ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಉಪ್ಪಿನಕಾಯಿಗೆ ಬಹುಬೇಡಿಕೆ

By ವರದಿ: ಸವಿನಾ ನಾಯ್ಕ್, ಫೋಟೊ: ಧನ್ಯಾ ಹೊಳ್ಳ
|
Google Oneindia Kannada News

ಉಜಿರೆ: ಲಕ್ಷದೀಪೋತ್ಸವದ ವಸ್ತುಪ್ರದರ್ಶನ ಮಳಿಗೆಯಲ್ಲಿ ಉಪ್ಪಿನಕಾಯಿ ಮಾರಾಟ ಭರಾಟೆ ಜೋರಾಗಿತ್ತು. ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಾನದ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡ ಭಕ್ತರ ಗಮನ ಸೆಳೆದಿದ್ದು ಉಪ್ಪಿನಕಾಯಿ ಮಳಿಗೆ.

ಬಾಯಲಿ ನೀರೂರಿಸುವ ಉಪ್ಪಿನ ಕಾಯಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಊಟಕ್ಕೆ ಉಪ್ಪಿನ ಕಾಯಿ ಬೇಕೆ ಬೇಕು. ಹಬ್ಬ ಹರಿದಿನದ ಭೋಜನಕ್ಕೆ ಬಾಳೆಯ ತುದಿಯಲ್ಲಿ ಉಪ್ಪಿನ ಕಾಯಿ ಇಲ್ಲವಾದರೆ ಊಟ ಅಪೂರ್ಣ. ಹೀಗಿರುವಾಗ ಉಪ್ಪಿನ ಕಾಯಿ ವ್ಯಾಪಾರವನ್ನು ನಂಬಿ ಜೀವನ ನಡೆಸುವವರು ಮೂಡಬಿದರೆಯ ಕಲಾವತಿ ಭಟ್.

ಭತ್ತದ ತೋರಣ: ಗ್ರಾಮೀಣ ದೇಶಿ ಕರಕುಶಲ ಕಲೆಯ ಸೊಬಗುಭತ್ತದ ತೋರಣ: ಗ್ರಾಮೀಣ ದೇಶಿ ಕರಕುಶಲ ಕಲೆಯ ಸೊಬಗು

ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಉಪ್ಪಿನ ಕಾಯಿ ಮಳಿಗೆಯನ್ನು ಇರಿಸಿದ್ದಾರೆ. ದೀಪೋತ್ಸವದಲ್ಲಿ ಇರುವುದು ಇದೊಂದೇ ಉಪ್ಪಿನಕಾಯಿ ಮಳಿಗೆ. ಆದ್ದರಿಂದ ವ್ಯಾಪಾರವು ಒಳ್ಳೆಯದಾಗಿಯೇ ಆಗುತ್ತಿದೆ. ಉಪ್ಪಿನ ಕಾಯಿ ಮಾರಿಬಂದ ಹಣದಿಂದಲೆ ತಮ್ಮ ಜೀವನ್ನು ನಡೆಸುತ್ತಾರೆ.

ಬಾಯಲಿ ನೀರೂರಿಸುವ ಉಪ್ಪಿನ ಕಾಯಿ

ಬಾಯಲಿ ನೀರೂರಿಸುವ ಉಪ್ಪಿನ ಕಾಯಿ

ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಾನದ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡ ಭಕ್ತರ ಗಮನ ಸೆಳೆದಿದ್ದು ಉಪ್ಪಿನಕಾಯಿ ಮಳಿಗೆ. ಬಾಯಲಿ ನೀರೂರಿಸುವ ಉಪ್ಪಿನ ಕಾಯಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಊಟಕ್ಕೆ ಉಪ್ಪಿನ ಕಾಯಿ ಬೇಕೆ ಬೇಕು. ಹಬ್ಬ ಹರಿದಿನದ ಭೋಜನಕ್ಕೆ ಬಾಳೆಯ ತುದಿಯಲ್ಲಿ ಉಪ್ಪಿನ ಕಾಯಿ ಇಲ್ಲವಾದರೆ ಊಟ ಅಪೂರ್ಣ

