ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭತ್ತದ ತೋರಣ: ಗ್ರಾಮೀಣ ದೇಶಿ ಕರಕುಶಲ ಕಲೆಯ ಸೊಬಗು

By ಸ್ವಸ್ತಿಕಾ, ಎಸ್.ಡಿ.ಎಮ್ ಕಾಲೇಜ್, ಉಜಿರೆ
|
Google Oneindia Kannada News

ಉಜಿರೆ: ಪ್ಲಾಸ್ಟಿಕ್‍ನ ಬಣ್ಣ ಬಣ್ಣದ ತೋರಣಗಳ ನಡುವೆ ದೇಶಿ ಉತ್ಪನ್ನಗಳು ಕೂಡ ರಾರಾಜಿಸುತ್ತಿವೆ. ಪ್ಲಾಸ್ಟಿಕ್‍ನ್ನು ಕೊಂಚ ಮಟ್ಟಿಗೆ ದೂರ ಸರಿಸಿ ನೈಸರ್ಗಿಕವಾದ ವಸ್ತುಗಳು ಅವುಗಳ ಸ್ಥಾನವನ್ನು ಪಡೆದುಕೊಳ್ಳುತ್ತಿವೆ.

ಅದರಲ್ಲಿ ಮಾವಿನ ಎಲೆ, ಹೂವಿನ ತೋರಣವನ್ನು ಕೂಡ ಮನೆ ಬಾಗಿಲಿಗೆ ಹಾಕಿ ಆಲಂಕಾರಿಸುತ್ತಾರೆ. ಆದರೆ ಇಲ್ಲಿ ಭತ್ತದ ತೋರಣ ಕೂಡ ಈ ಸ್ಥಾನವನ್ನು ಪಡೆದುಕೊಂಡಿದೆ.

ಮತ್ತೊಮ್ಮೆ ಮಂಡ್ಯ ರೈತರ ಮನಗೆದ್ದ ಮುಖ್ಯಮಂತ್ರಿ ಕುಮಾರಸ್ವಾಮಿಮತ್ತೊಮ್ಮೆ ಮಂಡ್ಯ ರೈತರ ಮನಗೆದ್ದ ಮುಖ್ಯಮಂತ್ರಿ ಕುಮಾರಸ್ವಾಮಿ

ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಪ್ಲಾಸ್ಟಿಕ್ ತೋರಣಗಳ ನಡುವೆ ಭತ್ತದತೋರಣ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷ ದೀಪೋತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿತ್ತು.

ಮನೆಯ ಅಲಂಕಾರಕ್ಕೆ ಪ್ರತಿಯೊಬ್ಬರು ಕೂಡ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಮನೆ ಸಣ್ಣದಿರಲಿ, ದೊಡ್ಡದಿರಲಿ ಪ್ರತಿಕೋಣೆಯ ಬಾಗಿಲಿಗೆ, ಗೋಡೆಗೆ ಈ ಅಲಂಕಾರವನ್ನು ಮಾಡಿ ಸುಂದರವಾಗಿ ಕಾಣುವ ಹಾಗೇ ಮಾಡುತ್ತಾರೆ. ಆದರೆ ಈ ಭತ್ತದ ತೋರಣವನ್ನು ಮನೆಯ ಬಾಗಿಲಿಗೆ ಮಾತ್ರವಲ್ಲದೇ ದೇವಸ್ಥಾನದ ಬಾಗಿಲಿಗೆ ಕೂಡ ಹಾಕಬಹುದು.

