• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು; ಅದ್ಧೂರಿ ಕಾರ್ಯಕ್ರಮ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 01; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಪಕ್ಕದಲ್ಲೇ ಕೇರಳ ರಾಜ್ಯ ಇರುವುದರಿಂದ ಕೊರೊನಾ ಸೋಂಕು ಹರಡುವ ಆತಂಕ ದುಪ್ಪಟ್ಟಾಗಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಭೆ-ಸಮಾರಂಭಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಗಸ್ಟ್ 10ರವರೆಗೆ ನಡೆಸದಂತೆ ಸೂಚನೆ ನೀಡಲಾಗಿದೆ. ಮದುವೆ ಕಾರ್ಯಕ್ರಮಗಳಲ್ಲಿ ಕೇವಲ 50 ಜನರು ಮಾತ್ರ ಪಾಲ್ಗೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಲ್ಲಿ ಕಲ್ಯಾಣ ಮಂಟಪಗಳ ಮಾಲೀಕರ ಮೇಲೆ ಎಫ್ಐಆರ್ ದಾಖಲಿಸಬೇಕು. ಇದರ ಬಗ್ಗೆ ನಿಗಾ ವಹಿಸಲು ಹೋಂ ಗಾರ್ಡ್ ನಿಯೋಜಿಸಬೇಕು ಎಂದು ಆದೇಶ ನೀಡಿದ್ದಾರೆ.

ಮಂಗಳೂರು; ಪಕ್ಕದ ಫ್ಲ್ಯಾಟ್ ವ್ಯಕ್ತಿಯನ್ನೇ ಹನಿಟ್ರ್ಯಾಪ್ ಮಾಡಿದ ಜೋಡಿ! ಮಂಗಳೂರು; ಪಕ್ಕದ ಫ್ಲ್ಯಾಟ್ ವ್ಯಕ್ತಿಯನ್ನೇ ಹನಿಟ್ರ್ಯಾಪ್ ಮಾಡಿದ ಜೋಡಿ!

ಆದರೆ‌ ಜಿಲ್ಲಾಡಳಿತ ಆದೇಶ ಹೊರಡಿಸಿ ದಿನ ಕಳೆಯುದಷ್ಟರಲ್ಲೇ ನಿಯಮ ಉಲ್ಲಂಘಿಸಿ ಮಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ಭರ್ಜರಿ ರಾಜಕೀಯ ಸಮಾರಂಭ ನಡೆದಿದೆ. ಕಾಂಗ್ರೆಸ್ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಪದಗ್ರಹಣ ಸಮಾರಂಭ ನಡೆದಿದ್ದು, ರಾಜಕೀಯ ಸಮಾರಂಭಗಳಿಗೆ ನಿರ್ಬಂಧ ವಿಧಿಸಿದ್ದರೂ ಸಹ ಯಾವುದನ್ನೂ ಪರಿಗಣಿಸದೇ ಕಾರ್ಯಕ್ರಮ ನಡೆಸಲಾಗಿದೆ.

ತೈಲ ಪೈಪ್‌ಲೈನ್‌ಗೆ ಕನ್ನ; ದಕ್ಷಿಣ ಕನ್ನಡದಲ್ಲಿ ಭಾರೀ ಡಿಸೇಲ್ ದಂಧೆ ಬಯಲಿಗೆತೈಲ ಪೈಪ್‌ಲೈನ್‌ಗೆ ಕನ್ನ; ದಕ್ಷಿಣ ಕನ್ನಡದಲ್ಲಿ ಭಾರೀ ಡಿಸೇಲ್ ದಂಧೆ ಬಯಲಿಗೆ

ಕಾರ್ಯಕ್ರಮದಲ್ಲಿ ನಾಯಕರು ಮತ್ತು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು, ಕೊರೊನಾ ನಿಯಮ ಉಲ್ಲಂಘಿಸಿ ಸೇರಿದ್ದಾರೆ. ಕೊರೊನಾವನ್ನು ಮಟ್ಟ ಹಾಕುವಲ್ಲಿ ಎಡವಿದ ಸರ್ಕಾರದ ವಿರುದ್ಧ ಸದಾ ಟೀಕಾ ಪ್ರಹಾರವನ್ನೇ ಮಾಡುವ ಕಾಂಗ್ರೆಸ್ ಮುಖಂಡರಾದ ಬಿ. ಕೆ. ಹರಿಪ್ರಸಾದ್, ಐವನ್ ಡಿಸೋಜಾ, ಮೊಯಿದ್ದೀನ್ ಬಾವಾ ಸೇರಿ ಹಲವರು ಕೊರೊನಾ ನಿಯಮ ಮರೆತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕೇರಳದಲ್ಲಿ ಕೊರೊನಾ ಸ್ಫೋಟ; ದಕ್ಷಿಣ ಕನ್ನಡ ಗಡಿಭಾಗದಲ್ಲಿ ಹೈಅಲರ್ಟ್ ಕೇರಳದಲ್ಲಿ ಕೊರೊನಾ ಸ್ಫೋಟ; ದಕ್ಷಿಣ ಕನ್ನಡ ಗಡಿಭಾಗದಲ್ಲಿ ಹೈಅಲರ್ಟ್