ಮಾವಿನ ಕಾಯಿ ಉಪ್ಪಿನ ಕಾಯಿಯಲ್ಲಿ ಮೀಡಿ ತುಂಡು

ಮಾವಿನ ಕಾಯಿ ಉಪ್ಪಿನ ಕಾಯಿಯಲ್ಲಿ ಮೀಡಿ ತುಂಡು

ನೆಲ್ಲಿ, ದೊಡ್ಲಿ, ಮಾವಿನ ಕಾಯಿ,ಲಿಂಬು, ಕ್ಯಾರೇಟ್, ಕವಳಿಕಾಯಿ, ಬೆಳ್ಳುಳಿ, ಕಟ್ಟಾ ಮೀಠಾ ಹೀಗೆ 12 ತರಹದ ಉಪ್ಪಿನ ಕಾಯಿಗಳಿದ್ದವು. ಮಾವಿನ ಕಾಯಿ ಉಪ್ಪಿನ ಕಾಯಿಯಲ್ಲಿ ಮೀಡಿ ತುಂಡು ಎಂದೂ ಎರಡು ತರಹ ಇದೆ. ನಿಂಬೆಯಲ್ಲಿ ಕೆಂಪು ರಸದ್ದು, ಹಳದಿ ರಸದ ಎಂದು ಎರಡು ತರನಾದ ಉಪ್ಪಿನ ಕಾಯಿಗಳಿದ್ದವು. ಚಟ್ನಿ ಪುಡಿ ,ರಸಮ್ ಪುಡಿ, ಸಾಂಬಾರ ಪುಡಿ. ಪುಳಿಯೊಗರೆ ಪುಡಿಯೂ ಇದೆ.

350 ಕಿಲೋ ಉಪ್ಪಿನ ಕಾಯಿಯನ್ನು ದೀಪೋತ್ಸವಕ್ಕಾಗಿ

350 ಕಿಲೋ ಉಪ್ಪಿನ ಕಾಯಿಯನ್ನು ದೀಪೋತ್ಸವಕ್ಕಾಗಿ

ಬಂಡವಾಳ 95 ಸಾವಿರ ಹಾಕಿದ್ದಾರೆ. 350 ಕಿಲೋ ಉಪ್ಪಿನ ಕಾಯಿಯನ್ನು ದೀಪೋತ್ಸವಕ್ಕಾಗಿಯೆ ತಂದಿದ್ದಾರೆ. ಟೇಸ್ಟ್ ನೋಡಿ ಜನ ಖರೀದಿ ಮಾಡುತ್ತಾರೆ. ಮಾವಿನ ಕಾಯಿ ಅಪ್ಪೇ ಮಿಡಿಗೆ ಬೇಡಿಕೆ ಹೆಚ್ಚಿದೆ. 35 ಕೆಜಿ ಉಪ್ಪಿನ ಕಾಯಿ ಈಗಾಗಲೇ ಖಾಲಿಯಾಗಿದೆ. ಚಟ್ನಿ ಪುಡಿಗೆ 30 ರೂಪಾಯಿ, ಸಾಂಬಾರು ಪೌಡರ್ 50 ರೂಪಾಯಿ, ಕಾಲು ಕಿಲೋದಿಂದ ಐದು ಕೆಜಿಯ ವರೆಗೆ ಇದೆ.

ಉಪ್ಪಿನ ಕಾಯಿ ವ್ಯಾಪಾರವನ್ನೇ ನಂಬಿ ಜೀವನ

ಉಪ್ಪಿನ ಕಾಯಿ ವ್ಯಾಪಾರವನ್ನೇ ನಂಬಿ ಜೀವನ

ಬೇರೆಯಾರ ಸಹಾಯವಿಲ್ಲದೇ ಇವರ ಸಂಸಾರವೇ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹೊಟ್ಟೆಪಾಡು ಕಲಿಸಿದ ವ್ಯಾಪಾರವಿದು. ಇದನ್ನೇ ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ. ಉಪ್ಪಿನ ಕಾಯಿ ವ್ಯಾಪಾರವನ್ನೇ ನಂಬಿ ಜೀವನ ನಡೆಸುವ ಕುಟುಂಬಗಳಿವೆ ಎಂಬುವುದಕ್ಕೆ ಉದಾಹರಣೆಯಂತೆ ದೊರೆತಿದ್ದು ಲಕ್ಷದೀಪೋತ್ಸವದಲ್ಲಿ ಇವರು ಇರಿಸಿದ ಮಳಿಗೆಯಿಂದ.

English summary
Dharmasthala Lakshadeepotsava 2018 : The event witnessed demand for Moodbidri's home made GN Bhat pickles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X