸಿದ ಬಳಿಕ ಆಯ್ಕೆಯಾದವರ ಹೆಸರನ್ನು ಘೋಷಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿ ಡಾ.ಅನ್ನಪೂರ್ಣ ಅವರನ್ನು ಆಯ್ಕೆ ಮಾಡಲಾಗಿದ್ದು, ಮೇ 13ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ನಮ್ಮ ದೇಶದ ಪ್ರತಿಭೆಗೆ ವಿದೇಶದಲ್ಲಿ ಮಾನ್ಯತೆ ಗೌರವ ಸಿಗುವುದು ನಿಜಕ್ಕೂ ಹೆಮ್ಮೆಯ ವಿಷಯ.[ಅರ್ಧ ಲೀಟರ್ ನೀರಿಗೆ 40 ರೂ., ಮಂಗಳೂರಲ್ಲಿ ಹೀಗೊಂದು ಹಗಲು ದರೋಡೆ]

 ಪ್ರಶಸ್ತಿಗಳ ಗೌರವ

ಪ್ರಶಸ್ತಿಗಳ ಗೌರವ

ಕಳೆದೆರಡು ದಶಕದ ಅವಧಿಯಲ್ಲಿಅಮೆರಿಕದಲ್ಲಿನಾನಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಡಾ.ಅನ್ನಪೂರ್ಣ ಎಸ್‌. ಕಿಣಿ ಅವರಿಗೆ ನ್ಯೂಯಾರ್ಕ್ ಸರಕಾರದ ಉನ್ನತ ಪ್ರಶಸ್ತಿಯೂ ಲಭಿಸಿತ್ತು. ನ್ಯೂಯಾರ್ಕ್‌ನ 350 ಅತ್ಯಂತ ಸುರಕ್ಷಿತ ಹೃದಯ ಆಪರೇಟರ್‌ಗಳ ಪೈಕಿ ಒಬ್ಬರಾಗಿ ಗುರುತಿಸಿಕೊಂಡ ಡಾ. ಕಿಣಿ ಅವರು, ಅತ್ಯಂತ ಕಡಿಮೆ ಅಪಾಯದಲ್ಲಿ ಸರ್ಜರಿ ಮಾಡಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಒಬ್ಬರೆಂದು ಮಾನ್ಯತೆ ಪಡೆದಿದ್ದಾರೆ.

1,000 ಕೊರೊನರಿ ಇಂಟರ್‌ವೆನ್ಶನ್‌

1,000 ಕೊರೊನರಿ ಇಂಟರ್‌ವೆನ್ಶನ್‌

ಅನ್ನಪೂರ್ಣ ಕಿಣಿಗೆ ವರ್ಷವೊಂದರಲ್ಲಿ ಒಂದು ಸಾವಿರ ಕೊರೊನರಿ ಇಂಟರ್‌ವೆನ್ಶನ್‌ ಮಾಡುವ ಅಮೆರಿಕದ ಏಕೈಕ ಮಹಿಳಾ ವೈದ್ಯೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಇದೀಗ ಇವರ ಈ ಸಾಧನೆಯ ಪಟ್ಟಿಗೆ ಪರಮೋಚ್ಚ ಪ್ರಶಸ್ತಿ ಸೇರ್ಪಡೆಗೊಳ್ಳಲಿದೆ.

 ಪುತ್ತೂರಿನ ಬೊಳುವಾರು ಹುಟ್ಟೂರು

ಪುತ್ತೂರಿನ ಬೊಳುವಾರು ಹುಟ್ಟೂರು

ನಾಮದೇವ ಪ್ರಭು ಮತ್ತು ಪುಷ್ಪಲತಾ ದಂಪತಿಗಳ ಎರಡನೇ ಪುತ್ರಿಯಾದ ಅನ್ನಪೂರ್ಣ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರಿನವರು. ಇವರ ಸಹೋದರ ಡಾ.ಕೆ. ಅಶೋಕ್‌ ಪ್ರಭು ಮಂಗಳೂರು ಕೆಎಂಸಿಯಲ್ಲಿ ವೈದ್ಯರಾಗಿದ್ದಾರೆ. ಇನ್ನೊಬ್ಬ ಸಹೋದರ ರಾಧೇಶ್‌ ವಿ. ಪ್ರಭು ಬೊಳುವಾರಿನ ಮನೆಯಲ್ಲಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ನ್ಯೂಯಾರ್ಕ್ ನಲ್ಲಿ ವಾಸ

ನ್ಯೂಯಾರ್ಕ್ ನಲ್ಲಿ ವಾಸ

ಡಾ. ಅನ್ನಪೂರ್ಣ ಅವರು ಮಂಗಳೂರಿನ ಉಳ್ಳಾಲದವರಾದ ಡಾ.ಯು.ಸುಭಾಷ್‌ ಕಿಣಿ ಅವರನ್ನು ಮದುವೆಯಾಗಿ, ಪ್ರಸ್ತುತ ಕುಟುಂಬ ಸಮೇತ ನ್ಯೂಯಾರ್ಕ್ ನಲ್ಲಿ ನೆಲೆಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಸಾಧನೆ ಮಾಡಿ ಮೈಲಿಗಲ್ಲು ಸೃಷ್ಟಿಸಿ ನ್ಯೂಯಾರ್ಕ್‌ ರಾಜ್ಯಕ್ಕೆ ಹಾಗೂ ಅಮೆರಿಕಕಕ್ಕೆ ಹೆಸರು ತಂದಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿದ ಇವರು ನಮ್ಮ ದಕ್ಷಿಣ ಕನ್ನಡ ಮೂಲದವರು ಎನ್ನುವುದು ನಿಜಕ್ಕೂ ಹೆಮ್ಮೆಯ ವಿಷಯ.

ಮೇ 13-ಪ್ರಶಸ್ತಿ ಪ್ರಧಾನ

ಮೇ 13-ಪ್ರಶಸ್ತಿ ಪ್ರಧಾನ

ವೈದ್ಯ ವೃತ್ತಿ ಏನೂ ಸಾಮಾನ್ಯ ವೃತ್ತಿಯಂತಲ್ಲ. ಹಗಲು ರಾತ್ರಿ ಎನ್ನದೆ ವೈದ್ಯರು ವೃತ್ತಿ ಕ್ಷೇತ್ರದಲ್ಲಿ ತಲ್ಲೇನರಾಗಿರುತ್ತಾರೆ. ಹಾಗೆಯೇ ಡಾ. ಅನ್ನಪೂರ್ಣ ಅವರು ಕಠಿಣ ಪರಿಶ್ರಮದಿಂದ ಈ ಸಾಧನೆಯ ಮೆಟ್ಟಿಲು ಏರಿದ್ದಾರೆ. ಇದೇ ಬರುವ ಮೇ 13 ರಂದು ಅಮೆರಿಕಾ ದೇಶ ಇವರಿಗೆ ಪರಮೋಚ್ಚ ಪ್ರಶಸ್ತಿ ನೀಡಿ ಗೌರವಿಸಲಿದೆ. ಇವರ ಈ ಸಾಧನೆಗೆ ನಮ್ಮದೊಂದು ಸೆಲ್ಯೂಟ್.

English summary
Six Americans including Dr. Annapoorna Kini, who hails from Puttur of Dakshina Kannada have been chosen for this year's Ellis Island Medals of Honour. The awards, considered to be the highest honour in USA, founded by National Ethnic Coalition of Organizations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X