ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳದಲ್ಲಿ ಯುವತಿಯರ ಮನಸೆಳೆದ ಬ್ಲಾಕ್ ಮೆಟಲ್ ಆಭರಣಗಳು

By ವರದಿ ಮತ್ತು ಚಿತ್ರ : ಜಯಲಕ್ಷ್ಮಿ ಭಟ್, ಉಜಿರೆ
|
Google Oneindia Kannada News

ಉಜಿರೆ: ಹೆಣ್ಣು ಆಭರಣ ಪ್ರಿಯೆ. ಸರ, ಬಳೆ, ಓಲೆ, ಉಂಗುರ ಕಾಲ್ಗೆಜ್ಜೆ ಹೀಗೆ ನೂರಾರು ರೀತಿಯ ಆಭರಣಗಳನ್ನು ಖರೀದಿಸಿ ಸಂಭ್ರಮಿಸುವುದರಲ್ಲಿ ಮಹಿಳೆಯರು ಹಿಂದೆ ಉಳಿಯುವ ಮಾತಿಲ್ಲ. ಬದಲಾಗುವ ಟ್ರೆಂಡ್ಗಳ ಜೊತೆ ಜೊತೆಯಲ್ಲಿ ಹೆಣ್ಣುಮಕ್ಕಳ ಆಭರಣದ ಅಭಿರುಚಿಯಲ್ಲೂ ಬದಲಾವಣೆ ಸರ್ವೇ ಸಾಮಾನ್ಯ.

ಪ್ರಸ್ತುತವಾಗಿ ಬಹು ಬೇಡಿಕೆಯಲ್ಲಿರುವ ಬ್ಲಾಕ್ ಮೆಟಲ್ ಆಭರಣಗಳು ಲಕ್ಷದೀಪೋತ್ಸವದಲ್ಲಿ ಮಹಿಳೆಯರ ಗಮನ ಸೆಳೆಯುವುದರಲ್ಲಿ ಮುಂಚೂಣಿಯಲ್ಲಿವೆ.

ಲಕ್ಷದೀಪೋತ್ಸವದಲ್ಲಿ ಗಮನ ಸೆಳೆದ ಬಳಪದ ಕಲ್ಲಿನ ಪಾತ್ರೆಗಳುಲಕ್ಷದೀಪೋತ್ಸವದಲ್ಲಿ ಗಮನ ಸೆಳೆದ ಬಳಪದ ಕಲ್ಲಿನ ಪಾತ್ರೆಗಳು

ಉಜಿರೆಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ಹೆಣ್ಣುಮಕ್ಕಳ ಅಲಂಕಾರಿಕ ಸಾಮಗ್ರಿಗಳ ಮಾರಾಟ ಭರದಿಂದ ಸಾಗಿದೆ.

ಅದರಲ್ಲೂ ಬೇರೆಲ್ಲ ಆಭರಣಗಳ ಮಧ್ಯೆ ಬ್ಲಾಕ್ ಮೆಟಲ್ ಆಭರಣಗಳು ಹೆಚ್ಚಾಗಿ ಯುವತಿಯರ ಗಮನವನ್ನು ಸೆಳೆಯುವಲ್ಲಿ ಮುಖ್ಯಪಾತ್ರವಹಿಸಿವೆ. ಬ್ಲಾಕ್ ಮೆಟಲ್ ಆಭರಣಗಳ ಒಂದು ವಿಶೇಷತೆ ಎಂದರೆ ಅದು ಸಾಂಪ್ರದಾಯಿಕ ಮತ್ತು ಮಾಡರ್ನ್ ಎರಡೂ ಉಡುಗೆಗಳ ಜೊತೆಗೆ ಸಲೀಸಾಗಿ ಹೊಂದಿಕೊಳ್ಳುತ್ತವೆ.

