ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬಳಿ ಇರೋದು 30 ಸಾವಿರ ರೂ. ನಗದು ಮಾತ್ರ; ಒಟ್ಟು ಆಸ್ತಿ ಎಷ್ಟು?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 25: ನಾಲ್ಕನೇ ಬಾರಿಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತೆ ತಮ್ಮ ಸರಳತನದಿಂದ ಸುದ್ದಿಯಾಗಿದ್ದಾರೆ. ನಾಲ್ಕು ಬಾರಿ ಶಾಸಕ, ಸಚಿವರಾದರೂ ಕೋಟಾ ಶ್ರೀನಿವಾಸ ಪೂಜಾರಿ ಕೈಯಲ್ಲಿರುವುದು ಮೂವತ್ತು ಸಾವಿರ ರೂಪಾಯಿ ಮಾತ್ರ ಎಂಬುದನ್ನು ನೀವು ನಂಬಲೇಬೇಕು.

ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಕೋಟಾ ಶ್ರೀನಿವಾಸ ಪೂಜಾರಿ ತಮ್ಮ ಆಸ್ತಿ ವಿವರವನ್ನು ನೀಡಿದ್ದು, ಸಚಿವರಾದವರು ಹೀಗೆಯೂ ಇರಬಹುದಾ ಎಂದು ಪಕ್ಷದ ಕಾರ್ಯಕರ್ತರಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬಳಿ 30 ಸಾವಿರ ರೂಪಾಯಿ ನಗದು ಮತ್ತು 1.10 ಲಕ್ಷ ರೂಪಾಯಿ ಬ್ಯಾಂಕ್ ಠೇವಣಿ ಹೊಂದಿದ್ದಾರೆ. ಇದನ್ನು ಹೊರತುಪಡಿಸಿ ಹಣಕಾಸು ಅಥವಾ ಬ್ಯಾಂಕೇತರ ಸಂಸ್ಥೆ, ಅಂಚೆ ಕಚೇರಿ, ಕಂಪೆನಿಗಳಲ್ಲೂ ಕೋಟಾ ಶ್ರೀನಿವಾಸ ಪೂಜಾರಿ ನಯಾ ಪೈಸೆ ಹಣವನ್ನು ಹೊಂದಿಲ್ಲ.

MLC Election: Dakshina Kannada BJP Candidate Kota Srinivas Poojary Declarers Assets Worth Rs 44.86 Lakhs

ಕೋಟಾ ಶ್ರೀನಿವಾಸ ಪೂಜಾರಿ 2006ನೇ ಮಾಡೆಲ್‌ನ ಎರಡು ಲಕ್ಷ ಮೌಲ್ಯದ ಮಾರುತಿ ಆಲ್ಟೋ ಕಾರು ಹೊಂದಿದ್ದಾರೆ. 2016ನೇ ಮಾಡೆಲ್‌ನ 23 ಲಕ್ಷ ರೂಪಾಯಿ ಟೊಯೋಟಾ ಇನ್ನೋವಾ ಕಾರು, ಸುಮಾರು 46 ಸಾವಿರ ರೂಪಾಯಿ ಮೌಲ್ಯದ ಹತ್ತು ಗ್ರಾಂ‌ ಚಿನ್ನದ ಉಂಗುರವನ್ನು ಹೊಂದಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿ ಏಳನೇ ತರಗತಿ ವಿಧ್ಯಾಭ್ಯಾಸ ಮಾಡಿದ್ದು, ರಾಜಕೀಯಕ್ಕೆ ಬರುವ ಮೊದಲು ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ಕೃಷಿ ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಬ್ಯಾಂಕ್‌ಗಳಲ್ಲಿ ಸಾಲ ಇಲ್ಲ ಮತ್ತು ತಮ್ಮ ಮೇಲೆ ಯಾವುದೇ ಕ್ರಿಮಿನಲ್ ಕೇಸ್‌ಗಳಿಲ್ಲ ಎಂದು ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

1998ರಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಉಡುಪಿಯ ಕೋಟತಟ್ಟು ಎಂಬಲ್ಲಿ 1.50 ಲಕ್ಷ ರೂಪಾಯಿಗೆ 0.13 ಸೆಂಟ್ಸ್ ಜಾಗ ಖರೀದಿ ಮಾಡಿದ್ದು, ಈಗಿನ ಮಾರುಕಟ್ಟೆ ಮೌಲ್ಯ ಆರು ಲಕ್ಷ ರೂಪಾಯಿ ಅಂತಾ ಹೇಳಲಾಗಿದೆ. 2011ರಲ್ಲಿ ಬೆಂಗಳೂರಿನಲ್ಲಿ ಶಾಸಕರ ನಿವೇಶನ ಹೊಂದಿದ್ದು, ಇದರ ಪ್ರಸ್ತುತ ಮೌಲ್ಯ 30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಕೋಟಾ ಶ್ರೀನಿವಾಸ ಪೂಜಾರಿಯವರು ತಮ್ಮ ಚುನಾವಣಾ ನಾಮಪತ್ರದಲ್ಲಿ ಘೋಷಿಸಿಕೊಂಡಂತೆ 26,86,100 ರೂಪಾಯಿ ಮೌಲ್ಯದ ಚರಾಸ್ತಿ ಮತ್ತು 18 ಲಕ್ಷ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ.

