• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತುಂಡಾದ ಹಗ್ಗವನ್ನು ಮತ್ತೆ ಜೋಡಿಸುವ ಮ್ಯಾಜಿಕ್

By ವರದಿ: ಅಂಜಲಿ ಕೆ.ಎಂ, ಚಿತ್ರಗಳು: ಚೈತನ್ಯ ಕುಡ
|

ಜಾದೂಗಾರ ನೋಡುಗರನ್ನು ಸೆಳೆಯುತ್ತಾನೆ. ಕುತೂಹಲ ಕೆರಳಿಸುತ್ತಾನೆ. ತನ್ನ ಚಮತ್ಕಾರಿಕ ಕಲೆಯ ರಹಸ್ಯವನ್ನು ಬಿಟ್ಟುಕೊಡದೆ ಮನರಂಜಿಸುತ್ತಾನೆ. ಆದರೆ, ಕೆಲವರು ಇದೇ ಕೌಶಲ್ಯವನ್ನು ಮೌಢ್ಯಕ್ಕಾಗಿ ಬಳಸಿಕೊಳ್ಳುತ್ತಾರೆ.

ಇಂಥ ಮೌಢ್ಯದ ರಹಸ್ಯ ಕಾರ್ಯಸೂಚಿಗಳಿಗೆ ಒಳಗಾಗಬೇಡಿ ಎಂಬ ಸಂದೇಶವನ್ನು ಶಿವಮೊಗ್ಗದ ಪ್ರತಿಭೆ ಪ್ರಶಾಂತ ಹೆಗ್ಡೆ ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಸಾರಿದರು.

ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ವಸ್ತು ಪ್ರದರ್ಶನ ಮಂಟಪದಲ್ಲಿ ನಡೆದ 'ಮ್ಯಾಜಿಕ್ ವಿಸ್ಮಯ' ಹಲವರ ಮೆಚ್ಚುಗೆಗೆ ಪಾತ್ರವಾಯಿತು. [ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ]

'ದಿ ಗ್ರೇಟ್ ಇಂಡಿಯಾ ಸಾಫ್ಟ್ ಕ್ರಾಪಿಂಗ್' ಎನ್ನುವ ಹೆಸರಿನಲ್ಲಿ ತುಂಡಾದ ಹಗ್ಗವನ್ನು ಮತ್ತೆ ಜೋಡಿಸುವ ವಿಸ್ಮಯವನ್ನು ಅನಾವರಣಗೊಳಿಸಿದರು. ಚಲನಚಿತ್ರ ನಟರಾದ ಸುದೀಪ್, ಶಾರುಖ್ ಖಾನ್ ಚಿತ್ರಪಟಗಳು ಕ್ಷಣಾರ್ಧದಲ್ಲಿ ಬದಲಾಗುವುದನ್ನು ಕಾಣಿಸಿದರು.[ನ.24ರಿಂದ ನ.29ರ ವರೆಗೆ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ]

ಪೆಟ್ಟಿಗೆಯೊಳಗೆ ಹುಡುಗಿಯನ್ನು ಕೂರಿಸಿ ತಲೆಗೆ ಚೂರಿಯಿಂದ ಚುಚ್ಚಿದರೂ ಏನೂ ಆಗದಂತೆ ಆ ಹುಡುಗಿ ಹೊರಬರುವ ಜಾದೂ ಗಮನ ಸೆಳೆಯಿತು.

ದೇಶಪ್ರೇಮದ ವೈಶಿಷ್ಟ್ಯತೆಯನ್ನೂ ಅವರ ಜಾದೂ ಪ್ರತಿಬಿಂಬಿಸಿತು. ದೇಶ ಕಾಯುವ ಯೋಧರಿಗಾಗಿ ಕೇಸರಿ, ಬಿಳಿ, ಹಸಿರು ಬಣ್ಣಗಳ ಬಟ್ಟೆಗಳನ್ನು ತೆಗೆದು ಅದನ್ನು ಧ್ವಜ ಮತ್ತು ಮಾಲೆಗಳನ್ನಾಗಿ ಪರಿವರ್ತಿಸಿದರು. ಭಾರತಾಂಬೆಯ ಭಾವಚಿತ್ರಕ್ಕೆ ಆ ಮಾಲೆಯನ್ನು ಹಾಕುವ ದೃಶ್ಯಗಳು ಆಪ್ತವೆನ್ನಿಸಿದವು.

ನೂರು ರೂಪಾಯಿ ನೋಟಿನ ಸಂಖ್ಯೆಯನ್ನು ಜನರಿಗೆ ತೋರಿಸಿ, ಅದನ್ನು ಸುಟ್ಟು ತದನಂತರ ಬಣ್ಣ ಬದಲಾಗುವ ದೃಶ್ಯವೂ ಇತ್ತು. ತದನಂತರ ಅದೇ ಸಂಖ್ಯೆಯ ನೋಟನ್ನು ತೋರ್ಪಡಿಸಿದರು.

'ಮಾತನಾಡುವ ಬೊಂಬೆ- ಜಾದೂ' ಕಾರ್ಯಕ್ರಮವನ್ನು ಮ್ಯಾಜಿಕ್ ಸುಮಾ ರಾಜ್‍ಕುಮಾರ್ ನಡೆಸಿಕೊಟ್ಟರು. ರಿಕ್ಕಿ ಎಂಬ ಗೊಂಬೆಯೊಂದಿಗೆ ಸಂಭಾಷಣಾ ಕೌಶಲ್ಯ ಮೆರೆದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The annual Laksha Deepotsava celebrations begins at Sri Kshetra Dharmasthala from November 24, Monday. The festivities will be held till November 29, 2016. Here is a report on magic show The great Indian soft cropping rope trick by magician Prashanth Hegde
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more