ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರ ಗಮನಕ್ಕೆ

|
Google Oneindia Kannada News

ದಕ್ಷಿಣ ಕನ್ನಡ, ಜೂನ್ 16 : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆಯುವ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ಜೂನ್ 21ರ ಭಾನುವಾರ ಸೂರ್ಯ ಗ್ರಹಣ ಇರುವ ಕಾರಣ ಸಮಯ ಬದಲಾವಣೆಯಾಗಿದೆ.

ಭಾನುವಾರ ಭಕ್ತಾದಿಗಳು ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆಯಲು ಅವಕಾಶವಿಲ್ಲ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಸೂರ್ಯ ಗ್ರಹಣದ ಕಾರಣ ಬೆಳಗ್ಗೆ ದೇವಾಲಯ ಬಾಗಿಲು ಮುಚ್ಚಿರುತ್ತದೆ.

ಕೊರೊನಾ: ಸಪ್ತಪದಿ ಸಾಮೂಹಿಕ ಮದುವೆಗೂ ಹಿಡಿಯಿತು ಗ್ರಹಣಕೊರೊನಾ: ಸಪ್ತಪದಿ ಸಾಮೂಹಿಕ ಮದುವೆಗೂ ಹಿಡಿಯಿತು ಗ್ರಹಣ

ಭಕ್ತಾದಿಗಳು ಬೆಳಗ್ಗೆ 5.30ರಿಂದ 9 ಗಂಟೆಯ ತನಕ ಮತ್ತು ಸಾಯಂಕಾಲ 4 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಭಾನುವಾರ ಹೆಚ್ಚಿನ ಭಕ್ತರು ಆಗಮಿಸುವುದರಿಂದ ಸಮಯ ಪರಿಷ್ಕರಣೆ ಬಗ್ಗೆ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

ಜೂನ್ 21ಕ್ಕೆ ಸೂರ್ಯ ಗ್ರಹಣದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮಗಳೇನು?ಜೂನ್ 21ಕ್ಕೆ ಸೂರ್ಯ ಗ್ರಹಣದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮಗಳೇನು?

Dharmasthala Darshan Timings Changed On June 21

ಈ ವರ್ಷದ ಮೊದಲ ಸೂರ್ಯ ಗ್ರಹಣ ಜೂನ್ 21ರ ಭಾನುವಾರ ನಡೆಯಲಿದೆ. ಅಂದು ಸೂರ್ಯನು ಪ್ರಕಾಶಮಾನವಾದ ಉಂಗುರದಂತೆ ಕಾಣುತ್ತಾನೆ. ಪ್ರಪಂಚದಾದ್ಯಂತ ಜನರು ಈ ಸೂರ್ಯ ಗ್ರಹಣವನ್ನು ವೀಕ್ಷಿಸಬಹುದಾಗಿದೆ.

ಕಲಬುರಗಿ: ಗ್ರಹಣ ಕೇಡೆಂದು ಮಕ್ಕಳನ್ನು ತಿಪ್ಪೆಯಲ್ಲಿ ಹೂತರುಕಲಬುರಗಿ: ಗ್ರಹಣ ಕೇಡೆಂದು ಮಕ್ಕಳನ್ನು ತಿಪ್ಪೆಯಲ್ಲಿ ಹೂತರು

ಚಂದ್ರನ ನೆರಳು ಸೂರ್ಯನ ಶೇ 99ರಷ್ಟು ಭಾಗವನ್ನು ಆವರಿಸಿಕೊಳ್ಳುತ್ತದೆ. ಪ್ರತಿ 18 ವರ್ಷಗಳಿಗೊಮ್ಮೆ ಇಂತಹ ಗ್ರಹಣ ನಡೆಯುತ್ತದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ. ಜನರು ಗ್ರಹಣ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ.

ಭಾನುವಾರ ಬೆಳಗ್ಗೆ 10.31ಕ್ಕೆ ಗ್ರಹಣ ಆರಂಭವಾಗಲಿದ್ದು, ಮಧ್ಯಾಹ್ನ 2.30ಕ್ಕೆ ಕೊನೆಗೊಳ್ಳಲಿದೆ. ಗ್ರಹಣವು 12.18ಕ್ಕೆ ಪೂರ್ಣ ಪ್ರಮಾಣದಲ್ಲಿ ಗೋಚರವಾಗಲಿದೆ.

English summary
Due to solar eclipse on June 21, 2020 darshan timings in Dharmasthala shri Manjunatha swami temple changed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X