ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ ಎಸ್ಎಸ್ ಮುಖಂಡರ ಹತ್ಯೆಗೆ ಸಂಚು ಪ್ರಕರಣ: ಬಂಧಿತರು ಬಾಯ್ಬಿಟ್ಟ ರಹಸ್ಯ!

|
Google Oneindia Kannada News

ಮಂಗಳೂರು, ಜನವರಿ 22: ದಕ್ಷಿಣ ಕನ್ನಡ ಜಿಲ್ಲೆಯ ಆರ್ ಎಸ್ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ವಿಎಚ್ ಪಿ ಮುಖಂಡರನ್ನು ಟಾರ್ಗೆಟ್ ಮಾಡಲು ಅಪಘಾನಿಸ್ಥಾನದಲ್ಲಿ ಸಂಚು ರೂಪಿಸಲಾದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಅಂದರೆ ಹಿಂದೂ ಮುಖಂಡರ ಹತ್ಯೆಗಾಗಿ ದೂರದ ಅಪಘಾನಿಸ್ತಾನದಿಂದಲೇ ಭಾರೀ ಯೋಜನೆ ಸಿದ್ಧಗೊಂಡಿದೆ.

ದೆಹಲಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರ್ ಎಸ್ಎಸ್ ಹಾಗೂ ವಿಎಚ್ ಪಿ ಮುಖಂಡರನ್ನು ಹತ್ಯೆ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ನಡೆಸುವ ದುಷ್ಕರ್ಮಿಗಳ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.

ಕರಾವಳಿಯ ಸಂಘ‌ ಪರಿವಾರದ ಮುಖಂಡರ ಮೇಲೆ ದಾಳಿಗೆ ಸ್ಕೆಚ್?ಕರಾವಳಿಯ ಸಂಘ‌ ಪರಿವಾರದ ಮುಖಂಡರ ಮೇಲೆ ದಾಳಿಗೆ ಸ್ಕೆಚ್?

ಈ ಸಂಚಿನ ಹಿಂದೆ ಭೂಗತ ದೊರೆ ದಾವೂದ್ ಇಬ್ರಾಹಿಂನ, ಡಿ ಕಂಪೆನಿ ಇರುವುದು ಬಹಿರಂಗಗೊಂಡಿದೆ. ದೇಶದ ಗುಪ್ತಚರ ಸಂಸ್ಥೆ 'ರಾ' ಅಧಿಕಾರಿಗಳ ಮಾಹಿತಿ ಮೇರೆಗೆ ಕಾರ್ಯಾಚರಣೆ ಅರಂಭಿಸಿದ್ದ ದೆಹಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ದೆಹಲಿ ಪೊಲೀಸರು ಇತ್ತೀಚೆಗೆ ಕಾಸರಗೋಡಿನಲ್ಲಿ ಸಿನಿಮೀಯ ರೀತಿಯಲ್ಲಿ ಗುಪ್ತ ಕಾರ್ಯಾಚರಣೆ ನಡೆಸಿ ಡಾನ್ ಅಲಿಯಾಸ್ ತಸ್ಲೀಮ್ ಎಂಬಾತನನ್ನು ಬಂಧಿಸಿ ದೆಹಲಿಗೆ ಕೆರೆದುಕೊಂಡು ಹೋಗಿದ್ದರು. ತಸ್ಲೀಮ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಬಾಯ್ಬಿಟ್ಟ ಸ್ಫೋಟಕ ಮಾಹಿತಿ ಅನ್ವಯ ಮತ್ತಿಬ್ಬರನ್ನು ಕಾರ್ಯಾಚರಣೆ ನಡೆಸಿ ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

 2 ಕೋಟಿ ರೂಪಾಯಿ ಸುಪಾರಿ

2 ಕೋಟಿ ರೂಪಾಯಿ ಸುಪಾರಿ

ದೆಹಲಿಯಲ್ಲಿ ಬಂಧಿತರಾದವರನ್ನು ಅಪಘಾನಿಸ್ಥಾನ ಮೂಲದ ವಾಲಿ ಮಹಮ್ಮದ್ ಸೈಫಿ ಹಾಗೂ ದೆಹಲಿಯ ಶೇಖ್ ರಿಯಾಜುದ್ದೀನ್ ಎಂದು ಗುರುತಿಸಲಾಗಿದೆ. ಸದ್ಯ ದೆಹಲಿ ಪೊಲೀಸರ ವಿಶೇಷದಳ ಈ ಮೂವರ ಇನ್ನಷ್ಟು ವಿಚಾರಣೆ ನಡೆಸಿದ್ದು, ಬಂಧಿತರಿಂದ 2 ಪಿಸ್ತೂಲ್, 6 ಲೋಡೆಡ್ ಗನ್ ಮತ್ತು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಮಾಹಿತಿಯ ಪ್ರಕಾರ ಈ ಮೂವರು ಬರೋಬ್ಬರಿ 2 ಕೋಟಿ ರೂಪಾಯಿ ಸುಪಾರಿ ಪಡೆದಿದ್ದರು ಎನ್ನಲಾಗಿದೆ.

