ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರದ ಯುವಕನಿಗೆ ನಿಫಾ ವೈರಸ್ ಇಲ್ಲ-ಇರೋದು ಹೆದರಿಕೆ ಅಷ್ಟೇ-ದ.ಕ ಜಿಲ್ಲಾಧಿಕಾರಿ ಸ್ಪಷ್ಟನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಕನೋರ್ವನಿಗೆ ನಿಫಾ ವೈರಸ್ ಅಂಟಿಕೊಂಡಿರುವ ಬಗ್ಗೆ ಉಂಟಾಗಿದ್ದ ಆತಂಕದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಯುವಕನಿಗೆ ನಿಫಾ ವೈರಸ್ ಲಕ್ಷಣ ಇಲ್ಲ. ನಿಫಾ ಸೋಂಕು ತಗುಲಿದೆ ಅಂತಾ ಯುವಕ ಹೆದರಿಕೊಂಡಿರುವ ಕಾರಣದಿಂದ ಅಷ್ಟೇ ಆತಂಕಕೊಳಗಾಗಿದ್ದಾನೆ ಅಂತಾ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸ್ಪಷ್ಟಪಡಿಸಿದ್ದಾರೆ..

ಕಾರವಾರ ಮೂಲದ ಯುವಕನ ಸ್ಯಾಂಪಲ್ ಟೆಸ್ಟ್‌ಗೆ ಕಳಿಸಲಾಗಿದೆ. ಈ ಯುವಕ ಗೋವಾದಲ್ಲಿ ಆರ್‌ಟಿಪಿಸಿಆರ್ ಟೆಸ್ಟ್ ಕಿಟ್ ತಯಾರಿಕಾ ಲ್ಯಾಬ್‌ನಲ್ಲಿ ಕೆಲಸ ಮಾಡ್ತಿದ್ದ. ಅಲ್ಲಿ ನಿಫಾಗೆ ಸಂಬಂಧಿಸಿದ ಟೆಸ್ಟಿಂಗ್ ಇಕ್ವಿಪ್‌ಮೆಂಟ್ ಕೂಡ ತಯಾರಿ ಮಾಡಲಾಗುತ್ತಿತ್ತು. ಅಲ್ಲಿಂದ ರಜೆಯಲ್ಲಿ ಕಾರವಾರಕ್ಕೆ ಬಂದ ಮೇಲೆ ಆತನಿಗೆ ಜ್ವರ ಕಾಣಿಸಿಕೊಂಡಿದೆ. ಆದರೆ ಆತನಿಗೆ ಯಾವುದೇ ನಿಫಾ ಲಕ್ಷಣಗಳಿರಲಿಲ್ಲ, ಆತ ಸ್ಟೇಬಲ್ ಆಗಿದ್ದಾನೆ. ಆದ್ರೆ ಆತನೇ ಗೂಗಲ್‌ನಲ್ಲಿ ಹುಡುಕಾಡಿ ಸಣ್ಣ ಜ್ವರವನ್ನು ನಿಫಾ ಅಂತ ಆತಂಕಕ್ಕೆ ಒಳಗಾಗಿದ್ದಾನೆ ಎಂದು ವಿವರಿಸಿದರು.

ಗೋವಾದಿಂದ ಆಗಮಿಸಿದ ಮಂಗಳೂರಿನ ವ್ಯಕ್ತಿಗೆ ಅಂಟಿದೆಯಾ ನಿಫಾ ವೈರಸ್? ಗೋವಾದಿಂದ ಆಗಮಿಸಿದ ಮಂಗಳೂರಿನ ವ್ಯಕ್ತಿಗೆ ಅಂಟಿದೆಯಾ ನಿಫಾ ವೈರಸ್?

ಆತನ ಲ್ಯಾಬ್ ಸಂಪರ್ಕಿಸಿದಾಗಲೂ ಆತನ ಟ್ರಾವೆಲ್ ಹಿಸ್ಟರಿ ಅಥವಾ ಯಾವುದರಲ್ಲೂ ಆತನಿಗೆ ಸಂಪರ್ಕ ಇಲ್ಲ. ಆದರೆ ಆತನೇ ಸುಮ್ಮನೆ ಆತಂಕಕ್ಕೆ ಒಳಗಾಗಿದ್ದು, ನಮ್ಮಲ್ಲಿ ದಾಖಲಾದ ಬಳಿಕವೂ ಆತಂಕ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಅವನ ಆತಂಕದ ಹಿನ್ನೆಲೆಯಲ್ಲಿ ನಾವು ನಿಫಾ ಟೆಸ್ಟ್ ಗೆ ಕಳುಹಿಸಿದ್ದೇವೆ. ಕಳೆದ ಶನಿವಾರ ಸಂಜೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈತನನ್ನು ಶಂಕಿತ ಅಂತಾನೂ ಹೇಳಬೇಡಿ, ಆತನ ಆತಂಕದ ಹಿನ್ನೆಲೆ ಟೆಸ್ಟ್‌ಗೆ ಕಳುಹಿಸಲಾಗಿದೆ ಅಷ್ಟೇ. ಆತನಿಗೆ ನಿಫಾ ಆಗಲೀ, ಯಾವುದೇ ಬೇರೆ ರೋಗದ ಲಕ್ಷಣ ಕೂಡ ಇಲ್ಲ. ಆದ್ರೆ ಲ್ಯಾಬ್‌ನಲ್ಲಿ ಕೆಲಸ ಮಾಡೋ ಕಾರಣ ಆತನಿಗೆ ಆತಂಕ ಹೆಚ್ಚಾಗಿದೆ.

