ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಸರಗೋಡು-ಮಂಗಳೂರು ನಡುವಿನ ದಿನದ ಸಂಚಾರಕ್ಕೆ ಪಾಸ್ ಕಡ್ಡಾಯ

|
Google Oneindia Kannada News

ದಕ್ಷಿಣ ಕನ್ನಡ, ಜೂನ್ 03 : ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳದ ಕಾಸರಗೋಡು ಮತ್ತು ಜಿಲ್ಲೆಯ ನಡುವೆ ಸಂಚಾರ ನಡೆಸುವ ಜನರಿಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪ್ರತಿದಿನ ಸಂಚಾರ ನಡೆಸುವ ಜನರು ವಿಶೇಷ ಪಾಸುಗಳನ್ನು ಪಡೆಯಬೇಕಾಗುತ್ತದೆ.

ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಪ್ರತಿದಿನ ಸಂಚಾರ ನಡೆಸುವ ಉದ್ಯೋಗಿಗಳು/ವಿದ್ಯಾರ್ಥಿಗಳಿಗೆ ದಿನದ ಪಾಸ್‌ ವಿತರಣೆ ಮಾಡಲಾಗುತ್ತದೆ. ಈ ಪಾಸ್‌ಗಳ ಅವಧಿ ಜೂನ್ 30ರ ತನಕ ಇರುತ್ತದೆ" ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಯಲ್ಲಿ ಸಾಧಾರಣ ಮಳೆದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಯಲ್ಲಿ ಸಾಧಾರಣ ಮಳೆ

ದಿನದ ವಿಶೇಷ ಪಾಸು ಪಡೆಯಲು ಅರ್ಜಿ ಸಲ್ಲಿಸುವಾಗ ಭೇಟಿ ನೀಡುವ ಪ್ರದೇಶವನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಉದ್ಯೋಗ ಮಾಡುವವರು ಕಚೇರಿಯ ವಿಳಾಸ ನಮೂದಿಸಬೇಕು. ದಕ್ಷಿಣ ಕನ್ನಡದಲ್ಲಿ ವಾಸವಿರುವ ವಿಳಾಸವನ್ನು ನೀಡಬೇಕಿದೆ.

ಕೊರೊನಾ ಕಟ್ಟಿಹಾಕುವಲ್ಲಿ ದೇಶಕ್ಕೆ ಮಾದರಿಯಾದ ಕಾಸರಗೋಡು!ಕೊರೊನಾ ಕಟ್ಟಿಹಾಕುವಲ್ಲಿ ದೇಶಕ್ಕೆ ಮಾದರಿಯಾದ ಕಾಸರಗೋಡು!

Dakshina Kannada

ತಲಪ್ಪಾಡಿ ಚೆಕ್‌ ಪೋಸ್ಟ್‌ನಲ್ಲಿ ಪ್ರತಿದಿನ ಪಾಸು ಇರುವವರನ್ನು ಪರಿಶೀಲಿಸಿ ಒಳಗೆ ಬಿಡಲಾಗುತ್ತದೆ. ಒಂದು ವೇಳೆ ಪಾಸು ತೋರಿಸಲು ವಿಫಲವಾದರೆ ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಮಂಗಳೂರು-ಕಾಸರಗೋಡು ಗಡಿ ಹೆದ್ದಾರಿ ದಿಗ್ಬಂಧನ ತೆರವುಗೊಳಿಸಲು ಕೇರಳ ಹೈಕೋರ್ಟ್ ನಿರ್ದೇಶನ ಮಂಗಳೂರು-ಕಾಸರಗೋಡು ಗಡಿ ಹೆದ್ದಾರಿ ದಿಗ್ಬಂಧನ ತೆರವುಗೊಳಿಸಲು ಕೇರಳ ಹೈಕೋರ್ಟ್ ನಿರ್ದೇಶನ

ದಕ್ಷಿಣ ಕನ್ನಡಕ್ಕೆ ಬರುವ ಎಲ್ಲರನ್ನು ಚೆಕ್ ಪೋಸ್ಟ್‌ನಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತದೆ. ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ ಮಾತ್ರ ಒಳಗೆ ಬಿಡಲಾಗುತ್ತದೆ. ಕಾಸರಗೋಡು-ದಕ್ಷಿಣ ಕನ್ನಡ ನಡುವೆ ಪ್ರತಿದಿನ ಸಂಚಾರ ನಡೆಸುವವರಿಗೆ ಮಾತ್ರ ಪಾಸು ಇರುತ್ತದೆ. ಉಳಿದಂತೆ ಸಂಚಾರ ನಡೆಸುವವರಿಗೆ ಎಲ್ಲಾ ನಿಯಮ ಅನ್ವಯ ಆಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.

ಮತ್ತೊಂದು ಕಡೆ ಕೊಡಗು ಜಿಲ್ಲಾಡಳಿತ ಸಹ ಅಂತರರಾಜ್ಯಗಳ ನಡುವೆ ಪ್ರತಿದಿನ ಸಂಚಾರ ನಡೆಸುವ ಜನರಿಗಾಗಿ ಪಾಸು ನೀಡಲಿದೆ. ಉಳಿದಂತೆ ಅಂತರರಾಜ್ಯಗಳ ನಡುವೆ ಸಂಚಾರ ನಡೆಸುವ ಜನರು ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕಿದೆ.

ಪಾಸು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

English summary
Dakshina Kannada district administration will issue daily passes for working professionals and students who have to commute only a daily basis between district from Kasargod.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X