ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರ್ಚೆಗೆ ಬಂದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಕ್ವಾರಂಟೈನ್ ವಿಚಾರ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 31: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಡಿಕೆಶಿ ಆಪ್ತ ಮಿಥುನ್ ರೈ ಅವರು ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಕ್ವಾರಂಟೈನ್ ನಲ್ಲಿರಬೇಕಾದ ಮಿಥುನ್ ರೈ ಈ ರೀತಿ ಸಾರ್ವಜನಿಕವಾಗಿ ತಿರುಗಾಡುತ್ತಿರುವುದು ಸರಿಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಿಥುನ್ ರೈ ಅವರ ಕ್ವಾರಂಟೈನ್ ಕುರಿತು ಚರ್ಚೆ ಶುರುವಾಗಿದೆ. ಮಂಗಳೂರಿಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿಕೆಶಿ ಅವರೊಂದಿಗೆ ಮಿಥುನ್ ರೈ ಕೂಡ ಪ್ರತ್ಯಕ್ಷರಾಗಿದ್ದಾರೆ.

ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಕೊರೊನಾ ಸೋಂಕುದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಕೊರೊನಾ ಸೋಂಕು

Discussion About Congress Leader Mithun Rai Quarantine Matter In Social Media

ಜುಲೈ 17ರಂದು ತನಗೆ ಕೊರೊನಾ ಪಾಸಿಟಿವ್ ಆಗಿರುವುದಾಗಿ ಮಿಥುನ್ ರೈ ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದರು. ಮಿಥುನ್ ರೈ ಅವರ ಮಾಹಿತಿಯ ಪ್ರಕಾರ ಇಂದಿಗೆ 14 ದಿನ ಕಳೆಯುತ್ತದೆ. ಆದರೆ ಸರ್ಕಾರದ ನಿಯಮದ ಪ್ರಕಾರ ಪಾಸಿಟಿವ್ ವ್ಯಕ್ತಿ 17 ದಿನ ಐಸೊಲೇಷನ್ ನಲ್ಲಿ ಇರಬೇಕಾದ್ದು ಕಡ್ಡಾಯ. ಆದರೆ ಹೀಗಿದ್ದೂ ಮಿಥುನ್ ರೈ ಅವರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

English summary
Dakshina Kannada District Youth Congress President Mithun Rai quarantine matter came to discussion in social media, as he appeared with dk shivakumar today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X