ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

RSS ಕ್ಯಾನ್ಸರ್ ಇದ್ದ ಹಾಗೆ, ರಾಮ ಮಂದಿರ ನಿರ್ಮಾಣಕ್ಕೆ ನಯಾ ಪೈಸೆ ಕೊಡಬೇಡಿ

|
Google Oneindia Kannada News

ಮಂಗಳೂರು, ಫೆ 19: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಆರ್ ಎಸ್ ಎಸ್ ಸಂಘಟನೆಯ ಬಗ್ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮುಖಂಡರೊಬ್ಬರು ನೀಡಿದ ಹೇಳಿಕೆಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿವೆ.

"ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವುದು ರಾಮ ಮಂದಿರವಲ್ಲ, ಅದು ಆರ್ ಎಸ್ ಎಸ್ ಮಂದಿರ. ನಿಮ್ಮ ಮನೆ ಬಾಗಿಲಿಗೆ ಯಾರಾದರೂ ದೇಣಿಗೆಗೆ ಬಂದರೆ ನಯಾಪೈಸೆ ಕೊಡಬೇಡಿ. ಆ ಸಂಘಟನೆ ಸಮಾಜಕ್ಕೆ ಕ್ಯಾನ್ಸರ್ ಇದ್ದಂತೆ"ಎಂದು ಪಿಎಫ್ಐ ಜನರಲ್ ಸೆಕ್ರೆಟರಿ ಅನಿಸ್ ಅಹ್ಮದ್ ಹೇಳಿದ್ದಾರೆ.

ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು: ಪಿಎಫ್‌ಐ ಸದಸ್ಯರ ಬಂಧನಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು: ಪಿಎಫ್‌ಐ ಸದಸ್ಯರ ಬಂಧನ

ಇವರ ಹೇಳಿಕೆಗೆ ಆಕ್ರೋಶ ವ್ಯಕ್ತ ಪಡಿಸಿರುವ ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ಆ ಸಂಘಟನೆಯ ವಿರುದ್ದ ಕ್ರಮ ಜರುಗಿಸಲು ಸೂಚನೆಯನ್ನು ನೀಡಿದ್ದಾರೆ. "ಉಲ್ಲಾಳದಲ್ಲಿ ಪಿಎಫ್ಐ ಮುಖಂಡರು ನೀಡಿರುವ ಹೇಳಿಕೆ ದೇಶ ವಿರೋಧಿ ಮತ್ತು ಅಸಂವಿಧಾನಿಕ"ಎಂದು ಸಚಿವರು ಹೇಳಿದ್ದಾರೆ.

Do Not Give Single Rupee To Construction Of Ram Mandir In Ayodhya, Said PFI Organization General Secretary

"ದೇಶದಲ್ಲಿ ಶಾಂತಿ ಸ್ಥಾಪನೆಯಾಗಬೇಕೆಂದರೆ ರಾಮ ಮಂದಿರ ನಿರ್ಮಾಣವಾಗಬೇಕೆಂದು ಹೇಳಿದರು. ನಾವು ಜಾಗ ಬಿಟ್ಟು ಕೊಟ್ಟೆವು. ಆದರೆ, ನಮ್ಮ ಮೇಲಿನ ದಬ್ಬಾಳಿಕೆ ಕಮ್ಮಿಯಾಗಿದೆಯೇ"ಎಂದು ಅನಿಸ್ ಅಹ್ಮದ್ ಪ್ರಶ್ನಿಸಿದ್ದರು.

"ಪಿಎಫ್ಐ ಎನ್ನುವುದು ಹಿಂದೂ ವಿರೋಧಿ ಸಂಘಟನೆಯಲ್ಲ ಎನ್ನುವುದನ್ನು ಮತ್ತೆಮತ್ತೆ ಒತ್ತಿ ಹೇಳುತ್ತಿದ್ದೆವು. ಹಿಂದೂ ವಿರೋಧಿ ಸಂಘಟನೆ ಎಂದರೆ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ"ಎಂದು ಅನಿಸ್ ಅಹ್ಮದ್ ಅಭಿಪ್ರಾಯ ಪಟ್ಟಿದ್ದಾರೆ.

ಪಿಎಫ್‌ಐ ಸಂಘಟನೆಗೆ ವಿದೇಶದಿಂದ 100 ಕೋಟಿ ರೂ ರವಾನೆಪಿಎಫ್‌ಐ ಸಂಘಟನೆಗೆ ವಿದೇಶದಿಂದ 100 ಕೋಟಿ ರೂ ರವಾನೆ

ರಾಮ ಮಂದಿರ ನಿರ್ಮಾಣದ ಸಂಬಂಧ ಈಗ ನಡೆಯುತ್ತಿರುವ ನಿಧಿ ಸಂಗ್ರಹಣೆ ಅಭಿಯಾನ ಫೆಬ್ರವರಿ ಮಾಸಂತ್ಯದಲ್ಲಿ ಮುಕ್ತಾಯಗೊಳ್ಳಲಿದೆ. ಇದುವರೆಗೆ ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಿದೆ.

English summary
Do Not Give Single Rupee To Construction Of Ram Mandir In Ayodhya, Said PFI Organization General Secretary,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X