ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಲಿಕುಳ ಜೈವಿಕ ನಿಸರ್ಗಧಾಮಕ್ಕೆ ಹೊಸ ಅತಿಥಿಗಳ ಆಗಮನ

|
Google Oneindia Kannada News

ಮಂಗಳೂರು, ಡಿಸೆಂಬರ್ 17: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಆಂಧ್ರಪ್ರದೇಶದ ವಿಶಾಖ ಪಟ್ಟಣದಿಂದ ಎರಡು ಗಂಡು ಮತ್ತು ಎರಡು ಹೆಣ್ಣು ಧೋಲ್ ನಾಯಿಗಳನ್ನು ತರಿಸಿಕೊಳ್ಳಲಾಗಿದೆ.

ಧೋಲ್‌ ಅನ್ನು ಕಾಡುನಾಯಿ ಅಥವಾ ಚೆನ್ನೆ ನಾಯಿ ಎಂದು ಕರೆಯಲಾಗುತ್ತದೆ. ಇದನ್ನು ಅಳಿವಿನಂಚಿನಲ್ಲಿರು ಪ್ರಾಣಿಗಳ ವಿಭಾಗಕ್ಕೆ ಸೇರಿಸಲಾಗಿದೆ. ಹಿಂದೆ ಅರಣ್ಯಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿದ್ದು ಈಗ ವಿನಾಶದ ಅಂಚಿನಲ್ಲಿವೆ. ಇವುಗಳು ಹಿಂಡಿನಲ್ಲಿ ವಾಸಿಸುತ್ತವೆ. ಹಿಂಡಲ್ಲೇ ಬೇಟೆಯಾಡುತ್ತವೆ. ಅತ್ಯಂತ ಚಾಣಾಕ್ಷ ಬೇಟೆಗಾರ ಎಂದು ಗುರುತಿಸಲಾಗುವ ಇವು ಹಿಂಡಿನ ರಣ ತಂತ್ರದೊಂದಿಗೆ ಜಿಂಕೆ, ಕಡವೆಯಂತಹ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡುತ್ತವೆ. ಒಂಟಿಯಾಗಿ ಸಿಕ್ಕಿದರೆ ಇವು ಹುಲಿಯನ್ನೂ ಬಿಡುವುದಿಲ್ಲ!

ಛಲಬಿಡದೆ ಹಿಮದ ಬೆಟ್ಟವೇರಿದ ಕರಡಿಮರಿ ಸಾಹಸದ ಹಿಂದಿನ ದುಃಖದ ಕಥೆ ಛಲಬಿಡದೆ ಹಿಮದ ಬೆಟ್ಟವೇರಿದ ಕರಡಿಮರಿ ಸಾಹಸದ ಹಿಂದಿನ ದುಃಖದ ಕಥೆ

ಇದಲ್ಲದೇ ಪಿಲಿಕುಳಕ್ಕೆ 5 ಪೈಂಟೆಡ್ ಕೊಕ್ಕರೆ, ದೊಡ್ಡ ಜಾತಿಯ ಐದು ಅಲೆಕ್ಸ್ ಜಾಡ್ರಿಯನ್ ಗಿಳಿಗಳನ್ನು ತರಿಸಲಾಗಿದೆ. ಪ್ರಾಣಿಗಳ ವಿನಿಮಯ ಯೋಜನೆಯನ್ವಯ ಈ ಪ್ರಾಣಿಗಳನ್ನು ತರಲಾಗಿದ್ದು, ಪಿಲಿಕುಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹುಲಿಗಳ ಗುಂಪಿನಿಂದ ಎರಡು ಗಂಡು ಹುಲಿಗಳು, ನಾಲ್ಕು ಕಾಡು ಕೋಳಿಗಳು ಮತ್ತು ಒಂದು ಮೊಸಳೆಯನ್ನು ವಿಶಾಖಪಟ್ಟಣಂ ಮೃಗಾಲಯಕ್ಕೆ ನೀಡಲಾಗಿದೆ.

Dhole wild Dogs will be new attraction at Pilikula

ಪಶ್ಚಿಮ ಘಟ್ಟಗಳ ಉಳಿವಿಗಾಗಿ ಶಿವಮೊಗ್ಗದಲ್ಲಿ 6 ರಾಜ್ಯಗಳ ಸಮಾವೇಶ ಪಶ್ಚಿಮ ಘಟ್ಟಗಳ ಉಳಿವಿಗಾಗಿ ಶಿವಮೊಗ್ಗದಲ್ಲಿ 6 ರಾಜ್ಯಗಳ ಸಮಾವೇಶ

ಪಿಲಿಕುಳ ಜೈವಿಕ ಉದ್ಯಾನಕ್ಕೆ ಇನ್ನೂ ಹಲವು ಪ್ರಾಣಿಗಳು ಆಗಮಿಸಲಿವೆ. ಚೆನ್ನೈ ವಂಡಲೂರು ಉದ್ಯಾನವನದಿದಂದ ಕಾಡುಕೋಣಗಳು, ಹೈದರಾಬಾದ್‌ನಿಂದ ಇಗ್ವಾನಾ ಸರೀಸೃಪಗಳು, ಕಾನ್ಪುರ ಮೃಗಾಲಯದಿಂದ ಕತ್ತೆಕಿರುಬ ಗಳನ್ನು ತರಲು ಚಿಂತನೆ ನಡೆಸಲಾಗಿದೆ.

English summary
Dhole wild Dogs and other rare animals are brought to Pilikula Biological park. two tigers sent to Vishakapatnam Zoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X