• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ಸ್ ಮಾರಾಟ: ಖ್ಯಾತ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ

|

ಮಂಗಳೂರು, ಸೆಪ್ಟೆಂಬರ್ 19: ಮಾದಕ ವಸ್ತುಗಳ ಮಾರಾಟ ಆರೋಪದ ಮೇಲೆ ಪ್ರಸಿದ್ಧ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಸಿದ್ಧ ಡ್ಯಾನ್ಸರ್ ಕಿಶೋರ್ ಅಮನ್ ಅಲಿಯಾಸ್ ಕಿಶೋರ್ ಶೆಟ್ಟಿಯನ್ನು ಸೆಪ್ಟೆಂಬರ್ 19 ರ ಶನಿವಾರ ಮಂಗಳೂರು ನಗರ ಕ್ರೈಂ ಬ್ರ್ಯಾಂಚ್ ಪೊಲೀಸರು (ಸಿಸಿಬಿ) ಬಂಧಿಸಿದ್ದಾರೆ. ಆತ ಮಾದಕ ವಸ್ತು ಸಾಗಾಟ ನಡೆಸಿದ್ದನೆಂದು ವರದಿಯಾಗಿದೆ.

ಡ್ರಗ್ಸ್ ಪ್ರಕರಣ: ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್

ಕಿಶೋರ್ ಬಾಲಿವುಡ್ ಚಿತ್ರ 'ಎಬಿಸಿಡಿ' ಯಲ್ಲಿ ನಟಿಸಿದ್ದರು. ಅಲ್ಲದೆ ಜೀ ಟಿವಿಯ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಟೆಲಿವಿಷನ್ ರಿಯಾಲಿಟಿ ಡ್ಯಾನ್ಸ್ ಸ್ಪರ್ಧೆಯ ಸೀಸನ್ 2 ರಲ್ಲಿಯೂ ಭಾಗವಹಿಸಿದ್ದ ಅವರು ಅಗ್ರ ಎಂಟರ ಘಟ್ತ ತಲುಪಿದ್ದರು.

ಎಂಡಿಎಂ ಮಾತ್ರೆಗಳು ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡ್ರಗ್ಸ್ ಪತ್ತೆಗೆ ಇನ್ನಷ್ಟು ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದರು. ಇದೀಗ ಪೊಲೀಸರು ರಸ್ತೆ, ಹಡಗು, ವಿಮಾನ ಹಾಗೂ ರೈಲುಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಿದ್ದಾರೆ.

ಮಾದಕವಸ್ತುಜಾಲ ಬೇಧಿಸಲು ರಾಜ್ಯಾದ್ಯಂತ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಇಂದು ಈ ಡ್ಯಾನ್ಸರ್ ಬಂಧನವಾಗಿದೆ. ಇತ್ತ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು ಇಂದು ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ಬುಲಾವ್ ನೀಡಿದೆ.

English summary
Kishore Aman alias Kishore Shetty, a well-known dancer, was arrested here on Saturday September 19 by the city crime branch police (CCB).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X