ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳದ ಮಂಜೂಷಾಗೆ ಬಂದ ಎರಡು ಡಬಲ್ ಡೆಕ್ಕರ್ ಬಸ್

|
Google Oneindia Kannada News

ಮಂಗಳೂರು, ಮಾರ್ಚ್ 09; ಧರ್ಮಸ್ಥಳದಲ್ಲಿರುವ 'ಮಂಜೂಷಾ ವಸ್ತು ಸಂಗ್ರಹಾಲಯ'ದ ಆಕರ್ಷಣೆಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ. ಎರಡು ಡಬಲ್ ಡೆಕ್ಕರ್ ಬಸ್‌ಗಳನ್ನು ಭಕ್ತರು ಕೊಡುಗೆಯಾಗಿ ನೀಡಿದ್ದಾರೆ.

ಮುಂಬೈನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು ಎರಡು ಡಬಲ್ ಡೆಕ್ಕರ್ ಬಸ್‌ಗಳನ್ನು ಕಳುಹಿಸಿದ್ದು, ಬಸ್‌ಗಳು ಧರ್ಮಸ್ಥಳಕ್ಕೆ ಬಂದು ತಲುಪಿವೆ. ಕೆಂಪು ಮತ್ತು ನೀಲಿ ಬಣ್ಣದ ಬಸ್‌ಗಳಿಂದಾಗಿ ಮಂಜೂಷಾದ ಆಕರ್ಷಣೆಗೆ ಹೊಸ ಸೇರ್ಪಡೆಯಾಗಿದೆ.

ಮೈಸೂರು ರಸ್ತೆಗಿಳಿದ 'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್ ಮೈಸೂರು ರಸ್ತೆಗಿಳಿದ 'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್

ನೀಲಿ ಬಣ್ಣದ ಬಸ್‌ ಟಾಪ್ ಓಪನ್ ಇದೆ. ಮುಂಬೈ ನಗರದಲ್ಲಿ ಈ ಬಸ್‌ನಲ್ಲಿ ಪ್ರವಾಸಿಗರು ವಿವಿಧ ಪ್ರವಾಣಿತಾಣಗಳನ್ನು ವೀಕ್ಷಣೆ ಮಾಡಿದ್ದಾರೆ. ಇದೊಂದು ಪ್ರವಾಸಿಗರಿಗಾಗಿಯೇ ಮೀಸಲಾದ ಬಸ್ ಆಗಿತ್ತು.

ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ರೈಲು ವೇಳಾಪಟ್ಟಿ ಬದಲು ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ರೈಲು ವೇಳಾಪಟ್ಟಿ ಬದಲು

Dharmasthala Devotees From Mumbai Sends 2 Double Decker Buses To Manjusha Museum

ಕೆಂಪು ಬಣ್ಣದ ಡಬಲ್ ಡೆಕ್ಕರ್ ಬಸ್ ಜನರು ಪ್ರಯಾಣ ಮಾಡುತ್ತಿದ್ದ ಬಸ್ ಆಗಿದೆ. ಇದರ ಟಾಪ್ ಸಂಪೂರ್ಣ ಮುಚ್ಚಿದೆ. ಖಾಸಗಿ ಸಂಸ್ಥೆ ಉಚಿತವಾಗಿ ಮುಂಬೈನಿಂದ ಧರ್ಮಸ್ಥಳಕ್ಕೆ ಬಸ್‌ಗಳನ್ನು ತಂದು ಕೊಟ್ಟಿದೆ.

ಹಂಪಿಯಲ್ಲಿ ಡಬಲ್ ಡೆಕ್ಕರ್ ಬಸ್ ಪರಿಚಯಿಸಲಿದೆ ಕೆಎಸ್‌ಟಿಡಿಸಿಹಂಪಿಯಲ್ಲಿ ಡಬಲ್ ಡೆಕ್ಕರ್ ಬಸ್ ಪರಿಚಯಿಸಲಿದೆ ಕೆಎಸ್‌ಟಿಡಿಸಿ

ಬಸ್‌ಗಳನ್ನು ಬರಮಾಡಿಕೊಂಡ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಬಸ್ ಕೊಡುಗೆ ನೀಡಿದ ಭಕ್ತರು, ಧರ್ಮಸ್ಥಳಕ್ಕೆ ತಂದು ಕೊಟ್ಟ ಖಾಸಗಿ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು. ಶ್ರೀ ಮಂಜುನಾಥ ಸ್ವಾಮಿ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು.

Dharmasthala Devotees From Mumbai Sends 2 Double Decker Buses To Manjusha Museum

'ಮಂಜೂಷಾ ವಸ್ತು ಸಂಗ್ರಹಾಲಯ'ದಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಂಗ್ರಹಿಸಿದ ಅಪರೂಪದ ವಸ್ತುಗಳಿವೆ. ವಿಕ್ಟೋರಿಯಾ ರಾಣಿಯ ವಿಶೇಷ ನವೀಕರಣಗೊಂಡ ಕಾರು, ಮಹಾತ್ಮ ಗಾಂಧಿ ಕರ್ನಾಟಕ ಪ್ರವಾಸದಲ್ಲಿ ಬಳಕೆ ಮಾಡಿದ್ದ ಕಾರು ಇಲ್ಲಿವೆ.

ಹಿಂದಿನ ಕಾಲದ ಅಂಬ್ಯುಲೆನ್ಸ್, ಹಬೆಯಿಂದ ಚಲಿಸುವ ಉಗಿಬಂಡಿ, ರೋಡ್ ರೋಲರ್ ಹೀಗೆ ಅಮೂಲ್ಯ ವಸ್ತುಗಳು ಇಲ್ಲಿವೆ. ಧರ್ಮಸ್ಥಳಕ್ಕೆ ಭೇಟಿ ನೀಡಿದವರು ವಸ್ತು ಸಂಗ್ರಹಾಲಯ ನೋಡಿಕೊಂಡು ಬರುತ್ತಾರೆ.

English summary
Dharmasthala devotees from Mumbai send two double decker buses to Manjusha museum. Museum privately owned by Dr Veerendra Hedge Dharmadhikari of Dharmasthala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X