ಕಾಂಗ್ರೆಸ್‌ನ ಸಮಾರಂಭದ ವೇದಿಕೆಯಲ್ಲೇ ಸಾಮಾಜಿಕ ಅಂತರವಿಲ್ಲದೇ ಹತ್ತಾರು ನಾಯಕರು ಸೇರಿದ್ದು, ಸರಿಯಾಗಿ ಮಾಸ್ಕ್ ಕೂಡ ಧರಿಸದೇ ಕಾಂಗ್ರೆಸ್ ಕಚೇರಿಯಲ್ಲಿ ಜಾತ್ರೆಯಂತೆಯೇ ಜನರು ಸೇರಿದ್ದರು. ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ರಾಜಕೀಯ ಕಾರ್ಯಕ್ರಮ ನಿಷೇಧಿಸಿರುವ ಜಿಲ್ಲಾಧಿಕಾರಿಗಳ ಸ್ಪಷ್ಟ ಆದೇಶ ನೀಡಿದ್ದರೂ, ಕೈ ನಾಯಕರು ಮಾತ್ರ ಡಿಸಿ ಆದೇಶ ಉಲ್ಲಂಘಿಸಿ ಅದ್ದೂರಿ ಸಮಾವೇಶ ಮಾಡಿದ್ದಾರೆ.

ಕಾರ್ಯಕ್ರಮ ನಿಲ್ಲಿಸೋಕೆ ಸರ್ಕಾರಿ ಅಧಿಕಾರಿಗಳೇನೋ ಕಾಂಗ್ರೆಸ್ ಕಛೇರಿಗೆ ಬರುವುದಿಲ್ಲ. ರಾಷ್ಟ್ರೀಯ ಪಕ್ಷದ ಕಚೇರಿಯೊಳಗೆ ಅಧಿಕಾರಿಗಳು ಬರುವುದಕ್ಕೆ ಅವಕಾಶ ಇಲ್ಲ‌‌. ಇದು ಮೊದಲೇ ಪೂರ್ವ ನಿರ್ಧರಿತ ಕಾರ್ಯಕ್ರಮವಾಗಿರುವುದರಿಂದ ಬೆಂಗಳೂರಿನಿಂದ ಪಕ್ಷದ ನಾಯಕರು ಆಗಮಿಸಿದ್ದಾರೆ. ಹೀಗಾಗಿ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್‌ನ ಮುಖಂಡರು ಸಮಜಾಯಿಷಿ ನೀಡಿದ್ಧಾರೆ.

ಎಸ್ಎಂಕೆ ಫೋಟೋಗೆ ಮತ್ತೆ ಶುಕ್ರದೆಸೆ; ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗಿದ್ದ ಕಾಂಗ್ರೆಸ್ ಮುಖ್ಯಮಂತ್ರಿ ಗಳ ಫೋಟೋ ಗ್ಯಾಲರಿಯಲ್ಲಿ, ಪ್ರಸ್ತುತದಲ್ಲಿ ಬಿಜೆಪಿ ಸೇರಿರುವ ಹಿರಿಯ ರಾಜಕಾರಣಿ ಎಸ್. ಎಂ. ಕೃಷ್ಣ ಫೋಟೋವನ್ನು ಕಾಂಗ್ರೆಸ್ ಕಾರ್ಯಕರ್ತರು ಈ ಹಿಂದೆ ಹರಿದು ಹಾಕಿದ್ದರು. ಆದರೆ ಈ ಬಗ್ಗೆ ಮಾಧ್ಯಮದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಮತ್ತೆ ಸಿಎಂ ಫೋಟೋ ಗ್ಯಾಲರಿಯಲ್ಲಿ ಎಸ್. ಎಂ. ಕೃಷ್ಣ ಫೋಟೋ ಅಳವಡಿಸಲಾಗಿದೆ.

sm krisnha

ಈ ಮೊದಲು ಎಸ್. ಎಂ. ಕೃಷ್ಣ ಬಿಜೆಪಿ ಸೇರಿದ ಸಂದರ್ಭದಲ್ಲಿ ಕಾರ್ಯಕರ್ತರು ಕೃಷ್ಣ ಫೋಟೋವನ್ನು ಹರಿದು ಹಾಕಿದ್ದರು. ಆನಂತರ ಇತ್ತೀಚೆಗೆ ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಂದ ಸಂದರ್ಭದಲ್ಲಿ ಫೋಟೋವನ್ನು ಮತ್ತೆ ಅಂಟಿಸಲಾಗಿತ್ತು. ಆದರೆ ಡಿ. ಕೆ. ಶಿವಕುಮಾರ್ ಕಾಂಗ್ರೆಸ್ ಕಚೇರಿಯಿಂದ ಕೆಳಗಿಳಿಯುತ್ತಿದ್ದಂತೆಯೇ ಮತ್ತೆ ಫೋಟೋವನ್ನು ಕಾರ್ಯಕರ್ತರು ಹರಿದು ಹಾಕಿದ್ದರು.

ಈ ವಿಚಾರ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತಿದ್ದಂತೆಯೇ ಮತ್ತೆ ಫೋಟೋವನ್ನು ಅಂಟಿಸಲಾಗಿದೆ. ಆದರೆ ಈ ಪೋಟೋದ ಭವಿಷ್ಯ ಇನ್ನೆಷ್ಟು ದಿನ? ಅನ್ನೋದನ್ನು ಮಾತ್ರ ಕಾದುನೋಡಬೇಕಾಗಿದೆ.

English summary
Dakshina Kannada Congress workers violated Covid 19 protocol by organizing function in party office on August 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X