ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷದೀಪೋತ್ಸವ ವಿಶೇಷ: ದೇಶಿ ಉಪ್ಪಿನಕಾಯಿಯ ಪರವಾದ ಅಲೆ

By ಸುವರ್ಣಾ ಹೆಗಡೆ
|
Google Oneindia Kannada News

ಧರ್ಮಸ್ಥಳದ ಲಕ್ಷ ದೀಪೋತ್ಸವದ ಮಳಿಗೆಗಳ ಸಾಲಿನಲ್ಲಿ ಒಂದು ಮಳಿಗೆಗೆ ಭೇಟಿ ನೀಡಿದವರೆಲ್ಲಾಉಪ್ಪಿನಕಾಯಿಯ ಸ್ಯಾಂಪಲ್ಲನ್ನು ಗಮನಿಸುತ್ತಿದ್ದರು. ಒಂದಷ್ಟು ರುಚಿ ನೋಡಿ ಅದನ್ನು ಖರೀದಿಸುವುದಕ್ಕೆ ಮುಂದಾಗುತ್ತಿದ್ದರು. ರಾಸಾಯನಿಕಗಳ ಬಳಕೆಯಿಲ್ಲದೇ ಸಿದ್ಧಪಡಿಸಿದ ಈ ದೇಶಿ ಉಪ್ಪಿನಕಾಯಿಯ ಕಡೆಗೆ ದೌಡಾಯಿಸುತ್ತಿದ್ದರು.

ದೇಶೀ ಖಾದ್ಯಕ್ಕೆಆದ್ಯತೆ ನೀಡಬೇಕಾದ ಅಗತ್ಯವನ್ನು ಮನಗಾಣಿಸುವ ಈ ದೃಶ್ಯ ಕಂಡು ಬಂದದ್ದು ಲಕ್ಷದೀಪೋತ್ಸವದ ಮಳಿಗೆಯಲ್ಲಿ. ಮಂಗಳೂರಿನ ಕಂಕನಾಡಿಯ ಶ್ಯಾಮಲಾ ಶಣೈ ತಮ್ಮ ವ್ಯಾಪಾರ ವಹಿವಾಟಿನ ಮೂಲಕ ದೇಶೀ ಖಾದ್ಯಗಳ ಪರವಾದ ಅಲೆಯನ್ನು ಮೂಡಿಸಿದ್ದರು.

ಮೂರು ದಶಕಗಳಿಂದ ಉಪ್ಪಿನಕಾಯಿ ವ್ಯಾಪಾರ
ಕಳೆದ 35 ವರ್ಷಗಳಿಂದ ಉಪ್ಪಿನಕಾಯಿ ವ್ಯಾಪಾರವನ್ನುನಡೆಸುತ್ತಿರುವ ಇವರು ಹದಿನಾಲ್ಕು ಬಗೆಯ ರುಚಿ ರುಚಿಯ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ. ಇವುಗಳನ್ನು ತಯಾರಿಸಲು ಪ್ರಾರಂಭಿಸಿದ ದಿನದಿಂದಲೂ ಒಂದೇ ದರವನ್ನು ನಿಗದಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಉಪ್ಪಿನಕಾಯಿಯನ್ನು ಕೆಜಿಗೆ 200 ರೂ.ಗಳಂತೆ ಮಾರುತ್ತಾರೆ.

Dharmasthala Laksha Deepotsava special: Kankanadi Shyamala Shenoy Uppinakayi

ಇವರ ಈ ಜೀವನ ಪ್ರಾರಂಭವಾದದ್ದು ಹಪ್ಪಳ ತಯಾರಿಸುವುದರಿಂದ. ಈಗ ಸಂಡಿಗೆ, ಉಪ್ಪಿನಕಾಯಿ, ಸಾಂಬಾರ್ ಪುಡಿ, ಕಷಾಯದ ಪುಡಿ ಹಾಗೂ ಆರೋಗ್ಯಕರ ಪಾನೀಯಗಳನ್ನು ತಯಾರಿಸುತ್ತಾರೆ. ಈ ಪಾನೀಯಗಳೂ ಸಹ ಯಾವುದೇ ರಾಸಾಯನಿಕ ಮಿಶ್ರಿತವಲ್ಲ. ಜೇನು, ಸಕ್ಕರೆ. ನನ್ನಾರೆ ಬೇರನ್ನು ಸೇರಿಸಿ ಪಾನೀಯಗಳನ್ನು ತಯಾರಿಸುತ್ತಾರೆ.ಇವುಗಳೂ ಇಲ್ಲಿ ಮಾರಾಟಕ್ಕೆ ಲಭ್ಯವಿದ್ದವು.

ಇವರ ಪತಿ ಶ್ರೀನಿವಾಸ ಶಣೈ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬ ಮಗಳ ಇಬ್ಬರು ಗಂಡು ಮಕ್ಕಳನ್ನು ಇವರೇ ಓದಿಸುತ್ತಿದ್ದಾರೆ. ಒಬ್ಬ ಎಂಟನೆಯತರಗತಿ, ಇನ್ನೊಬ್ಬ ಒಂಭತ್ತನೆಯ ತರಗತಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿತಮ್ಮ ಮೊಮ್ಮಕ್ಕಳನ್ನು ಓದಿಸುತ್ತಿದ್ದಾರೆ. ತಮ್ಮ ಸಂಸಾರವೊಂದೇ ಅಲ್ಲದೆ, ತಮ್ಮ ಮಗಳ, ಮೊಮ್ಮಕ್ಕಳ ಜೀವನವನ್ನೂ ನಡೆಸಿಕೊಂಡು ಹೋಗುತ್ತಿದ್ದಾರೆ. ಐದು ಜನರ ಜೀವನ ಉಪ್ಪಿನಕಾಯಿ ವ್ಯಾಪಾರದಿಂದ ಸಾಗುತ್ತಿದೆ.

Dharmasthala Laksha Deepotsava special: Kankanadi Shyamala Shenoy Uppinakayi

ಈಗ ಇವರಿಗೆ 60 ವರ್ಷ ವಯಸ್ಸು. ಇಂತಹ ಉತ್ಸವ, ಜಾತ್ರೆಗಳಲ್ಲಿ ಅಂಗಡಿಯನ್ನಿಟ್ಟುಕೊಂಡುರುಚಿರುಚಿಯಾದ ಉಪ್ಪಿನಕಾಯಿಗಳನ್ನು ಮಾರುತ್ತಾರೆ. ಪ್ರಿಯಾ ಹೋಮ್ ಪ್ರೊಡಕ್ಟ್‌ಎನ್ನುವುದು ಬ್ರಾಂಡ್ ಹೆಸರು.

English summary
Dharmasthala Laksha Deepotsava special: Kankanadi Shyamala Shenoy made Uppinakayi has become talk of the town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X