ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಉರುಳು ಸೇವೆ ಮಾಡುವ ಭಕ್ತರು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 05; ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷೃಷ್ಠಿಯ ಸಂಭ್ರಮದ ವಾತಾವರಣ ಮೂಡಿದೆ. ದೇಶದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬರುವ ಭಕ್ತರು ವಿವಿಧ ರೀತಿಯ ಸೇವೆಗಳನ್ನು ದೇವರಿಗೆ ಅರ್ಪಿಸುವುದು ಹಿಂದಿನಿಂದಲೂ ಬಂದ ವಾಡಿಕೆ. ಇದರಲ್ಲಿ ಅತ್ಯಂತ ಕಠಿಣವಾದುದು ಹಾಗೂ ಅತೀ ಫಲದಾಯಕವಾದ ಸೇವೆ ಬೀದಿ ಮಡೆಸ್ನಾನವಾಗಿದೆ.

ಚಂಪಾಷಷ್ಠಿ ವೀಕ್ಷಿಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಾರೆ ವಿಶೇಷ ಅತಿಥಿಗಳು!ಚಂಪಾಷಷ್ಠಿ ವೀಕ್ಷಿಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಾರೆ ವಿಶೇಷ ಅತಿಥಿಗಳು!

ಸುಪ್ರಸಿದ್ದ ನಾಗಕ್ಷೇತ್ರಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ದಕ್ಷಿಣ ಭಾರತದ ದೇವಾಲಯಗಳಲ್ಲಿ ಪ್ರಥಮ ಸ್ಥಾನ. ದೇಶದ ಹಲವೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಆಗಮಿಸಿ ತನ್ನ ಅಭೀಷ್ಠ ಸಿದ್ದಿಗಾಗಿ ಶ್ರೀ ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ. ದೇಶದ ಹೆಸರಾಂತ ವ್ಯಕ್ತಿಗಳಾದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟ ಅಮಿತಾ ಭಚ್ಚನ್, ಬಹುತೇಕ ಎಲ್ಲಾ ಪ್ರಮುಖ ರಾಜಕಾರಣಿಗಳು ಸೇರಿದಂತೆ ಹಲವರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.

 ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂಲಮೃತ್ತಿಕಾ ಪ್ರಸಾದ ವಿತರಣೆ; ಹುತ್ತದ ಮಣ್ಣಿಗಿದೆ ಅಪಾರ ಶಕ್ತಿ! ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂಲಮೃತ್ತಿಕಾ ಪ್ರಸಾದ ವಿತರಣೆ; ಹುತ್ತದ ಮಣ್ಣಿಗಿದೆ ಅಪಾರ ಶಕ್ತಿ!

ದೇವರ ಕೃಪೆಗೆ ಪಾತ್ರರಾಗುವ ಉದ್ದೇಶದಿಂದ ಉಳ್ಳವರು, ಇಲ್ಲದವರು ಎಲ್ಲರೂ ಇಲ್ಲಿ ಅವರ ಅವರವರ ಭಾವ-ಭಕುತಿಗೆ ಅನುಗುಣವಾಗಿ ಸೇರಿದಂತೆ ಹಲವು ರೀತಿಯ ಸೇವೆಗಳನ್ನು ನೀಡುವ ಮೂಲಕ ಕೃತಾರ್ತರಾಗುತ್ತಾರೆ. ಉಳ್ಳವರು ಬೆಳ್ಳಿ ಬಂಗಾರ ನೀಡಿದರೆ, ಇಲ್ಲದವರು ಬೀದಿ ಮಡೆಸ್ನಾನ ಎನ್ನುವ ಬಲು ಕಠಿಣ ಊರುಳು ಸೇವೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆಯುವ ಚಂಪಾಷಷ್ಠಿ ಜಾತ್ರಾ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಸೇವೆಯನ್ನು ಮಾಡುವ ಮೂಲಕ ದೇವರನ್ನು ಬೇಡಿಕೊಳ್ಳುತ್ತಾರೆ. ಶ್ರೀಕ್ಷೇತ್ರದಿಂದ 2. 5 ಕಿಲೋ ಮೀಟರ್ ದೂರದಲ್ಲಿರುವ ಕುಮಾರಧಾರ ನದಿಯಲ್ಲಿ ಸ್ನಾನಮಾಡಿ, ಬೀದಿಯಲ್ಲಿ ಉರುಳು ಸೇವೆ ಮಾಡುವುದು ಇದರ ವಿಶೇಷ .

