ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿದ ಡೆಂಗ್ಯೂ ಭೀತಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ19: ಕರಾವಳಿಯಲ್ಲಿ ಮಳೆಯ ಜೊತೆಗೆ ಮಾರಕ ಡೆಂಗ್ಯೂ ಜ್ವರ ಅಬ್ಬರಿಸುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 207 ಸಕ್ರಿಯ ಡೆಂಗ್ಯೂ ಪ್ರಕರಣಗಳಿದ್ದು ಎರಡೂವರೆ ಸಾವಿರಕ್ಕೂ ಅಧಿಕ ಶಂಕಿತ ಜ್ವರ ಪ್ರಕರಣಗಳು ದಾಖಲಾಗಿವೆ.

ಮಳೆಯೊಂದಿಗೆ ಡೆಂಗ್ಯೂ ಭೀತಿಯೂ ಹೆಚ್ಚಾಗಿದ್ದು, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹಲವೆಡೆ ಡೆಂಗ್ಯೂ ಆತಂಕಕಾರಿಯಾಗಿ ಪರಿಣಮಿಸಿದೆ. ಡೆಂಗ್ಯೂ ಮಿತಿ ಮೀರಿದ ಹಿನ್ನೆಲೆಯಲ್ಲಿ ಶಾಲೆಗಳಿಗೆ 10 ದಿನ ರಜೆ ಘೋಷಣೆ ಮಾಡಲಾಗಿದೆ. ಬೈಂದೂರು ತಾಲೂಕು ವ್ಯಾಪ್ತಿಯ ಜಡ್ಕಲ್ ಮುದೂರು ಗ್ರಾಮದಲ್ಲಿ ಶಾಲೆಗಳಿಗೆ ಮುಂದಿನ 10 ದಿನಗಳ‌ ಕಾಲ ಶಾಲೆಗಳಿಗೆ ರಜೆಯನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಘೋಷಿಸಿದ್ದಾರೆ.

ಉಭಯ ಜಿಲ್ಲಾ ಆರೋಗ್ಯ ಇಲಾಖೆ ಪ್ರತಿ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೆಗೆ ಮುಂದಾಗಿದೆ. ಮೇ 15ರ ವರೆಗಿನ ಅಂಕಿ-ಅಂಶಗಳ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 152 ಖಚಿತ ಪ್ರಕರಣಗಳಿದ್ದು, 2,000 ಕ್ಕೂ ಮಿಕ್ಕಿ ಶಂಕಿತ ಪ್ರಕರಣಗಳಿವೆ.

Dengue Case Raise 10 Days Holiday For School At Dakshina Kannada And Udupi Districts

ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯೊಂದರಲ್ಲೇ 113 ಪ್ರಕರಣಗಳಿವೆ. ದಕ್ಷಿಣ ಕನ್ನಡದಲ್ಲಿ 55 ಖಚಿತ ಪ್ರಕರಣಗಳು ವರದಿಯಾಗಿದ್ದು 1,770 ಶಂಕಿತ ಪ್ರಕರಣಗಳಿವೆ. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮವೊಂದರಲ್ಲೇ 48 ಶಂಕಿತ ಪ್ರಕರಣಗಳಿವೆ.10 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಕಳೆದ ವರ್ಷ ನೆರಿಯಾ ಗ್ರಾಮದಲ್ಲಿ ಕೋವಿಡ್ ನೊಂದಿಗೆ ಡೆಂಗ್ಯೂ ಆತಂಕಕಾರಿಯಾಗಿ ಪರಿಣಮಿಸಿತ್ತು.

ಶಾಸಕರ ಸಭೆ; ಜಡ್ಕಲ್, ಮುದೂರು ಭಾಗದಲ್ಲಿ ನಿರಂತರವಾಗಿ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್ ಜೊತೆ ಶಾಸಕ ಸುಕುಮಾರ್ ಶೆಟ್ಟಿ ಸಭೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈ ಭಾಗದ ಪ್ರತಿ ಮನೆಗಳಿಗೂ ಭೇಟಿ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೈರ್ಮಲ್ಯಕ್ಕೆ ಆದ್ಯತೆ ನೀಡಲು ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.