Dharmasthala Lakshadeepotsava 2018: Paddy Hase Festoon (Thorana)

ಈ ಭತ್ತದ ತೋರಣವನ್ನು ಕಾರವಾರದಿಂದ ಮಾಡಿಸಿ ತರಲಾಗುತ್ತದೆ. ಅಲ್ಲದೇ ಈ ಪೈರನ್ನು ಬೆಳೆಯಲು ಯಾವುದೇ ರೀತಿಯ ಕೃತಕ ಔಷಧಗಳನ್ನು ಹಾಕದೇ ನೈಸರ್ಗಿಕ ಗೊಬ್ಬರಗಳನ್ನು ಹಾಕಿ ಬೆಳೆಸಲಾಗುತ್ತದೆ. ಇದು ಜಯ ಭತ್ತದ ಪೈರಿನಿಂದ ಈ ತೋರಣವನ್ನು ಮಾಡಲಾಗುತ್ತದೆ. ಈ ತೋರಣಕ್ಕೆ ಮುಡಿ, ಇಂಗ್ಲೀಷ್ ನಲ್ಲಿ ನೆಲ್ಲಿ ಎಂದು ಕೂಡ ಕರೆಯುತ್ತಾರೆ.

ಈ ತೋರಣದ ವಿಶೇಷತೆಯೆಂದರೆ 6ವರ್ಷಗಳವರೆಗೆ ಯಾವುದೇ ರೀತಿಯಲ್ಲಿ ಹಾಳಾಗುವುದಿಲ್ಲ. ಅಲ್ಲದೇ ಕೃತಕ ಬಣ್ಣ, ಹಾಳಗದ ಹಾಗೇ ಯಾವುದೇ ರಸಾಯನಿಕಗಳನ್ನು ಸಿಂಪಡಿಸುವುದಿಲ್ಲ.

ನೈಸರ್ಗಿಕವಾಗಿಯೇ ತೋರಣವನ್ನು ಮಾಡಲಾಗಿದೆ. ನಮ್ಮ ಮನೆಯ ಬಾಗಿಲು ಯಾವ ರೀತಿಯ ಅಳತೆಯನ್ನು ಹೊಂದಿದೆ ಆ ರೀತಿಯ ತೋರಣಗಳು ಇವೆ. ಇಲ್ಲದಿದ್ದರೆ ಮೊದಲೇ ಆರ್ಡರ್ ಕೊಟ್ಟು ಮಾಡಿಸಿಕೊಳ್ಳಬಹುದು.

Dharmasthala Lakshadeepotsava 2018: Paddy Hase Festoon (Thorana)

ಲಕ್ಷದೀಪೋತ್ಸವಕ್ಕೆ ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ವ್ಯಾಪಾರಕ್ಕೆ ಬಂದಿದ್ದು, ಉತ್ತಮ ಮಟ್ಟದಲ್ಲಿ ಜನರಿಂದ ಪ್ರತಿಕ್ರಿಯೆ ದೊರಕಿದೆ, ಹಲವಾರು ಜನ ಖರೀದಿ ಕೂಡ ಮಾಡಿದ್ದರೆ. ಇನ್ನಷ್ಟು ಜನ ಆರ್ಡರ್ ಮಾಡಿದ್ದಾರೆ. ಈ ತೋರಣ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೆಚ್ಚಾಗಿ ಮಾರಾಟವಾಗುತ್ತದೆ. ಅಲ್ಲದೇ ಅಮೆಜಾನ್ ಆನ್‍ಲೈನ್ ಮೂಲಕವು ಕೂಡ ಖರೀದಿಸಬಹುದು ಎಂದು ಭತ್ತದ ತೋರಣ ವ್ಯಾಪಾರಿ ಹೇಳಿದರು.

ಇಂದಿನ ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ದೇಶಿ ಕರಕುಶಲ ಕಲೆಗಳು ಮತ್ತೇ ಜೀವಂತವಾಗುತ್ತಿವೆ. ಪ್ಲಾಸ್ಟಿಕ್ ವಸ್ತುಗಳ ನಡುವೆ ದೇಶಿ ಉತ್ಪನ್ನಗಳು ಪೈಪೋಟಿ ನಡೆಸುತ್ತವೆ. ಇಂತಹ ದೇಶಿ ಉತ್ಪನ್ನಗಳ ಬಳಕೆ ಅಧಿಕವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

English summary
Dharmasthala Lakshadeepotsava 2018: Paddy Hase Festoon (Thorana) and other rural hand made handicrafts were highlights during the celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X