Devotees Will Perform Urulu Seve At Kukke Subramanya Temple

ದೇವಸ್ಥಾನವನ್ನು ತಲುಪುವರೆಗೂ ಗೋವಿಂದ ಘೋಷಣೆಯೊಂದಿಗೆ ಭಕ್ತರು ಮಾರ್ಗ ಮಧ್ಯೆ ಉರುಳುವ ಮೂಲಕ ದೇವಸ್ಥಾನದ ಕಡೆಗೆ ಸಾಗುತ್ತಾರೆ. ಹೀಗೆ ಸಾಗುವಾಗ ದಾಸರು ಶಂಖ ನಾದವೂ ಮೊಳಗಿಸುವ ಮೂಲಕ ಸುಬ್ರಹ್ಮಣ್ಯ ಹಾಗೂ ವಿಷ್ಣುವಿನ ನಡುವಿನ ಸಂಬಂಧವನ್ನು ನೆನಪಿಸಲಾಗುತ್ತದೆ. ಹರಕೆ ರೂಪದಲ್ಲಿ ಭಕ್ತಾಧಿಗಳು ಈ ಸೇವೆಯನ್ನು ತಮ್ಮ ಇಚ್ಛಾನುಸಾರ ನೆರವೇರಿಸುತ್ತಿದ್ದು, ಕೆಲವರು ತಮ್ಮ ಇಚ್ಛೆ ಈಡೇರಿಸಲು ಸೇವೆ ಮಾಡಿದರೆ, ಇನ್ನು ಕೆಲವರು ತಮ್ಮ ಇಚ್ಛೆ ಈಡೇರಿದ ಕಾರಣಕ್ಕಾಗಿ ಈ ಸೇವೆಯನ್ನು ಮಾಡುತ್ತಾರೆ.

 ಡಿ.1ರಿಂದ ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ; ಡಿ.9ರಂದು ಚಂಪಾಷಷ್ಠಿಯ ಬ್ರಹ್ಮ ರಥೋತ್ಸವ ಡಿ.1ರಿಂದ ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ; ಡಿ.9ರಂದು ಚಂಪಾಷಷ್ಠಿಯ ಬ್ರಹ್ಮ ರಥೋತ್ಸವ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಬೀದಿ ಮಡೆಸ್ನಾನಕ್ಕೆ ಅಧಿಕೃತ ಸೇವೆ ರೂಪದಲ್ಲಿ ಗುರುತಿಸಿಕೊಂಡಿರದಿದ್ದರೂ, ಚಂಪಾಷಷ್ಠಿಯ ಮೂರು ದಿನಗಳು ಮಾತ್ರ ನಡೆಯುವ ಈ ಬೀದಿ ಮಡೆಸ್ನಾನಕ್ಕೆ ದೇವಸ್ಥಾನದ ವತಿಯಿಂದ ಭಕ್ತಾಧಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಬೀದಿ ಮಡೆಸ್ನಾನ ಆರಂಭಕ್ಕೆ ಮೊದಲು ರಥಬೀದಿಯನ್ನು ನೀರು ಸಿಂಪಡಿಸಿ ತೊಳೆಯುವ ವ್ಯವಸ್ಥೆಯನ್ನೂ ಇಲ್ಲಿ ಮಾಡುವ ಮೂಲಕ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆಯೂ ನೋಡಿಕೊಳ್ಳಲಾಗುತ್ತದೆ. ಬೀದಿ ಮಡೆಸ್ನಾನ ಮಾಡಿದ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶವನ್ನೂ ನೀಡಲಾಗುತ್ತದೆ. ಮೂರು ದಿನಗಳ ಕಾಲ ಈ ಉರುಳು ಸೇವೆಯು ದೇವರ ಸನ್ನಿಧಿಯಲ್ಲಿ ನಡೆಯುತ್ತದೆ.

