ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ

|
Google Oneindia Kannada News

ದಕ್ಷಿಣ ಕನ್ನಡ, ಮಾರ್ಚ್ 3, ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವರ ದರ್ಶನದ ಸಮಯ ಬದಲಾಗಿದೆ. ಎಲ್ಲ ಭಕ್ತಾದಿಗಳಿಗೂ ದೇವರ ದರ್ಶನ ಸಿಗಬೇಕು ಎನ್ನುವ ಉದ್ದೇಶದಿಂದ ದರ್ಶನ ಸಮಯವನ್ನು ಬದಲು ಮಾಡಲಾಗಿದೆ.

ಬೆಳಗ್ಗೆ 6:30 ರಿಂದ ಮಧ್ಯಾಹ್ನ 2:30ರವರೆಗೆ ಹಾಗೂ ಸಂಜೆ 5 ಗಂಟೆಯಿಂದ 8:30ರವರೆಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಅಬ್ಬಬ್ಬಾ..1 ದಿನಕ್ಕೆ ಧರ್ಮಸ್ಥಳದಲ್ಲಿ ಊಟ ಮಾಡುವ ಭಕ್ತರ ಸಂಖ್ಯೆ ಕೇಳಿದ್ರೆ ಅಚ್ಚರಿ ಆಗುತ್ತೆ

ಭಾನುವಾರ, ಸೋಮವಾರ, ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಭಕ್ತದಿಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದ್ದು, ಬೆಳಗ್ಗೆ 6:30 ರಿಂದ 4ವರೆಗೆ ಹಾಗೂ ಸಂಜೆ 5 ಗಂಟೆಯಿಂದ 9 ಗಂಟೆವರೆಗೆ ದೇವರ ದರ್ಶನ ಮಾಡಬಹುದಾಗಿದೆ.

ಈ ಹಿಂದೆ ಬೆಳಗ್ಗೆ 6:30 ರಿಂದ 11:30ರವರೆಗೆ, 12:30 ರಿಂದ 2 :30ರವರೆಗೆ ಹಾಗೂ ಸಂಜೆ 5 ಗಂಟೆಯಿಂದ 8:30ರವರೆಗೆ ದೇವರ ದರ್ಶನದ ಸಮಯವಾಗಿತ್ತು. ಆದರೆ, ಈಗ ದರ್ಶನದ ಸಮಯ ಹೆಚ್ಚಾಗಿದೆ.

ಧರ್ಮಸ್ಥಳದಲ್ಲಿ ಎಷ್ಟು ಕಾರುಗಳಿವೆ? : ಬೆರಗುಗೊಳಿಸುತ್ತದೆ ಶ್ರೀಗಳ ಕಾರ್ ಜ್ಞಾನ

Dharmasthala Darshana Timings Has Changed

ಇತ್ತೀಚಿಗಷ್ಟೆ ಧರ್ಮಸ್ಥಳಕ್ಕೆ ಬರುವ ಭಕ್ತರ ಸಂಖ್ಯೆ ಜಾಸ್ತಿಯಾಗಿತ್ತು. ಹೀಗಾಗಿ ಕೆಲವರಿಗೆ ದರ್ಶನ ಪಡೆಯಲು ಆಗುತ್ತಿರಲಿಲ್ಲ. ಅಲ್ಲದೆ, ಮುಂದೆ ರಜೆ ದಿನಗಳು ಶುರು ಆಗಲಿದ್ದು, ಭಕ್ತಾದಿಗಳು ಹೆಚ್ಚಾಗುತ್ತಾರೆ. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿ ಸಮಯ ಬದಲಾವಣೆ ಮಾಡಿದೆ.

ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಇದೆ. ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಇದಾಗಿದೆ.

English summary
Dharmasthala Manjunatha swamy darshana timings has changed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X