Dharmasthala : Black Metal Ornaments attracted Youngsters
ರಾಜಸ್ಥಾನ ಮತ್ತು ಹರಿಯಾಣ ಮೂಲದ ಪ್ರಮೋದ್‍ಕುಮಾರ ಮತ್ತು ವಿನೋದ್‍ಕುಮಾರ ಅವರ ಅಂಗಡಿಯಲ್ಲಿ ಸುಮಾರು ಎಪ್ಪತ್ತಕ್ಕೂ ಅಧಿಕ ರೀತಿಯ ಬ್ಲಾಕ್ ಮೆಟಲ್ ಓಲೆಗಳು ಮತ್ತು ಸುಮಾರು ಐವತ್ತಕ್ಕೂ ಅಧಿಕ ಕುತ್ತಿಗೆ ಹಾರಗಳು ಹೆಣ್ಣುಮಕ್ಕಳನ್ನು ಆಕರ್ಷಿಸುವಂತಿವೆ. ಕೇವಲ ಮಹಿಳೆಯರಿಗೆ ಮಾತ್ರವಲ್ಲದೇ ಚಿಕ್ಕ ಬಾಲಕಿಯರಿಗೂ ಹೊಂದಬಹುದಾದಂಥ ಆಭರಣಗಳು ಇಲ್ಲಿವೆ.

ಆಭರಣಗಳನ್ನು ರಾಜಸ್ಥಾನದಲ್ಲಿಯೇ ತಯಾರಿಸಲಾಗುತ್ತದೆ, ಕನ್ನಡಿ, ಮಣಿ, ರೇಶ್ಮೆ ದಾರಗಳಿಂದ ತಯಾರಾದ ಆಭರಣಗಳಿಗೆ ಬೇಡಿಕೆ ಕೊಂಚ ಹೆಚ್ಚು. ಬ್ಲಾಕ್ ಮೆಟಲ್ ಆಭರಣಗಳು ಕಳೆಗುಂದುವುದಿಲ್ಲ.

Black metal


ಅಧಿಕ ವರ್ಷ ಬಾಳಿಕೆಗೆ ಬರುತ್ತವೆ ಮತ್ತು ಕಾಪಾಡಿಕೊಳ್ಳುವುದು ಸುಲಭ. ಕೆಲವೊಂದಿಷ್ಟು ಬಗೆಯ ಆಭರಣಗಳಿಗೆ ಬೆಲೆ ಅಧಿಕ ಎನಿಸಿದರೂ ಗುಣಮಟ್ಟಕ್ಕೆ ಬೆಲೆ ನಿಗದಿಪಡಿಸುವುದು ಅನಿವಾರ್ಯ ಎನಿಸುತ್ತದೆ.

ಧರ್ಮಸ್ಥಳದಲ್ಲಿ ಪ್ರದರ್ಶನಗೊಂಡ ಸುಂದರವಾದ ಮಾದರಿ ಮನೆಧರ್ಮಸ್ಥಳದಲ್ಲಿ ಪ್ರದರ್ಶನಗೊಂಡ ಸುಂದರವಾದ ಮಾದರಿ ಮನೆ

'ಧರ್ಮಸ್ಥಳಕ್ಕೆ ಇದೇ ಮೊದಲಬಾರಿ ಬಂದಿದ್ದೇವೆ. ಆದರೆ ನಮ್ಮ ಬಂಡವಾಳ ಕಡಿಮೆ ಇರುವ ಕಾರಣ ಸ್ವಂತ ಮಳಿಗೆಯನ್ನು ಖರೀದಿಸುವುದು ಕಷ್ಟ. ರಸ್ತೆ ಬದಿಯಲ್ಲಿ ನಿಂತು ವ್ಯಾಪಾರ ನಡೆಸಬೇಕಾಗುತ್ತದೆ.

ನಮ್ಮಲ್ಲಿನ ಆಭರಣಗಳು ದೀಪೋತ್ಸವದಲ್ಲಿ ಬೇರೆ ಕಡೆ ಕಾಣಸಿಗುವುದಿಲ್ಲ. ಬೆಲೆ ಅಧಿಕವಾಯಿತು ಎಂಬ ಮಾತಿದ್ದರೂ ಗುಣಮಟ್ಟಕ್ಕೆ ಗ್ರಾಹಕರು ಚೌಕಾಸಿ ಮಾಡುವುದಿಲ್ಲ. ವ್ಯಾಪಾರದಲ್ಲಿ ಮಿಶ್ರ ಫಲ ಸಿಗುತ್ತಿದೆ' ಎನ್ನುತ್ತಾರೆ ರಾಜಸ್ಥಾನದ ಪ್ರಮೋದ್‍ಕುಮಾರ್

English summary
Dharmasthala : Black Metal Ornaments attracted Youngsters during the Laksha Deepotsava festival celebration 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X