ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರಿಗಾಗಿ ಧರ್ಮಸ್ಥಳದ ಹೊಸ ಯೂಟ್ಯೂಬ್ ಚಾನಲ್ ಪ್ರಾರಂಭ

|
Google Oneindia Kannada News

ದಕ್ಷಿಣ ಕನ್ನಡ, ಜೂನ್ 19: ಧರ್ಮಸ್ಥಳದ ಮತ್ತೊಂದು ಯೂಟ್ಯೂಬ್ ಚಾನಲ್‌ ಲಾಂಚ್ ಆಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಯೂಟ್ಯೂಬ್ ಚಾನಲ್ ಬಿಡುಗಡೆ ಮಾಡಿದ್ದಾರೆ.

Recommended Video

ಪಾಕಿಸ್ತಾನದ ಆರಂಭಿಕ ಆಟಗಾರನಿಗೆ ರೋಹಿತ್ ಶರ್ಮ ರೋಲ್ ಮಾಡೆಲ್ | Rohit Sharma | Oneindia Kannada

ಹೊಸ ಯೂಟ್ಯೂಬ್‌ ಚಾನೆಲ್‌ಗೆ ಜ್ಞಾನ ವಿಕಾಸ ಯೂಟ್ಯೂಬ್‌ ಚಾನೆಲ್‌ ಎಂದು ನಾಮಕರಣ ಮಾಡಲಾಗಿದೆ. ಪ್ರಮುಖವಾಗಿ ಮಹಿಳೆಯರಿಗಾಗಿ ಈ ಯೂಟ್ಯೂಬ್‌ಚಾನಲ್ ಪ್ರಾರಂಭ ಮಾಡಲಾಗಿದೆ. ಕೊರೊನಾ ಸೋಂಕು ಇರುವ ಕಾರಣ ಸ್ವಚ್ಛತೆ, ಶುಚ್ಚಿತ್ವ , ಸಾಮಾಜಿಕ ಅಂತರದ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಲಾಗುತ್ತಿದೆ.

ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರ ಗಮನಕ್ಕೆ ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರ ಗಮನಕ್ಕೆ

ಮಹಿಳೆಯರಿಗೆ ಸಹಾಯ ಆಗುವಂತೆ ಕೈತೋಟ ಮಾಡುವುದು, ಮನೆಯಲ್ಲಿ ತರಕಾರಿ ಬೆಳೆಯುವ ವಿಧಾನ, ಟೆರೇಸ್‌ ಗಾರ್ಡನ್‌, ಮನೆಯ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ತಯಾರಿ ಮಾಡುವುದು, ಮಕ್ಕಳಿಗಾಗಿ ಸುಭಾಷಿತ, ಮಹಿಳೆಯರು ಓದಬಹುದಾದ ಪುಸ್ತಕಗಳು ಹೀಗೆ ಅನೇಕ ವಿಷಯಗಳ ಬಗ್ಗೆ ಇಲ್ಲಿ ಮಾಹಿತಿ ಸಿಗಲಿದೆ.

Dharmasthalas New Youtube Channel Gyana Vikasa Launched

ಇದರೊಂದಿಗೆ, ಮೌಲ್ಯಧರಿತ ಕಥೆಗಳು, ವಿಷಯಗಳು, ಸರಕಾರಿ ಯೋಜನೆಗಳನ್ನು ಪಡೆದುಕೊಳ್ಳುವುದು ಹೇಗೆ, ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳು, ಯೋಗಾಸನಗಳ ಕುರಿತು ಕಿರುಚಿತ್ರ ಹೀಗೆ ಹಲವು ವಿಷಯಗಳನ್ನು ಈ ಯೂಟ್ಯೂಬ್‌ ಚಾನಲ್ ಒಳಗೊಂಡಿದೆ.

English summary
dharmasthala' new youtube channel gyana vikasa launched by Virendra Hegde.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X