ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತರರಾಜ್ಯ ಸಂಚಾರಕ್ಕೆ ದಕ್ಷಿಣ ಕನ್ನಡ-ಕೇರಳ ಗಡಿ ಓಪನ್

|
Google Oneindia Kannada News

ಮಂಗಳೂರು, ಆಗಸ್ಟ್ 17 : ಅಂತರರಾಜ್ಯ ಸಂಚಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕರ್ನಾಟಕ-ಕೇರಳ ನಡುವಿನ ಗಡಿಯನ್ನು ತೆರೆದಿದೆ. ಪ್ರತಿದಿನ ಸಂಚಾರ ನಡೆಸುವ ಜನರು ತಿಂಗಳ ಪಾಸ್ ಪಡೆಯಬೇಕು ಎಂದು ಜಿಲ್ಲಾಡಳಿತ ಹೇಳಿದೆ.

ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಡುವೆ ಸಂಪರ್ಕ ಕಲ್ಪಿಸುವ ಎಲ್ಲಾ ಗಡಿಗಳನ್ನು ಜನರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕೋವಿಡ್ 19 ಸೋಂಕಿನ ಭೀತಿ ಹಿನ್ನಲೆಯಲ್ಲಿ ಗಡಿಯನ್ನು ಮುಚ್ಚಲಾಗಿತ್ತು.

ದಕ್ಷಿಣ ಕನ್ನಡ ಡಿಸಿ ವರ್ಗಾವಣೆ; ಕಾಂಗ್ರೆಸ್ ನಾಯಕರು ಗರಂ ದಕ್ಷಿಣ ಕನ್ನಡ ಡಿಸಿ ವರ್ಗಾವಣೆ; ಕಾಂಗ್ರೆಸ್ ನಾಯಕರು ಗರಂ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ. ವಿ. ರಾಜೇಂದ್ರ ಈ ಕುರಿತು ಮಾಹಿತಿ ನೀಡಿದ್ದಾರೆ. "ಎರಡೂ ರಾಜ್ಯಗಳ ನಡುವೆ ಪ್ರತಿದಿನ ಸಂಚಾರ ನಡೆಸುವ ಜನರು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ, ಪಟ್ಟಣ ಪಂಚಾಯಿತಿಯಿಂದ ತಿಂಗಳ ಪಾಸನ್ನು ಪಡೆಯಬೇಕು" ಎಂದು ಹೇಳಿದ್ದಾರೆ.

ತುಂಬಿ ಹರಿಯುತ್ತಿರುವ ಮೂಲೆಹೊಳೆ ಹಳ್ಳ; ಕೇರಳ-ಕರ್ನಾಟಕ ಸಂಚಾರ ಬಂದ್ತುಂಬಿ ಹರಿಯುತ್ತಿರುವ ಮೂಲೆಹೊಳೆ ಹಳ್ಳ; ಕೇರಳ-ಕರ್ನಾಟಕ ಸಂಚಾರ ಬಂದ್

Kerala Border

ಪ್ರತಿದಿನ ಸಂಚಾರ ನಡೆಸುವವರು ಗಡಿಯಲ್ಲಿನ ಚೆಕ್‌ಪೋಸ್ಟ್‌ನಲ್ಲಿ ವಿವರಗಳನ್ನು ದಾಖಲು ಮಾಡಬೇಕು. ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಗಾಗಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಕೊನೆಗೂ ಕುವೈಟ್‌ನಿಂದ ಮಂಗಳೂರಿಗೆ ಬಂದ ವಿಮಾನ ಕೊನೆಗೂ ಕುವೈಟ್‌ನಿಂದ ಮಂಗಳೂರಿಗೆ ಬಂದ ವಿಮಾನ

ಕೇರಳದಿಂದ ದಕ್ಷಿಣ ಕನ್ನಡಕ್ಕೆ ಆಗಮಿಸಿ ವಾಸ್ತವ್ಯ ಹೂಡಲು ಬಯಸುವವರು ಸೇವಾ ಸಿಂಧು ಮೂಲಕ ಪಾಸು ಪಡೆಯಬೇಕು. ತಪಪ್ಪಾಡಿ ಮತ್ತು ಜಲಸೂರು ಚೆಕ್ ಪೋಸ್ಟ್ ಮೂಲಕ ಆಗಮಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಕಾಸರಗೋಡು ಜಿಲ್ಲಾಡಳಿತ ಅಂತರರಾಜ್ಯಗಳ ನಡುವೆ ಸಂಚಾರ ನಡೆಸುವ ಜನರಿಗೆ 21 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದೆ.

English summary
All border roads to Kasaragod district of Kerala now open for daily commuters. Dakshina Kannada district allowing inter-state travel with some directions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X