ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಡಿನ ಮರಿ ರಕ್ಷಣೆಗೆ ಹೋಗಿ ಕಾಲು ಕಳೆದುಕೊಂಡ ಯುವಕ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 29; ಆ ಆಡು ಮರಿಯ ಕಾಲು ರೈಲು ಹಳಿಯಲ್ಲಿ ಸಿಲುಕಿಹಾಕಿಕೊಂಡಿತ್ತು. ಸತ್ತುಹೋದರೆ ಆಡಿನ ಮರಿಯಲ್ವಾ? ಅಂತಾ ಜನ ಆಡಿನ ನರಳಾಟ ನೋಡಿಕೊಂಡೇ ನಿಂತಿದ್ದರು. ಅಷ್ಟರಲ್ಲಿ ರೈಲು ಕೂಡಾ ಆ ಹಳಿಯಲ್ಲೇ ಆಗಮಿಸಿತು.

ರೈಲು ಇನ್ನೇನು ಆಡಿನ ಮರಿಗೆ ಡಿಕ್ಕಿಯಾಗಿ ಛಿಧ್ರ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಅಲ್ಲಿಗೆ ಬಂದ ಯುವಕ ಸಿನಿಮೀಯ ರೀತಿಯಲ್ಲಿ ಆಡಿನ ಮರಿಯನ್ನು ರಕ್ಷಣೆ ಮಾಡಿದ. ಆದರೆ ವಿಧಿ ಮಾತ್ರ ಆತನ ಬಾಳಲ್ಲಿ ದ್ರೋಹ ಮಾಡಿತ್ತು. ಆಡಿನ ಮರಿಯನ್ನು ಹಿಡಿದು ರೈಲ್ವೇ ಹಳಿಯಿಂದ ಹೊರ ಹೋಗುತ್ತಿದ್ದಾಗಲೇ ರಭಸದಿಂದ ಬಂದ ರೈಲು ಯುವಕನ ಕಾಲಿನ ಮೇಲೆಯೇ ಹರಿದಿದೆ. ಎರಡೂ ಕಾಲು ಛಿಧ್ರ ಛಿಧ್ರವಾಗಿದೆ.

ಮಂಗಳೂರು: ಕೊರೊನಾ ಸೋಂಕಿಗೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣುಮಂಗಳೂರು: ಕೊರೊನಾ ಸೋಂಕಿಗೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು

ಈ ದುರಂತಮಯ ಘಟನೆ ನಡೆದಿರೋದು ಮಂಗಳೂರು ನಗರ ಹೊರವಲಯದ ಜೋಕಟ್ಟೆ ಎಂಬ ಪ್ರದೇಶದಲ್ಲಿ. ಜೋಕಟ್ಟೆ ನಿವಾಸಿ, ಖಾಸಗಿ ಬಸ್‌ನಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದ ಚೇತನ್ ಎಂಬ ಯುವಕ ಕಾಲು ಕಳೆದುಕೊಂಡ ನೃತದೃಷ್ಟ.

ಹೊರ ಜಿಲ್ಲೆಯ ಪೊಲೀಸರಿಗೆ ತುಳು ಕಲಿಸಿದ ಮಂಗಳೂರು ಪೊಲೀಸ್ ಆಯುಕ್ತಹೊರ ಜಿಲ್ಲೆಯ ಪೊಲೀಸರಿಗೆ ತುಳು ಕಲಿಸಿದ ಮಂಗಳೂರು ಪೊಲೀಸ್ ಆಯುಕ್ತ

Dakshina Kannada Youth Lost Leg Who Went To Rescue Goat

ಚೇತನ್ ಮನೆ ರೈಲು ಹಳಿಯ ಮತ್ತೊಂದು ಭಾಗದಲ್ಲಿ ಇರುವುದರಿಂದ ಪ್ರತಿದಿನ ಹಳಿ ದಾಟಿಯೇ ಮುಖ್ಯ ರಸ್ತೆಯನ್ನು ಸೇರಬೇಕಿದೆ. ಆಗಸ್ಟ್ 28ರ ಬೆಳಗ್ಗೆ ಮನೆಯಿಂದ ಹೊರಟ ಚೇತನ್ ಹಳಿಯ ಬಳಿ ಬರುವಾಗ ಒಂದು ಪುಟಾಣಿ ಆಡು ಮರಿ ಹಳಿಯಲ್ಲಿ ಸಿಲುಕಿ ಹಾಕಿರುವುದು ನೋಡಿದ್ದಾನೆ. ಜನರೆಲ್ಲರೂ ಆಡಿನ ಮರಿಯನ್ನು ಕಂಡರೂ ತಾವಾಯಿತು ತಮ್ಮ ಕೆಲಸವಾಯಿತು ಅಂತಾ ಹೋಗುತ್ತಿದ್ದರು. ಆಡು ಮರಿಯೂ ಹಳಿಯಿಂದ ತನ್ನ ಕಾಲನ್ನು ಬಿಡಿಸಿಕೊಳ್ಳಲು ಒದ್ದಾಡುತ್ತಿತ್ತು.

