ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿಯಲ್ಲೂ ಖರ್ಜೂರ ಬೆಳೆದ ಸಾದಿಕ್

|
Google Oneindia Kannada News

ಮಂಗಳೂರು ಜುಲೈ 5: ಅರಬ್ ದೇಶದ ಮರುಭೂಮಿ ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ಖರ್ಜೂರದ ಮರಗಳ ಬಗ್ಗೆ ಕೇಳಿದ್ದೇವೆ. ಉಷ್ಣವಲಯ ಆದ ಕಾರಣ ಅಲ್ಲಿ ಸ್ವಾಭಾವಿಕವಾಗಿ ಖರ್ಜೂರದ ಮರಗಳು ಬೆಳೆಯುತ್ತವೆ. ಆದರೆ ನಮ್ಮ ಕರಾವಳಿಯಲ್ಲೂ ಖರ್ಜೂರ ಬೆಳೆಯುತ್ತದೆ ಎಂದರೆ? ಹೌದು. ಇದನ್ನು ನಂಬಲೇಬೇಕು. ಮಂಗಳೂರು ಹೊರವಲಯದ ಕಾಪು ಎಂಬಲ್ಲಿ ಖರ್ಜೂರದ ಮರ ಬೆಳೆಸಲಾಗಿದ್ದು, ಆ ಮರ ಈಗ ಫಲ ಕೊಡಲಾರಂಭಿಸಿದೆ.

ಮರುಭೂಮಿಯಲ್ಲಷ್ಟೇ ಹೆಚ್ಚಾಗಿ ಬೆಳೆಯುವ ಖರ್ಜೂರಗಳನ್ನು ಪ್ರಗತಿಪರ ಕೃಷಿಕ ಮಲ್ಲಾರು ಉದ್ಯಮಿ ಮಹಮ್ಮದ್‌ ಸಾದಿಕ್ ದೀನಾರ್ ಇಲ್ಲೂ ಬೆಳೆದು ತೋರಿಸಿದ್ದಾರೆ.

 ಸಾಮೂಹಿಕ ಅತ್ಯಾಚಾರದ ವಿಡಿಯೋ ವೈರಲ್ ಮಾಡಿದ 8 ಜನರ ಬಂಧನ ಸಾಮೂಹಿಕ ಅತ್ಯಾಚಾರದ ವಿಡಿಯೋ ವೈರಲ್ ಮಾಡಿದ 8 ಜನರ ಬಂಧನ

ಮಲ್ಲಾರು ಗ್ರಾಮದ ಕೊಂಬ ಗುಡ್ಡೆಯ ಸಾದಿಕ್ ತಮ್ಮ ಮನೆ ಮುಂದೆ ಮೂರು ಖರ್ಜೂರದ ಗಿಡಗಳನ್ನು ಬೆಳೆಸಿದ್ದಾರೆ. ಎರಡು ಗಿಡಗಳು ಈಗಾಗಲೇ ಫ‌ಲ ನೀಡುತ್ತಿವೆ. ಇದೇ ಗ್ರಾಮದ ಇನ್ನೆರಡು ಕುಟುಂಬಗಳೂ ಖರ್ಜೂರ ಬೆಳೆಗೆ ಆಸಕ್ತಿ ತೋರಿವೆ. ಕಾಪುವಿನ ಉದ್ಯಮಿಗಳಾದ ನಜೀರ್ ಅಹಮದ್‌ 3 ಗಿಡಗಳನ್ನು ನೆಟ್ಟಿದ್ದರೆ, ಮತ್ತೋರ್ವ ಉದ್ಯಮಿ ಮಹಮ್ಮದ್‌ ಅಸ್ಲಂ ಖಾಝಿ ಅವರು 8 ಗಿಡಗಳನ್ನು ನೆಟ್ಟಿದ್ದಾರೆ.

Date palm tree grown in Kapu

10 ವರ್ಷದ ಗಿಡವನ್ನು 10 ಸಾವಿರ ರೂಪಾಯಿ ಕೊಟ್ಟು ತರಿಸಿದ್ದರು. ಈ ಗಿಡಗಳು ನೆಟ್ಟ ವರ್ಷದೊಳಗೆ ಫಲ ನೀಡಿರುವುದು ವಿಶೇಷ. ಸುಮಾರು 15ರಿಂದ 20 ಕೆಜಿ ಇಳುವರಿಯು ಪ್ರಥಮ ವರ್ಷದಲ್ಲೇ ದೊರೆತಿದೆ. ಆದ ಕಾರಣ ಸಾದಿಕ್ ತಮ್ಮ ಸುತ್ತಮುತ್ತಲಿನ ಮನೆಗಳಿಗೆ ಅವುಗಳನ್ನು ಹಂಚುತ್ತಿದ್ದಾರೆ.

ರಂಜಾನ್: ಮೈಸೂರಿನಲ್ಲಿ ಬಿಸಿ ಬಿಸಿ ಸಮೋಸ, ಖರ್ಜೂರಕ್ಕೆ ಭಾರೀ ಬೇಡಿಕೆರಂಜಾನ್: ಮೈಸೂರಿನಲ್ಲಿ ಬಿಸಿ ಬಿಸಿ ಸಮೋಸ, ಖರ್ಜೂರಕ್ಕೆ ಭಾರೀ ಬೇಡಿಕೆ

ಖರ್ಜೂರದ ಮರ ಏಷ್ಯಾ ಮತ್ತು ಆಫ್ರಿಕಾದ ಉಷ್ಣ ವಲಯಗಳಲ್ಲೆಲ್ಲ ಸ್ವಾಭಾವಿಕವಾಗಿ ಬೆಳೆಯುವುದಲ್ಲದೆ ಬೇಸಾಯದಲ್ಲೂ ಇದೆ. ಮೂಲತಃ ಎಲ್ಲಿಯದೆಂದು ಖಚಿತವಾಗಿ ತಿಳಿಯದಿದ್ದರೂ ಪರ್ಷಿಯದ ಖಾರಿ ಇಲ್ಲವೆ ಪಶ್ಚಿಮ ಪಾಕಿಸ್ತಾನ ಇದರ ಉಗಮಸ್ಥಾನವೆಂದು ನಂಬಲಾಗಿದೆ. ಅರಬ್ ದೇಶಗಳ ಮರುಭೂಮಿ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಖರ್ಜೂರದ ಮರವನ್ನು ಸಹಸ್ರಾರು ವರ್ಷಗಳ ಹಿಂದೆಯೇ ಆ ದೇಶಗಳಲ್ಲಿ ವ್ಯಾಪಕವಾಗಿ ರೂಢಿಸಲಾಯಿತು. ಅಲ್ಲಿಂದ ಕಾಲಕ್ರಮೇಣ ಸ್ಪೇನಿಗೂ ನೈಲ್ ನದಿ ಕಣಿವೆಯ ಒಣ ಪ್ರದೇಶಗಳಿಗೂ ಕಾಲಿಟ್ಟಿತು. ಎರಡು-ಮೂರು ಶತಮಾನಗಳ ಹಿಂದೆ ಸ್ಪೇನಿನಿಂದ ಅಮೆರಿಕಕ್ಕೆ ಇದನ್ನು ತರಲಾಯಿತು. ಈಗ ಅಮೆರಿಕದ ಉಷ್ಣವಲಯದ ಒಣ ಪ್ರದೇಶಗಳಲ್ಲಿ ಇದರ ಬೇಸಾಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.

English summary
Usually date palm trees grow only in Middle east. But Sadiq Of Kapu grown date palm tree in his compound.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X