Devotees Will Perform Urulu Seve At Kukke Subramanya Temple

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಠ ಸೇವೆಯಲ್ಲೊಂದಾದ ಬೀದಿಮಡೆಸ್ನಾನವನ್ನು ಲಕ್ಷ ದೀಪೋತ್ಸವದ ರಥೋತ್ಸವ ಬಳಿಕ ಆರಂಭಿಸಿ, ಚಂಪಾಷಷ್ಠಿ ಮಹಾರಥೋತ್ಸವ ತನಕ ನೆರವೇರಿಸುತ್ತಾರೆ. ಅನೇಕ ಮಂದಿ ಭಕ್ತರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ರಾಜರಸ್ತೆ, ತೇರು ಬೀದಿಯಲ್ಲಿ ಉರುಳಿಕೊಂಡು ದೇವಳಕ್ಕೆ ಬಂದು ಉರುಳಿಕೊಂಡೇ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸುತ್ತಾರೆ. ಈ ಸೇವೆಯನ್ನು ಸ್ವಯಂ ಸ್ಫೂರ್ತಿ ಮತ್ತು ಭಕ್ತಿಯಿಂದ ನೆರವೇರಿಸುತ್ತಾರೆ. ಇದಕ್ಕೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಸುಮಾರು ಮೂರು ಕಿ. ಮೀ.ಗಿಂತಲೂ ಅಧಿಕ ದೂರವನ್ನು ಭಕ್ತರು ಉರುಳುತ್ತಾ ಸುಮಾರು 5-6 ಗಂಟೆ ಅವಧಿಯಲ್ಲಿ ಕ್ರಮಿಸುತ್ತಾರೆ.

ಉರುಳು ಸೇವೆ ಮಾಡುವವರು ಮೊದಲೇ ಅನೇಕ ದಿನಗಳಿಂದ ವೃತವನ್ನು ಕೈಗೊಂಡಿರುತ್ತಾರೆ. ಶ್ರೀ ದೇವರನ್ನು ಆರಾಧಿಸುವ ಕಠಿಣ ಹಾಗೂ ವಿಶಿಷ್ಟ ಸೇವೆ ಇದಾಗಿದ್ದು, ಪುರುಷ, ಮಹಿಳೆ, ಮಕ್ಕಳು ಹಾಗೂ ವೃದ್ದರೂ ಈ ಸೇವೆಯನ್ನು ಮಾಡುತ್ತಾರೆ. ಹೀಗೆ ಉರುಳು ಸೇವೆ ಮಾಡುವವರ ಜತೆಯಲ್ಲಿ ದಾಸಯ್ಯರು ತಮ್ಮ ಶಂಖ ಜಾಗಟೆಯೊಂದಿಗೆ ಗೋವಿಂದಾ ಅನ್ನಿ ಗೋವಿಂದಾ ಕೂಗುತ್ತಾ ದೇವರ ಘೋಷಗಳನ್ನು ಕೂಗುತ್ತಾ ಸಾಗುತ್ತಾರೆ.

Recommended Video

ಗೋಧಿ ಹಾಗೂ ಜೀವರಕ್ಷಕ ಔಷಧ ಸಾಗಿಸಲು ಪಾಕ್ ಅನುಮತಿ | Oneindia Kannada

ಅನೇಕ ವರ್ಷಗಳಿಂದ ಸತತವಾಗಿ ಈ ಕಠಿಣವಾದ ಸೇವೆಯನ್ನು ಸಲ್ಲಿಸುವ ಅಸಂಖ್ಯಾತ ಭಕ್ತರೂ ಇದ್ದಾರೆ. ಈ ಸೇವೆಯಿಂದಾಗಿ ಭಕ್ತರ ಸಂಕಷ್ಠಗಳು, ರೋಗರುಜಿನಗಳು ನಿವಾರಣೆಯಾದ ಉದಾಹರಣೆಗಳಿವೆ. ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಭಕ್ತರು ಈ ಸೇವೆಯನ್ನು ಕುಮಾರಧಾರದಿಂದ ಆರಂಭಿಸುತ್ತಾರೆ. ಕೆಲವರಂತೂ ರಾತ್ರಿಯೂ ಈ ಸೇವೆಯನ್ನು ನೆರವೇರಿಸುತ್ತಾರೆ. ಜಾತಿ, ಮತ, ಲಿಂಗ, ವರ್ಗ, ಪ್ರಾಯ, ಭೇದ ಮರೆತು ದೇವರಿಗೆ ಸಂಪೂರ್ಣ ಶರಣಾಗುವ ಈ ಹರಕೆ ಸೇವೆಗಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ.

English summary
Devotees will perform Urulu Seve at Kukke Subramanya temple in the time of Champa shashti on December 9, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X