Dengue Case Raise 10 Days Holiday For School At Dakshina Kannada And Udupi Districts

ದಕ್ಷಿಣ ಕನ್ನಡ ಜಿಲ್ಲೆ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 55 ಖಚಿತ ಪ್ರಕರಣಗಳು ದಾಖಲಾಗಿದೆ. ಮಂಗಳೂರು ಗ್ರಾಮಾಂತರ-11, ಮಂಗಳೂರು ಪಟ್ಟಣ-23, ಬಂಟ್ವಾಳ-4, ಪುತ್ತೂರು-2, ಸುಳ್ಯ-5, ಬೆಳ್ತಂಗಡಿ-10 ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯಲ್ಲೂ 152 ಖಚಿತ ಪ್ರಕರಣಗಳು ದಾಖಲಾಗಿದೆ. ಮುದೂರು 105, ಕೊಲ್ಲೂರು 2, ಜಡ್ಕಲ್ 6 ಸೇರಿದಂತೆ ಉಡುಪಿಯ ಇತರೆಡೆ 39 ಪ್ರಕರಣಗಳು ದಾಖಲಾಗಿದೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಒಂದು ಚಮಚದಷ್ಟು ಶುದ್ಧ ನೀರು ಕೂಡ ವಾರಗಳ ಕಾಲ ಕಲಕದೆ ಇದ್ದಲ್ಲಿ ಸೊಳ್ಳೆಗಳ ಉತ್ಪತ್ತಿಯ ತಾಣವಾಗಬಹುದು.

ಹೂವಿನ ಕುಂಡಗಳಲ್ಲಿ ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿ; ಪೇಟೆಗಳಲ್ಲಿ ತಾರಸಿ ತೋಟ ಸಹಿತ ಹೂವಿನ ಕುಂಡಗಳಲ್ಲಿ ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತದೆ. ಉಡುಪಿಯ ಕೊಲ್ಲೂರು ಆಸುಪಾಸು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ವ್ಯಾಪ್ತಿಯಲ್ಲಿ ಅಡಿಕೆ, ರಬ್ಬರ್ ತೋಟಗಳ ಹಾಳೆ, ರಬ್ಬರ್ ಸಂಗ್ರಹ ಗೆರಟೆಯಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿದೆ ಅಂತಾ ಆರೋಗ್ಯ ಇಲಾಖೆ ತಿಳಿಸಿದೆ.

ಹಿಂದೆ ಬಾವಿಯಿಂದ ನೀರನ್ನು ಸೇದುತ್ತಿದ್ದರು. ಪ್ರಸಕ್ತ ಮೋಟರ್ ಬಳಸಿ ನೀರೆತ್ತುವುದರಿಂದ ನೀರು ಕಲಕದ ಕಾರಣ ಅಲ್ಲೂ ಸೊಳ್ಳೆ ಉತ್ಪತ್ತಿ ಆಗುವ ಸಾಧ್ಯತೆ ಇದೆ. ಸೊಳ್ಳೆಯ ಮೊಟ್ಟೆಗಳನ್ನು ನಾಶಮಾಡುವ ಗಪ್ಪಿ ಮೀನುಗಳನ್ನು ಬಾವಿಗೆ ಬಿಟ್ಟಲ್ಲಿ ಪ್ರಯೋಜನವಾಗಲಿದೆ ಎಂಬ ಸಲಹೆಯನ್ನು ಆರೋಗ್ಯ ಇಲಾಖೆ ನೀಡಿದೆ.

English summary
Mangaluru: Dengue fever cases raised in Dakshina Kannada and Udupi district. 10 days of holiday announced for schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X