• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಹಗರಣದಲ್ಲಿ ದಕ್ಷಿಣ ಕನ್ನಡ ಡಿಸಿ ಭಾಗಿ; ಕಾಂಗ್ರೆಸ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 02; ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ವಿರುದ್ಧ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಐವಾನ್ ಡಿಸೋಜಾ ಗಂಭೀರ ಆರೋಪವನ್ನು ಮಾಡಿದ್ದಾರೆ.

ಸೋಮವಾರ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ವಾರದಲ್ಲಿ ಕೊರೊನಾದಿಂದಾಗಿ 60-70 ಮಂದಿ ಸಾವನ್ನಪ್ಪುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಎಷ್ಟು ಜನರು ಸಾವನ್ನಪ್ಪಿದ್ದಾರೆ?, ಅವರ ಸಾವಿಗೆ ಕಾರಣವೇನು? ಎಂದು ಜಿಲ್ಲಾಧಿಕಾರಿ ಸಂಪೂರ್ಣ ಮಾಹಿತಿ ನೀಡಬೇಕು" ಎಂದರು.

ಕೇರಳ, ತಮಿಳುನಾಡಲ್ಲಿ ಕೊರೊನಾ ಸೋಂಕು ಹೆಚ್ಚಳ: ಚಾಮರಾಜನಗರದಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೇರಳ, ತಮಿಳುನಾಡಲ್ಲಿ ಕೊರೊನಾ ಸೋಂಕು ಹೆಚ್ಚಳ: ಚಾಮರಾಜನಗರದಲ್ಲಿ ಕಟ್ಟುನಿಟ್ಟಿನ ತಪಾಸಣೆ

"ಎಷ್ಟು ಮಂದಿಗೆ ಸರ್ಕಾರದ 1 ಲಕ್ಷ ರೂಪಾಯಿ ಸಿಕ್ಕಿದೆ?. ಈ ಬಗ್ಗೆ ಒಂದು ದಿನದೊಳಗೆ ಜಿಲ್ಲಾಧಿಕಾರಿ ಸಂಪೂರ್ಣ ಮಾಹಿತಿ ನೀಡಬೇಕು. ಮಾಹಿತಿ ನೀಡದಿದ್ದರೆ ಜಿಲ್ಲಾಧಿಕಾರಿ ಈ ವಿಚಾರದಲ್ಲಿ ಭ್ರಷ್ಟಾಚಾರ ಎಸಗಿರುವ ಬಗ್ಗೆ ನ್ಯಾಯಾಲಯದಲ್ಲಿ ಕೇಸ್ ಹಾಕುತ್ತೇವೆ" ಎಂದು ಐವಾನ್ ಡಿಸೋಜಾ ಆರೋಪಿಸಿದರು.

ಮಂಗಳೂರು; ಅದ್ಧೂರಿ ಕಾರ್ಯಕ್ರಮ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಂಗಳೂರು; ಅದ್ಧೂರಿ ಕಾರ್ಯಕ್ರಮ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ

"ಸರ್ಕಾರ ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಧನ ಘೋಷಣೆ ಮಾಡಿದೆ. ಸರ್ಕಾರ ಘೋಷಣೆ ಮಾಡಿ ತಿಂಗಳುಗಳೇ ಕಳೆದರೂ ಇಲ್ಲಿಯ ತನಕ ಜಿಲ್ಲೆಯಲ್ಲಿ ಮೃತಪಟ್ಟ ಯಾವ ಸೋಂಕಿತನ ಕುಟುಂಬದವರಿಗೂ ಪರಿಹಾರ ಸಿಕ್ಕಿಲ್ಲ" ಎಂದು ಆರೋಪಿಸಿದರು.

 ಬಕ್ರೀದ್‌ ಕಾರಣ ಕೋವಿಡ್‌ ನಿರ್ಬಂಧ ಸಡಿಲಿಕೆಯ ಕೇರಳ ಸರ್ಕಾರ ನಿರ್ಧಾರಕ್ಕೆ ಐಎಂಎ ಟೀಕೆ ಬಕ್ರೀದ್‌ ಕಾರಣ ಕೋವಿಡ್‌ ನಿರ್ಬಂಧ ಸಡಿಲಿಕೆಯ ಕೇರಳ ಸರ್ಕಾರ ನಿರ್ಧಾರಕ್ಕೆ ಐಎಂಎ ಟೀಕೆ

"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮಂದಿ ಕೊರೊನಾದಿಂದ ಸತ್ತಿದ್ದಾರೆ?. ಸತ್ತವರ ಪೈಕಿ ಎಷ್ಟು ಮಂದಿ ಸರ್ಕಾರದ ಪರಿಹಾರ ಧನಕ್ಕೆ ಅರ್ಹರು ಎಂಬುವುದರ ಬಗ್ಗೆ ಒಂದು ದಿನದೊಳಗೆ ಉತ್ತರ ಕೊಡಬೇಕು. ಇಲ್ಲವಾದಲ್ಲಿ ಇದರ ಹಿಂದೆ ದೊಡ್ಡ ಹಗರಣ ನಡೆದಿದೆ ಮತ್ತು ಹಗರಣದ ಮುಖ್ಯ ರೂವಾರಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಎಂದು ಭಾವಿಸಿ ಜಿಲ್ಲಾಧಿಕಾರಿ ವಿರುದ್ಧ ಕೇಸ್ ದಾಖಲಿಸಬೇಕಾಗುತ್ತದೆ" ಎಂದು ಎಚ್ಚರಿಸಿದರು.

