ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಹಿತ್ ಚಕ್ರತೀರ್ಥ ಧಮ್ ಇದ್ದರೆ ಮಂಗಳೂರಿಗೆ ಬರಲಿ: ಮಿಥುನ್ ರೈ ಸವಾಲ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂ.25: ಎಡಪಂಥೀಯ ಸಂಘಟನೆಗಳ‌ ಪ್ರತಿಭಟನೆ ಹಿನ್ನೆಲೆಯಲ್ಲಿ ಚಿಂತಕ ರೋಹಿತ್ ಚಕ್ರತೀರ್ಥಗೆ ಮಂಗಳೂರಿನಲ್ಲಿ‌ ನಡೆಯಬೇಕಿದ್ದ ನಾಗರಿಕ ಸನ್ಮಾನ ಮುಂದೂಡಲಾಗಿದೆ. ಕಾರ್ಯಕ್ರಮ ಆಯೋಜಿಸಿದ ಸಂಘಟನೆಗೆ ಮತ್ತು ಚಿಂತಕ ರೋಹಿತ್ ಚಕ್ರತೀರ್ಥಗೆ ದ.ಕ‌ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಸವಾಲು ಹಾಕಿದ್ದು, ರೋಹಿತ್ ಚಕ್ರತೀರ್ಥ ಧಮ್ ಇದ್ದರೆ ಮಂಗಳೂರಿಗೆ ಬರಲಿ, ನಾವು ಸನ್ಮಾನ ಮಾಡಿ ಕಳುಹಿಸುತ್ತೇವೆ ಅಂತಾ ಸವಾಲು ಎಸೆದಿದ್ದಾರೆ.

ವಿಜಯ ಬ್ಯಾಂಕ್ ವಿಚಾರದಲ್ಲಿ ತುಳುನಾಡಿನ ಹೆಮ್ಮೆ ಕಡೆಗಣಿಸಿದ ಸರ್ಕಾರ

ವಿಜಯ ಬ್ಯಾಂಕ್ ವಿಚಾರದಲ್ಲಿ ತುಳುನಾಡಿನ ಹೆಮ್ಮೆ ಕಡೆಗಣಿಸಿದ ಸರ್ಕಾರ

ಆ ಬಳಿಕ ಸುದ್ದಿಗೋಷ್ಠಿ ನಡೆಸಿದ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಪಠ್ಯ ಪರಿಷ್ಕರಣೆ ಮೂಲಕ ತುಳುವರ ಅಸ್ತಿತ್ವ ನಶಿಸುವಂತಹ ಹುನ್ನಾರ ಮಾಡಲಾಗುತ್ತಿದೆ. ಮೊದಲು ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರು ಟ್ಯಾಬ್ಲೋ ತೆಗೆಯಲಾಯಿತು. ವಿಜಯ ಬ್ಯಾಂಕ್ ವಿಚಾರದಲ್ಲಿ ತುಳುನಾಡಿನ ಹೆಮ್ಮೆಯನ್ನು ಕಡೆಗಣಿಸಲಾಯಿತು.ಪಠ್ಯ ಪುಸ್ತಕದಲ್ಲಿ ನಾರಾಯಣ ಗುರು ಧಾರ್ಮಿಕ ಚಳುವಳಿಯನ್ನು ನಾಶ ಮಾಡಲಾಗಿದೆ.ಕಯ್ಯಾರ ಕಿಂಞಣ್ಣ ರೈಯವರ ಹೆಸರು ಬದಲಾವಣೆ ಮಾಡಲಾಗಿದೆ.ಇತಿಹಾಸ ವನ್ನು ಮರೆಮಾಚುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ಅಂತಾ ಹೇಳಿದ್ದಾರೆ..

ಮಂಜೇಶ್ವರ ಗೋವಿಂದ ಪೈಗಳು, ಕಯ್ಯಾರ ಕಿಂಞಣ್ಣ ರೈಗಳು ಗುರುಗಳು..ಕಯ್ಯಾರರು ಜೀವನ ಪರ್ಯಂತ ಗೋವಿಂದ ಪೈ ಗಳಿಗೆ ಗುರುವಿನ ಸ್ಥಾನ ನೀಡಿದೆ.1956ರಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಆರಂಭವಾಯಿತು.1963ರಲ್ಲಿ ಗೋವಿಂದ ಪೈ ಗಳು 83 ವರ್ಷದಲ್ಲಿ ನಿಧನರಾದರು.1956ರಲ್ಲಿ ಚಳುವಳಿ ಆರಂಭವಾದಾಗ ಚಳುವಳಿಗೆ ಹೆಗಲು ಕೊಟ್ಟದ್ದು ಕಯ್ಯಾರ ಕಿಂಞಣ್ಣ ರೈಗಳು.ಗೋವಿಂದ ಪೈ ಗಳು 14 ಭಾಷೆಗಳ ಪಂಡಿತರು ಅಂತಾ ಮಿಥುನ್ ರೈ ಬಣ್ಣಿಸಿದ್ದಾರೆ..

ಬಿಜೆಪಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ

ಬಿಜೆಪಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ

ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್,ಪಠ್ಯ ಪುಸ್ತಕ ವಿಚಾರದಲ್ಲಿ ಸರ್ಕಾರದ ಗೊಂದಲ ಸೃಷ್ಠಿಸುತ್ತಿದೆ.ಈ ಗೊಂದಲಕ್ಕೆ ಸರ್ಕಾರ ಉತ್ತರ ನೀಡುತ್ತಿಲ್ಲ. ಮಕ್ಕಳ ಭವಿಷ್ಯದ ವಿಚಾರದಲ್ಲಿ ಪಠ್ಯ ಪುಸ್ತಕ ಪ್ರಮುಖವಾಗಿದೆ. ಕೆಲವಡೆ ಪಠ್ಯ ಪುಸ್ತಕ ಇನ್ನೂ ವಿತರಣೆಯಾಗಿಲ್ಲ.ಈ ಬಗ್ಗೆ ಸ್ಪಷ್ಟತೆಯನ್ನು ಸರ್ಕಾರ ಕೊಡಬೇಕು. ಪುಸ್ತಕ ಈಗಾಗಲೇ ಹೊರಗೆ ಬಂದಾಗಿದೆ. ನಾರಾಯಣ ಗುರು, ಕೈಯಾರ ಕಿಂಞಣ್ಣ ರೈಗಳನ್ನು ಸರ್ಕಾರ ಕಡೆಗಣಿಸಿದೆ.

ಮಂಗಳೂರಿನ ಸೇವಾಂಜಲಿ ಟ್ರಸ್ಟ್ ಹಿಂದೆ ಯಾರಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಬೆಂಕಿಗೆ ತುಪ್ಪ ಹಚ್ಚುವ ಕೆಲಸ ಬಿಜೆಪಿ ಮಾಡಿದೆ.ಉದ್ದೇಶ ಪೂರ್ವಕವಾಗಿ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮ ವನ್ನು ಆಯೋಜಿಸಿದ್ದಾರೆ.ಇದಕ್ಕೆ ಸ್ಥಳೀಯ ಶಾಸಕ, ಬಿಜೆಪಿ ನೇರ ಹೊಣೆಯಾಗಿದೆ. ರೋಹಿತ್ ಚಕ್ರವರ್ತಿ ತಾಕತ್ ಇದ್ದರೆ ಬರಬೇಕು.ನಾವೂ ಸನ್ಮಾನ ಮಾಡುವ ವ್ಯವಸ್ಥೆ ಮಾಡಿದ್ದೆವು. ಚಕ್ರತೀರ್ಥ ಎದೆಗಾರಿಕೆ ಇದ್ದರೆ ಮಂಗಳೂರಿಗೆ ಬರಬೇಕಿತ್ತು.


ರೋಹಿತ್ ಚಕ್ರತೀರ್ಥ ಕುವೆಂಪು, ನಾಡಗೀತೆಗೆ ಅವಮಾನ ಮಾಡಿದ ವ್ಯಕ್ತಿ. ರೋಹಿತ್ ಚಕ್ರತೀರ್ಥ ಇತಿಹಾಸ ತಿಳಿಯದ ಆಯೋಗ್ಯ. ಕಯ್ಯಾರ ಕಿಂಞಣ್ಣ ರೈಯವರ ಸಾಧನೆಯನ್ನು ಹತ್ತಿಕ್ಕಿಸುವ ಕಾರ್ಯ ನಡೆಯಿತ್ತಿದೆ.ಈ ಬಗ್ಗೆ ಬಿಜೆಪಿ ಸರ್ಕಾರ ಕ್ಷಮಾಯಚನೆ ಮಾಡಬೇಕು.ಕೂಡಲೇ ಸರ್ಕಾರ ನಾರಾಯಣ‌ ಗುರುಗಳ ಜೀವನ ಚರಿತ್ರೆ,ಕಯ್ಯಾರ ಕಿಂಞಣ್ಣ ರೈಗಳ ಪಠ್ಯ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ಬಂಟ ಸಮುದಾಯಕ್ಕೆ ಅನ್ಯಾಯ