ಇನ್ನು ಕೋಟಾ ಶ್ರೀನಿವಾಸ ಪೂಜಾರಿಯವರು ತಮ್ಮ ಕುಟುಂಬದ ಆಸ್ತಿ ವಿವರವನ್ನೂ ಹಂಚಿಕೊಂಡಿದ್ದಾರೆ. ಪತ್ನಿ ಶಾಂತ, ಪುತ್ರರಾದ ಶಶಿಧರ್, ಪುತ್ರಿಯರಾದ ಶೃತಿ ಮತ್ತು ಸ್ವಾತಿ ಹೆಸರಿನಲ್ಲಿರುವ ಆಸ್ತಿ ವಿವರಗಳನ್ನು ಹಂಚಿಕೊಂಡಿದ್ದಾರೆ. ಪತ್ನಿ ಶಾಂತ ಬಳಿ 10 ಸಾವಿರ ನಗದು, ಪುತ್ರ ಶಶಿಧರ್ ಬಳಿ 20 ಸಾವಿರ ನಗದು ಸೇರಿದಂತೆ ಕಾರು, ಆಸ್ತಿಯನ್ನು ಹೊಂದಿದ್ದಾರೆ ಅಂತಾ ಅಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಕೋಟ್ಯಧೀಶ
ಇನ್ನು ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಕೋಟ್ಯಧೀಶರಾಗಿದ್ದು, 40 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. 40 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, 12 ಕೋಟಿ ರೂಪಾಯಿ ಸಾಲವೂ ಒಳಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಉದ್ಯಮಿಯಾಗಿರುವ ಮಂಜುನಾಥ ಭಂಡಾರಿ ಮಂಗಳೂರಿನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಒಡೆಯರಾಗಿದ್ದಾರೆ. ಮಂಜುನಾಥ ಭಂಡಾರಿ ಚರಾಸ್ತಿ 4,91,19,381 ರೂ. ಹೊಂದಿದ್ದರೆ, ಸ್ಥಿರಾಸ್ತಿ 33,80,60,000 ರೂಪಾಯಿ ಆಗಿದೆ. ಮಂಜುನಾಥ ಭಂಡಾರಿಯವರ ಪತ್ನಿಯೂ ಕೋಟ್ಯಧೀಶೆಯಾಗಿದ್ದಾರೆ.

ಮಂಜುನಾಥ ಭಂಡಾರಿ ಕೈಯಲ್ಲಿ ಒಂದು ಕೋಟಿ ರೂಪಾಯಿ ನಗದು ಮತ್ತು ಬ್ಯಾಂಕ್‌ಗಳಲ್ಲಿ ಲಕ್ಷಾಂತರ ರೂಪಾಯಿ ಎಫ್‌ಡಿ ರೂಪದಲ್ಲಿ ನಗದನ್ನು ಹೊಂದಿದ್ದಾರೆ. ಅನೇಕ ಸಂಸ್ಥೆಗಳಲ್ಲಿ ಶೇರುದಾರರೂ ಆಗಿದ್ದಾರೆ. ಅನೇಕ ಕಾರು, ಬೈಕ್‌ಗಳು ಮಂಜುನಾಥ ಭಂಡಾರಿಯವರ ಹೆಸರಿನಲ್ಲಿದೆ. ಅನೇಕ ಕಡೆ ಕೃಷಿ ಮತ್ತು ಕೃಷಿಯೇತರ ಭೂಮಿಯನ್ನೂ ಮಂಜುನಾಥ ಭಂಡಾರಿಯವರು ಹೊಂದಿದ್ದಾರೆ.

ಎಸ್‌ಡಿಪಿಐ ಅಭ್ಯರ್ಥಿ ಆಸ್ತಿ
ಇನ್ನು ದಕ್ಷಿಣ ಕನ್ನಡ ವಿಧಾನ ಪರಿಷತ್ ಎಸ್‌ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರಿ ಆಸ್ತಿ ಘೋಷಣೆ ಮಾಡಿದ್ದು, ಇದರ ಜೊತೆಗೆ ನಾಲ್ಕು ಪ್ರಕರಣಗಳನ್ನು ಒಳಗೊಂಡಿದ್ದಾರೆ. ಕಾನೂನು ಉಲ್ಲಂಘಿಸಿ ಪ್ರತಿಭಟನೆ ಮಾಡಿದರ ಬಗ್ಗೆ ಶಾಫಿ ಬೆಳ್ಳಾರೆ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಶಾಫಿ ಬೆಳ್ಳಾರೆ ಕೈಯಲ್ಲಿ 20 ಸಾವಿರ ನಗದು ಮತ್ತು ಬ್ಯಾಂಕ್ ಖಾತೆಯಲ್ಲಿ 65 ಸಾವಿರ ರೂಪಾಯಿ ಇದೆ ಎಂದು ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ.

English summary
Karnataka MLC Election: Dakshina Kannada BJP Candidate Kota Srinivas Poojary Declarers Assets Worth Rs 44.86 Lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X