ನಿಜಕ್ಕೂ ಮಂಗಳೂರು ಮುಳುಗುತ್ತಾ?; ಹಿರಿಯ ವಿಜ್ಞಾನಿ ಹೇಳಿದ್ದೇನು? ನಿಜಕ್ಕೂ ಮಂಗಳೂರು ಮುಳುಗುತ್ತಾ?; ಹಿರಿಯ ವಿಜ್ಞಾನಿ ಹೇಳಿದ್ದೇನು?

ಅಷ್ಟರಲ್ಲಿ ಅದೇ ಹಳಿಯಲ್ಲಿ ವೇಗವಾಗಿ ರೈಲು ಬಂದಿದೆ. ಕೂಡಲೇ ಆಡಿನ ಸಹಾಯಕ್ಕೆ ಧುಮುಕಿದ ಚೇತನ್ ಆಡು ಮರಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ದುರಾದೃಷ್ಟ ಆಡಿನ ಮರಿಯನ್ನು ಹಿಡಿದು ಹಳಿಯಿಂದ ಹೊರಹೋಗಬೇಕೆನ್ನುವಷ್ಟರಲ್ಲಿ, ರೈಲು ಕಾಲಿನ ಮೇಲೆಯೇ ಹರಿದಿದೆ. ಡಿಕ್ಕಿ ಯಾದ ರಭಸಕ್ಕೆ ಚೇತನ್ ಕಾಲುಗಳು ದೇಹದಿಂದ ಬೇರ್ಪಟ್ಟು ಛಿಧ್ರ ಛಿಧ್ರವಾಗಿದೆ.

ಚೇತನ್ ದುಡಿಮೆಯನ್ನೇ ಆಧರಿಸಿ ಜೀವನ ಮಾಡುತ್ತಿದ್ದ ಬಡ ಕುಟುಂಬಕ್ಕೆ ಸದ್ಯ ದಿಕ್ಕು ತೋಚದಂತಾಗಿದೆ. ಚೇತನ್ ಜೀವಕ್ಕೇನು ಅಪಾಯವಿಲ್ಲದಿದ್ದರೂ, ಶಾಶ್ವತವಾಗಿ ಕಾಲು ಕಳೆದುಕೊಳ್ಳಬೇಕಿದೆ. ಸದ್ಯ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೇತನ್ ಚಿಕಿತ್ಸೆಗೆ 18 ಲಕ್ಷ ರೂಪಾಯಿ ಖರ್ಚು ಆಗಲಿದೆ. ಮಗ ದುಡಿದಿದ್ದರಲ್ಲೇ ಊಟ ಮಾಡುತ್ತಿದ್ದ ಮನೆಯವರಿಗೆ ಈಗ ಮಗನ ಉಳಿಸಿಕೊಳ್ಳಲು 18 ಲಕ್ಷ ರೂಪಾಯಿ ಒಟ್ಟು ಮಾಡೋದೇ ಸವಾಲಿನ ಕೆಲಸವಾಗಿದೆ.

ಸದ್ಯ ಚೇತನ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಚೇತನ್ ಒಂದು ಕಾಲು ಉಳಿಸಿಕೊಳ್ಳಬಹುದು ಎಂಬ ಭರವಸೆ ನೀಡಿದ್ದಾರೆ. ಚೇತನ್‌ಗೆ ಈಗಾಗಲೇ 40 ಯುನಿಟ್ ರಕ್ತವನ್ನೂ ನೀಡಲಾಗಿದೆ. ಆದರೆ ಚಿಕಿತ್ಸೆಗೆ 18 ಲಕ್ಷ ರೂಪಾಯಿ ಬೇಕಾಗಿರೋದ್ರರಿಂದ ಮುಂದೆ ಹಣಕ್ಕಾಗಿ ಏನು ಮಾಡೋದು? ಎಂಬ ಚಿಂತೆ ಈಗ ಮನೆಯವರನ್ನು ಕಾಡಲಾರಂಭಿಸಿದೆ.‌

ಪರೋಪಕಾರಿ ಗುಣ ಹೊಂದಿದ್ದ ಚೇತನ್ ಸ್ಥಳೀಯವಾಗಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದ, ಹಿತ-ಮಿತವಾದ ಮಾತಿನಿಂದ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ. ಎಲ್ಲರಿಗೂ ಸಹಾಯ ಮಾಡುವ ಗುಣ ಹೊಂದಿದ್ದ ಚೇತನ್, ಈಗ ಒಂದು ಜೀವವನ್ನು ಉಳಿಸಲು ತನ್ನ ಜೀವವನ್ನೇ ಒತ್ತೆ ಇಟ್ಟು, ಕಾಲು ಕಳೆದುಕೊಂಡಿರೋದು ಮಾತ್ರ ದುರಂತವಾಗಿದೆ. ಸದ್ಯ ಚೇತನ್‌ ಸ್ನೇಹಿತರು ಮತ್ತು ಮನೆಯವರು ಚೇತನ್‌ನನ್ನು ಉಳಿಸಲು ದಾನಿಗಳ ಮೊರೆ ಹೋಗಿದ್ದಾರೆ.

English summary
Youth from Jokatte of Mangaluru lost his leg when he went to rescue goat which stuck in railway track.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X