Mangaluru: DC Dr K V Rajendra clarification on Karwar patient Nipah virus scare

ಕಾರವಾರ ಆಸ್ಪತ್ರೆಗೆ ಹೋಗಿ ನಂತರ ಮಣಿಪಾಲ ಆಸ್ಪತ್ರೆಗೆ ತೆರಳಿ ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ಬಂದಿದ್ದಾರೆ. ಮಂಗಳೂರು ಆಸ್ಪತ್ರೆಗೆ ದಾಖಲಾದ ಬಳಿಕ ಜ್ವರ, ತಲೆನೋವು ಯಾವುದೂ ಆತನಿಗೆ ಇಲ್ಲ. ಸದ್ಯ ಆ ಯುವಕ ಆರೋಗ್ಯವಾಗಿದ್ದು, ಆತನ ಆತಂಕ ಕಡಿಮೆ ಮಾಡಲು ನಿಫಾ ಟೆಸ್ಟ್ ಗೆ ಕಳುಹಿಸಿದ್ದೇವೆ. ಇವತ್ತು ಅಥವಾ ನಾಳೆಯೊಳಗೆ ನಿಫಾ ಟೆಸ್ಟ್ ರಿಪೋರ್ಟ್ ಬರಲಿದೆ. ಕಾರವಾರಕ್ಕೆ ಬೈಕ್‌ನಲ್ಲಿ ಮಳೆಯಲ್ಲಿ ಬಂದಿದ್ದಾರೆ ಅಂತ ಗೊತ್ತಾಗಿದೆ. ಪುಣೆಯಿಂದ ರಿಪೋರ್ಟ್ ಕೂಡ ಬೇಗ ತರಿಸುವ ವ್ಯವಸ್ಥೆ ಆಗಿದೆ. ಅವನ ಮನೆಯವರನ್ನು ಐಸೋಲೇಶನ್‌ನಲ್ಲಿ ಇಡಲಾಗಿದೆ. ಅವನು ಸಂಪರ್ಕ ಮಾಡಿದವರನ್ನು ಪತ್ತೆ ಹಚ್ಚಲಾಗಿದೆ. ಉಡುಪಿ ಮತ್ತು ಕಾರವಾರ ಜಿಲ್ಲಾಡಳಿತಕ್ಕೆ ಅಲರ್ಟ್ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸ್ಪಷ್ಟಪಡಿಸಿದ್ದಾರೆ.

Mangaluru: DC Dr K V Rajendra clarification on Karwar patient Nipah virus scare

ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ:
ಯುವಕ ಸುಮಾರು 25 ವರ್ಷ ವಯಸ್ಸಿನವನಾಗಿದ್ದು, ಗೋವಾದಿಂದ ಗಣಪತಿ ಹಬ್ಬದ ಪ್ರಯುಕ್ತ ಕಾರವಾರದ ಮನೆಗೆ ಬೈಕ್‌ನಲ್ಲಿ‌ ಬಂದಿದ್ದ.ಈ ವೇಳೆ ಮಳೆಗೆ ನೆನೆದಿದ್ದ. ಆ ದಿನ ರಾತ್ರಿ ಯುವಕನಿಗೆ ಜ್ಚರದ ಲಕ್ಷಣ ಕಂಡುಬಂದಿದೆ. ರಾತ್ರಿ ತಲೆನೋವು, ಶೀತ, ಜ್ವರ ಕಂಡುಬಂದಿದೆ. ರಾತ್ರಿ ಜ್ವರ ಬಂದ ಕಾರಣ ತನಗೂ ನಿಫಾ ಬಂದಿದೆ ಅಂತಾ ಆತಂಕಗೊಂಡು ಕಾರವಾರ ಆಸ್ಪತ್ರೆಗೆ ಬಂದಿದ್ದಾನೆ. ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಬಳಿಕ ವೆನ್ಲಾಕ್ ಆಸ್ಪತ್ರೆಗೆ ತಂದು ಪ್ರತ್ಯೇಕವಾದ ಕೋಣೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕ ವೆನ್ಲಾಕ್ ಆಸ್ಪತ್ರೆಗೆ ದಾಖಲಾದ ಬಳಿಕ ಜ್ವರ ಅಥವಾ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ದೇಹದ ಪರೀಕ್ಷೆ ಮಾಡಿದ ಸಂಧರ್ಭದಲ್ಲೂ ಯಾವುದೇ ತೊಂದರೆಗಳಿಲ್ಲ ಅಂತಾ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Recommended Video

ವಿರಾಟ್ ಕೊಹ್ಲಿ ಬದಲಿಗೆ ಹೊಸ ನಾಯಕನಾಗಿ ರೋಹಿತ್ ಶರ್ಮಾ | Oneindia Kannada

English summary
DC Dr K V Rajendra has given clarification on Karwar patient whose samples sent for Nipah virus test but, need not to scare as results or not positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X