ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳದತ್ತ ಮುಖ ಮಾಡಿದ ದಕ್ಷಿಣ ಕನ್ನಡ ಬಿಜೆಪಿ, ಕಾಂಗ್ರೆಸ್ ನಾಯಕರು

|
Google Oneindia Kannada News

ಮಂಗಳೂರು, ಏಪ್ರಿಲ್ 21: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ತಣ್ಣಗಾಗಿದೆ. ಇನ್ನು ಏನಿದ್ದರೂ ಫಲಿತಾಂಶ ಮೇಲೆ ಎಲ್ಲರ ಚಿತ್ತ ಕೇಂದ್ರಿಕೃತವಾಗಿದೆ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಈಗ ಕೇರಳದ ಕಡೆಗೆ ಮುಖ ಮಾಡಿದ್ದಾರೆ.

ಏಪ್ರಿಲ್ 23 ರಂದು ಕೇರಳದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕೇರಳಕ್ಕೆ ತೆರಳಿ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅಣ್ಣನ ಕುರಿತು ಭಾವನಾತ್ಮಕ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿಅಣ್ಣನ ಕುರಿತು ಭಾವನಾತ್ಮಕ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ್ ತಂತ್ರಿ ಅವರ ಪರವಾಗಿ ನಳಿನ್ ಕುಮಾರ್ ಕಟೀಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಪ್ರಚಾರ ಆರಂಭಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್ ಕೇರಳ ಬಿಜೆಪಿ ಉಸ್ತುವಾರಿ ಆಗಿದ್ದು, ಕಾಸರಗೋಡು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಪ್ರಚಾರದ ಸಭೆಯಲ್ಲಿ ಭಾಗವಹಿಸಿ ಪ್ರಚಾರ ಸಭೆಗಳ ಬಗ್ಗೆ ಚರ್ಚೆ ನಡೆಸಿದರು.

 ಚುನಾವಣಾ ಪ್ರಚಾರ ಆರಂಭ

ಚುನಾವಣಾ ಪ್ರಚಾರ ಆರಂಭ

ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ನ ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮೋನಪ್ಪ ಭಂಡಾರಿ, ಕಾಸರಗೋಡ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀಕಾಂತ್, ಕಾಸರಗೋಡು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಸೇರದಂತೆ ಇನ್ನಿತರರು ಕಾಸರಗೋಡು ಸಭೆಯಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

 ಇಲ್ಲಿ ಕನ್ನಡಿಗರೇ ನಿರ್ಣಾಯಕರು

ಇಲ್ಲಿ ಕನ್ನಡಿಗರೇ ನಿರ್ಣಾಯಕರು

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಉತ್ತರದಲ್ಲಿರುವ ಮತ್ತು ಹಿಂದುಳಿದಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡಿಗರೇ ನಿರ್ಣಾಯಕರು. ಇಲ್ಲಿಂದ ಹೆಚ್ಚಿನ ಮುನ್ನಡೆ ಗಳಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಇಲ್ಲಿನ ಬಹುಪಾಲು ಕನ್ನಡಿಗರು ಬಿಜೆಪಿ ಬೆಂಬಲಿಗರಾಗಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡರು ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ್ದಾರೆ.

 ಪಂಚೆಯುಟ್ಟು, ಶಲ್ಯ ಹೊದ್ದು ಕೇರಳದ ತಿರುನೆಲ್ಲಿಯಲ್ಲಿ ಪಿತೃ ಕಾರ್ಯ ಮಾಡಿದ ರಾಹುಲ್ ಪಂಚೆಯುಟ್ಟು, ಶಲ್ಯ ಹೊದ್ದು ಕೇರಳದ ತಿರುನೆಲ್ಲಿಯಲ್ಲಿ ಪಿತೃ ಕಾರ್ಯ ಮಾಡಿದ ರಾಹುಲ್

 ವಯನಾಡ್ ನಲ್ಲಿ ಪ್ರಚಾರ

ವಯನಾಡ್ ನಲ್ಲಿ ಪ್ರಚಾರ

ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರುಗಳಾದ ರಮಾನಾಥ್ ರೈ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯುಟಿ ಖಾದರ್ ಸೇರಿದಂತೆ ಇನ್ನಿತರ ನಾಯಕರು ಕೇರಳದತ್ತ ಮುಖ ಮಾಡಿದ್ದಾರೆ. ರಮಾನಾಥ್ ರೈ ಕಾಸರಗೋಡು ಲೋಕಸಭಾ ಕ್ಷೇತ್ರದ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮತಯಾಚನೆ ಮಾಡುತ್ತಿದ್ದಾರೆ. ಅಂತೆಯೇ ಯುಟಿ ಖಾದರ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ವಯನಾಡ್ ನಲ್ಲಿ ಪ್ರಚಾರಕ್ಕೆ ತೆರಳಿದ್ದಾರೆ.

 ಯುಡಿಎಫ್ ನಾಯಕರೊಂದಿಗೆ ಸಭೆ

ಯುಡಿಎಫ್ ನಾಯಕರೊಂದಿಗೆ ಸಭೆ

ಬಿ.ರಮನಾಥ ರೈ ವಯನಾಡ್ ನ ಕಲ್ಪಟ್ಟ ಪ್ರದೇಶದಲ್ಲಿ ಯು.ಡಿ.ಎಫ್ ಜಿಲ್ಲಾ ಕಛೇರಿಗೆ ಭೇಟಿ ನೀಡಿ ಕೇರಳ ಯುಡಿಎಫ್ ನಾಯಕರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂ ಸದಸ್ಯರಾದ ಪದ್ಮಶೇಖರ್ ಜೈನ್, ಎಂ.ಎಸ್ ಮಹಮ್ಮದ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಪುತ್ತೂರು ಯುವ ಕಾಂಗ್ರೆಸ್ ಕಾರ್ಯದರ್ಶಿ ದಿನೇಶ್ ಯಾದವ್ ಪಾಣಾಜೆ ಉಪಸ್ಥಿತರಿದ್ದರು‌.

 ತಲೆಗೆ ಬ್ಯಾಂಡೇಜ್ ಸುತ್ತಿಕೊಂಡೇ ಪ್ರಚಾರಕ್ಕೆ ಬಂದ ತರೂರ್, ಕೊಂಡಾಡಿದ ರಾಹುಲ್ ತಲೆಗೆ ಬ್ಯಾಂಡೇಜ್ ಸುತ್ತಿಕೊಂಡೇ ಪ್ರಚಾರಕ್ಕೆ ಬಂದ ತರೂರ್, ಕೊಂಡಾಡಿದ ರಾಹುಲ್

English summary
Dakshina Kannada Loka Sabha constituency polling completed on April 18. Now Dakshina Kannada district BJP and Congress leaders busy at election campaign in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X