 ಕಾಸರಗೋಡಿನ ತಸ್ಲೀಮ್ ನೆರವು

ಕಾಸರಗೋಡಿನ ತಸ್ಲೀಮ್ ನೆರವು

ಬಂಧಿತ ಅಪಘಾನಿಸ್ಥಾನದ ನಿವಾಸಿ ವಾಲಿ ಮಹಮ್ಮದ್ ಸೈಫಿ ಈ ಇಡೀ ಹತ್ಯೆ ಸಂಚಿನ ಯೋಜನೆ ರೂಪಿಸಿದ್ದ ಎಂದು ಹೇಳಲಾಗಿದೆ. ಈತನಿಗೆ ದೆಹಲಿಯ ಶೇಖ್ ರಿಯಾಜುದ್ದೀನ್ ಮತ್ತು ಕಾಸರಗೋಡಿನ ತಸ್ಲೀಮ್ ನೆರವು ನೀಡಿದ್ದರು ಎಂಬ ಮಾಹಿತಿ ತನಿಖೆಯಿಂದ ಬಹಿರಂಗವಾಗಿದೆ.

ಮಾರಕಾಸ್ತ್ರ ತಯಾರಿಕೆಗೆ ಆರೆಸ್ಸೆಸ್ ನಿಂದ ತರಬೇತಿ: ಮ.ಪ್ರ.ಸಚಿವಮಾರಕಾಸ್ತ್ರ ತಯಾರಿಕೆಗೆ ಆರೆಸ್ಸೆಸ್ ನಿಂದ ತರಬೇತಿ: ಮ.ಪ್ರ.ಸಚಿವ

 ಹತ್ಯೆ ಯೋಜನೆ ಬೆಳಕಿಗೆ

ಹತ್ಯೆ ಯೋಜನೆ ಬೆಳಕಿಗೆ

ಆರ್ ಎಸ್ ಎಸ್ ಹಾಗು ವಿ ಎಚ್ ಪಿ ಮುಖಂಡರ ಹತ್ಯೆ ನಡೆಸಲು ಪಾಕಿಸ್ಥಾನದ ಭೂಗತ ಪಾತಕಿ ಗುಲಾಮ್ ರಸೂಲ್ 'ಡಿ' ಕಂಪೆನಿ ನೆರವು ಪಡೆದಿದ್ದು, ರಾ ಆಧಿಕಾರಿ ಗಳು ಡಿಕೋಡ್ ಮಾಡಿದ ಫೋನ್ ಸಂಭಾಷಣೆಯಲ್ಲಿ ಹತ್ಯೆ ಯೋಜನೆ ಬೆಳಕಿಗೆ ಬಂದಿತ್ತು ಎನ್ನಲಾಗಿದೆ.

 ಕಾಸರಗೋಡಿನಲ್ಲಿ ತಸ್ಲೀಮ್ ಬಂಧನ

ಕಾಸರಗೋಡಿನಲ್ಲಿ ತಸ್ಲೀಮ್ ಬಂಧನ

ಹತ್ಯೆ ನಡೆಸಲೆಂದು ಕಾಬೂಲ್ ನಿಂದ ವಾಲಿ ಮಹಮ್ಮದ್ ದೆಹಲಿಗೆ ಬಂದಿದ್ದ. ಆತ ದೆಹಲಿಯಲ್ಲಿ ಬಂಧಿತ ಮತ್ತೋಬ್ಬ ಅರೋಪಿ ರಿಯಾಜುದ್ದೀನ್ ಜೊತೆ ಸೇರಿಕೊಂಡಿದ್ದ. ಆದರೆ ಈ ಸಂಚನ್ನು ದೆಹಲಿ ಪೊಲೀಸರು ವಿಫಲಗೊಳಿಸಿ ಒಂದೇ ದಿನ ದೆಹಲಿ ಯಲ್ಲಿ ವಾಲಿ ಮಹಮ್ಮದ್ ಸೈಫಿ, ರಿಯಾಜುದ್ದೀನ್ ಹಾಗು ಕೇರಳದ ಕಾರಸಗೋಡಿನಲ್ಲಿ ತಸ್ಲೀಮ್ ನನ್ನು ಬಂಧಿಸಿದ್ದರು.

 ಮತ್ತೆ ಕಾಸರಗೋಡಿನ 11 ಮಂದಿ ಕಾಣೆ, ಉಗ್ರರ ಜೊತೆ ಸೇರಿರುವ ಶಂಕೆ ಮತ್ತೆ ಕಾಸರಗೋಡಿನ 11 ಮಂದಿ ಕಾಣೆ, ಉಗ್ರರ ಜೊತೆ ಸೇರಿರುವ ಶಂಕೆ

English summary
Delhi police arrested Afghan based Sharp Shooter and other two accused in connection to murder RSS leader Dr Kalladaka Parbhakar Bhat and VHP leader in Dakshina Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X