ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಕಾಶ್ ರೈ ಈಗ ಮತ ವಿಭಜನೆಗೆ ಹೊರಟಿದ್ದಾರೆ:ದಿನೇಶ್ ಅಮೀನ್ ಮಟ್ಟು ಆರೋಪ

|
Google Oneindia Kannada News

ಉಡುಪಿ, ಮಾರ್ಚ್ 18:ಮಾಜಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಮಟ್ಟು ಪ್ರಕಾಶ್ ರೈ ವಿರುದ್ಧ ಗರಂ ಆಗಿದ್ದಾರೆ. ಪ್ರಕಾಶ್ ರೈ ಈಗ ಮತ ವಿಭಜನೆಗೆ ಹೊರಟಿದ್ದಾರೆ ಎಂದು ದಿನೇಶ್ ಅಮೀನ್ ಮಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ರೈ ಬಿಜೆಪಿಯನ್ನು ಕ್ಯಾನ್ಸರ್ ಎನ್ನುತ್ತಿದ್ದರು.ಆದರೆ ಈಗ ಕಾಂಗ್ರೆಸ್ ಕೂಡ ಕ್ಯಾನ್ಸರ್ ಥರ ಕಾಣ್ಸುತ್ತೆ ಎಂದು ಕಿಡಿಕಾರಿದರು.ಆರು ತಿಂಗಳ ಹಿಂದೆ ಬಿಜೆಪಿ ಕ್ಯಾನ್ಸರ್ ಅಂದಿದ್ದ ರೈ, ಕಾಂಗ್ರೆಸ್ ಕೆಮ್ಮು ಜ್ವರ ಅಂದ್ರು. ಕ್ಯಾನ್ಸರ್ ವಿರುದ್ಧ ನನ್ನ ಹೋರಾಟ ಅಂದಿದ್ರು ಈ ರೀತಿ ಹೇಳಿಕೆ ನೀಡುವ ಮೂಲಕ ಪ್ರಕಾಶ್ ರೈ ಈಗ ಮತ ವಿಭಜನೆಗೆ ಹೊರಟಿದ್ದಾರೆ ಎಂದರು.

ಮಂಡ್ಯದಿಂದ ಸ್ಪರ್ಧೆ: ಸುಮಲತಾ ಅಂಬರೀಷ್‌ಗೆ ಪ್ರಕಾಶ್ ರೈ ಬೆಂಬಲಮಂಡ್ಯದಿಂದ ಸ್ಪರ್ಧೆ: ಸುಮಲತಾ ಅಂಬರೀಷ್‌ಗೆ ಪ್ರಕಾಶ್ ರೈ ಬೆಂಬಲ

ಉಡುಪಿಯಲ್ಲಿ ಆಯೋಜಿಸಲಾಗಿದ್ದ ಸರ್ವಜನೋತ್ಸವ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿನೇಶ್ ಅಮೀನ್ ಮಟ್ಟು, ಉಡುಪಿ ಕೃಷ್ಣ ಮಠದಲ್ಲೂ ರಾಜಕೀಯ ಇದೆ. ಪೇಜಾವರ ಸ್ವಾಮಿಗಳು ಹಿಂದು ಯಾರು ಅಂತ ಹೇಳಬೇಕು? ಹಿಂದೂಗಳ ಪರ ಅಂತ ಧರ್ಮ ದ್ರೋಹ ಮಾಡ್ಬೇಡಿ ಎಂದು ಆಗ್ರಹಿಸಿದರು.

Dinesh Amin Mattu slams Prakash Rai

ಕಾಂಗ್ರೆಸ್ ಮುಸ್ಲಿಂ ಪರ ಅಂತಾರೆ. ಹಾಗಾದ್ರೆ ನೀವು ಯಾರ ಪರ ಎಂದು ಪೇಜಾವರ ಶ್ರೀಯವರನ್ನು ಪ್ರಶ್ನಿಸಿದ ಅಮೀನ್ ಮಟ್ಟು ಹಿಂದೂರಾಷ್ಟ್ರ ನಿರ್ಮಾಣ ಆರ್ ಎಸ್ ಎಸ್ ಉದ್ದೇಶ. ಅದು ಸಂವಿಧಾನ ವಿರೋಧ ಇರುವ ಸಂಘಟನೆ. ನಾವು ಹಿಂದೂ ಧರ್ಮದ ವಿರೋಧಿಗಳಲ್ಲ ಎಂದರು.

 ಉಡುಪಿ-ಚಿಕ್ಕಮಗಳೂರು ಕ್ಷೇತ್ರ:ಜಯಪ್ರಕಾಶ್ ಪರ ಟ್ವೀಟ್, ಯಾರಿಗೆ ಸಿಗಲಿದೆ ಬಿಜೆಪಿ ಟಿಕೆಟ್? ಉಡುಪಿ-ಚಿಕ್ಕಮಗಳೂರು ಕ್ಷೇತ್ರ:ಜಯಪ್ರಕಾಶ್ ಪರ ಟ್ವೀಟ್, ಯಾರಿಗೆ ಸಿಗಲಿದೆ ಬಿಜೆಪಿ ಟಿಕೆಟ್?

ಕೂಡಿ ಕಟ್ಟಿದ ಕರಾವಳಿಯನ್ನು ಈಗ ಒಡೆಯಲಾಗುತ್ತಿದೆ. ಯಾವ ಹಿಂದೂ ಹುಡುಗಿಯೂ ಮುಸ್ಲೀಂ ಹುಡುಗನ ಮೇಲೆ ದೂರು ಕೊಟ್ಟಿಲ್ಲ.ಕರಾವಳಿಯಲ್ಲಿ ಮುಸ್ಲಿಮರು ಹಿಂದೂಗಳಿಗೆ ಮಾಡಿದ ಅನ್ಯಾಯ ಏನು? ಇದಕ್ಕೆ ಆರ್ ಎಸ್ ಎಸ್ ಉತ್ತರಿಸುದಿಲ್ಲ. ಆರ್ಎಸ್ಎಸ್ ನದ್ದು ಛದ್ಮವೇಷದ ರಾಜಕೀಯ ಎಂದು ಅಮೀನ್ ಮಟ್ಟು ಆಕ್ರೋಶ ವ್ಯಕ್ತಪಡಿಸಿದರು.

English summary
Former CM's media adviser Dinesh Amin Mattu slammed Famous renowned actor Prakshan Rai in Sarvajnothsva program held in Udupi on March 17. He said Prakash Rai trying to divided vote in Loksabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X