ಸರ್ಕಾರ ಬಂಟ ಸಮುದಾಯಕ್ಕೆ ಅನ್ಯಾಯ

ಸರ್ಕಾರ ಬಂಟ ಸಮುದಾಯಕ್ಕೆ ಮಾಡಿದ ಅನ್ಯಾಯ ಮಾಡಿದೆ. ಬಿಜೆಪಿಯ ಸೋಕಾಲ್ಡ್ ಸೇವಾಂಜಲಿ ಟ್ರಸ್ಟ್ ಇನ್ನೊಮ್ಮೆ ರೋಹಿತ್ ಚಕ್ರತೀರ್ಥರನ್ನು ಮಂಗಳೂರಿಗೆ ಕರೆಯಲಿ. ನಾವು ಸರಿಯಾದ ಸನ್ಮಾನ ಮಾಡಿ ಕಳುಹಿಸುತ್ತೇವೆ. ಅವರಿಗೆ ತಾಕತ್ ಇದ್ದಾರೆ ಕಾರ್ಯಕ್ರಮ ಮಾಡಲಿ. ನಾವೂ ಅದೇ ಮಾದರಿಯಲ್ಲಿ ಉತ್ತರ ನೀಡುತ್ತೇವೆ ಅಂತಾ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿದ್ದಾರೆ. ರೋಹಿತ್ ಗೆ ಬಿಜೆಪಿ ಇನ್ನೊಮ್ಮೆ ಸನ್ಮಾನ ಮಾಡಲಿ ನಾವೂ ಸೇರಿಕೊಳ್ಳುತ್ತೇವೆ ಅಂತಾ ಮಂಗಳೂರಿನಲ್ಲಿ ದ.ಕ‌ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಿನ್ನೆಲೆ ಕಾರ್ಯಕ್ರಮ ರದ್ದು

ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಿನ್ನೆಲೆ ಕಾರ್ಯಕ್ರಮ ರದ್ದು

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದ ಸಾಹಿತಿ, ಚಿಂತಕ ರೋಹಿತ್ ಚಕ್ರತೀರ್ಥಗೆ ಮಂಗಳೂರಿನಲ್ಲಿ ನಡೆಯಬೇಕಾಗಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮ ರದ್ದು ಮಾಡಲಾಗಿದೆ. ಪ್ರತಿಭಟನೆ ನಡೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವ ಕಾರಣದಿಂದ ಕಾರ್ಯಕ್ರಮ ರದ್ದು ‌ಮಾಡಿರುವುದಾಗಿ ಆಯೋಜಕರು ಮಾಹಿತಿ ನೀಡಿದ್ದಾರೆ.

"ರೋಹಿತ್ ಚಕ್ರತೀರ್ಥರನ್ನು ಕರೆಸಿ ಸನ್ಮಾನ ಮಾಡುವುದಕ್ಕೆ ನಮ್ಮದೇನು ತಕರಾರು ಇಲ್ಲ. ಆದರೆ ನಾಡಿನ ಖ್ಯಾತನಾಮರೂ, ಮಹಾನ್ ಚೇತನರುಗಳೂ ಆಗಿರುವ ಕಯ್ಯಾರ ಕಿಂಞಣ್ಣ ರೈ, ಬಸವಣ್ಣ, ಕುವೆಂಪು, ನಾರಾಯಣ ಗುರುಗಳಿಗೆ ಅವಮಾನ ಎಸಗಿರುವವರಿಗೆ ನಾಗರಿಕ ಸನ್ಮಾನ ಮಾಡುತ್ತಿರುವುದು ಅಷ್ಟೊಂದು ಸರಿಯಲ್ಲ. ಅದರಲ್ಲಿಯೂ ಸಭಾಧ್ಯಕ್ಷತೆಯನ್ನು ಮಂಗಳೂರು ವಿವಿಯ ಕುಲಪತಿಗಳಾದ ಮಾನ್ಯ ಯಡಪಡಿತ್ತಾಯರು ವಹಿಸಲಿರುವುದು ಎಷ್ಟು ಸರಿ?," ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದರು.

English summary
Dakshin kannada district Congress president Harish Kumar and Congress youth leader Mithun Rai challenges, Rohith Chakratheertha and said if Rohith Chakratheertha courageous let him come Mangaluru. We will feliciate him .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X