ಲಸಿಕೆ ವಿತರಣೆ; "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಸಿಕೆ ಕೊರತೆಯಾಗುತ್ತಿದೆ. ಲಸಿಕಾ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರೇ ಲಸಿಕಾ ವಿತರಣೆಯ ನೇತೃತ್ವ ವಹಿಸಿದ್ದಾರೆ. ಕಾರ್ಯಕರ್ತರಿಗೆ ಬೇಕಾದವರಿಗೆ ಮಾತ್ರ ಕರೆ ಮಾಡಿ ಲಸಿಕೆ ತೆಗೆದುಕೊಳ್ಳಲು ಸೂಚಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಸಮರ್ಪಕ ತನಿಖೆ ಮಾಡಬೇಕೆಂದು" ಐವಾನ್ ಡಿಸೋಜಾ ಆಗ್ರಹಿಸಿದರು.

"ಸರ್ಕಾರಿ ಆಸ್ಪತ್ರೆಗಳಲ್ಲಿ ದಿನಕ್ಕೆ 500 ಲಸಿಕೆ ಮಾತ್ರ ವಿತರಣೆ ಯಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹತ್ತು ಸಾವಿರ ಲಸಿಕೆ ಮಾರಾಟವಾಗುತ್ತಿದೆ‌. ಜಿಲ್ಲೆಯ ಜನರಿಗೆ ಲಸಿಕೆ ಕೊಡೋಕೆ ಹಣ ಇಲ್ಲ ಅಂತಾ ಜಿಲ್ಲಾಡಳಿತ ಬಹಿರಂಗವಾಗಿ ಹೇಳಲಿ. ಕಾಂಗ್ರೆಸ್ ಸಾರ್ವಜನಿಕರಿಂದ ಚಂದಾ ಎತ್ತಿ ಹಣ ಸಂಗ್ರಹ ಮಾಡುತ್ತದೆ. ಜಿಲ್ಲಾಡಳಿತ ಇನ್ನೂ ಸುಮ್ಮನಿದ್ದರೆ ಉಚಿತ ಲಸಿಕೆ ಎಂಬ ಬೋರ್ಡ್‌ಗೆ ಸಗಣಿ ಹಚ್ಚುತ್ತೇವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಜಿಲ್ಲೆಯಲ್ಲಿ ವಾರಾಂತ್ಯದ ಕರ್ಪ್ಯೂ ಹಾಕುವ ಸಾಧ್ಯತೆ ಇದೆ. ಜಿಲ್ಲಾಧಿಕಾರಿ ಸಭೆಯಲ್ಲಿ ವಿಕೇಂಡ್ ಕರ್ಪ್ಯೂ ಹಾಕುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಳವಾಗಿದೆ. ಕೇರಳ ರಾಜ್ಯದಿಂದ ನಮ್ಮ ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯ ಅಂಕಿ ಅಂಶ ಪ್ರಕಾರ 1 ಲಕ್ಷ 10 ಸಾವಿರ ವಿದ್ಯಾರ್ಥಿಗಳಿದ್ದಾರೆ" ಎಂದರು.

"ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ನಮ್ಮ ಜಿಲ್ಲೆಯಲ್ಲಿ 63 ಸಾವಿರ ವಿದ್ಯಾರ್ಥಿಗಳಿಗೆ ಮೊದಲ ಹಂತದ ಲಸಿಕೆ ನೀಡಲಾಗಿದೆ. ಹಾಗದರೆ ಉಳಿದ 53 ಸಾವಿರ ವಿದ್ಯಾರ್ಥಿಗಳ ಸ್ಥಿತಿ ಏನು?. ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಕೊರತೆ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಲಸಿಕೆ ವಿತರಣೆಯ ವಿಫಲತೆಯೇ ಕೊರೊನಾ ಮೂರನೇ ಅಲೆಗೆ ಕಾರಣವಾಗಿದೆ. ಪೆಟ್ರೋಲ್, ಡಿಸೇಲ್‌ ಬೆಲೆ ಏರಿಕೆಯಿಂದ ಲೂಟಿ ಮಾಡಿದ ಹಣದಿಂದ ಲಸಿಕೆ ನೀಡಿ" ಎಂದು ಐವಾನ್ ಡಿಸೋಜಾ ಹೇಳಿದರು.

ಸಿಎಂ- ದೇವೇಗೌಡರ ಭೇಟಿ; "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆರ್‌ಎಸ್ಎಸ್ ಹಿನ್ನಲೆ ಇಲ್ಲ. ಹಾಗಾಗಿ ಸರ್ಕಾರ ಇನ್ನು ಆರು ತಿಂಗಳೊಳಗೆ ಬೀಳಲಿದೆ. ಸರ್ಕಾರ ಬೀಳುವ ಸಂದರ್ಭದಲ್ಲಿ ಎತ್ತಿ ಅಂತಾ ಹೇಳೋಕೆ ಬೊಮ್ಮಾಯಿ ದೇವೇಗೌಡರನ್ನು ಭೇಟಿಯಾಗಿದ್ದಾರೆ. ದೇವೇಗೌಡರೂ ಸರ್ಕಾರ ಯಾವಾಗ ಬೀಳುತ್ತದೆ ಅಂತಾ ಕಾಯುತ್ತಿರುತ್ತಾರೆ. ಬಿದ್ದಾಗ ತಕ್ಷಣ ಎತ್ತಿ ನಾವೀದ್ದೇವೆ ಅಂತಾ ಅವಕಾಶಕ್ಕಾಗಿ ಕಾಯುತ್ತಾರೆ" ಅಂತಾ ಐವಾನ್ ಡಿಸೋಜಾ ವ್ಯಂಗ್ಯವಾಡಿದರು.

English summary
Deputy commissioner of Dakshina Kannada K.V. Rajendra involved in Coronavirus scam. We will file complaint against him in the court said Congress leader Ivan D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X